ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ವ್ಯವಸ್ಥೆಯನ್ನೇ ಬದಲಿಸಬೇಕಂತೆ! ಟ್ರಂಪ್ ತಮ್ಮನಿಂದ ಹೊಸ ಕಿರಿಕ್!

|
Google Oneindia Kannada News

ವಿವಾದಗಳ ವಿಚಾರದಲ್ಲಿ ಟ್ರಂಪ್ ಬೇರೆಯಲ್ಲ ಬೋಲ್ಸೊನಾರೋ ಬೇರೆಯಲ್ಲ. ಇಬ್ಬರೂ ಸದಾ ಒಂದಲ್ಲ ಒಂದು ವಿವಾದ ಮಾಡಿಕೊಳ್ಳುತ್ತಾ, ಸದಾ ಟ್ರೆಂಡ್‌ನಲ್ಲಿ ಇರ್ತಾರೆ. ಬ್ರೆಜಿಲ್ ಅಧ್ಯಕ್ಷ ಈಗ ಮತ್ತದೇ ಚಾಳಿ ತೋರಿಸಿದ್ದು ತಮ್ಮ ಬೆಂಬಲಿಗರ ಮೂಲಕ ಬ್ರೆಜಿಲ್ ಚುನಾವಣಾ ವ್ಯವಸ್ಥೆಯ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಬ್ರೆಜಿಲ್‌ನ ಬಲಪಂಥೀಯ ನಾಯಕನಾಗಿ ಗುರುತಿಸಿಕೊಂಡ ಬೋಲ್ಸೊನಾರೋ 2022ರ ಚುನಾವಣೆಯಲ್ಲಿ ಸೋಲುವುದು ಪಕ್ಕಾ ಎನ್ನುತ್ತಿವೆ ಸಮೀಕ್ಷೆಗಳು.

ಏಕೆಂದರೆ ಬ್ರೆಜಿಲ್‌ನಲ್ಲಿ ಭ್ರಷ್ಟಾಚಾರ ಹಾಗೂ 'ಕೊರೊನಾ' ಸಂದರ್ಭದಲ್ಲಿ ಉಂಟಾದ ಸಾವು-ನೋವಿಗೆ ಜೈರ್ ಬೋಲ್ಸೊನಾರೋ ಆಡಳಿತ ವೈಫಲ್ಯವೇ ಕಾರಣ ಎಂಬ ಆರೋಪವಿದೆ. ಈ ತಪ್ಪಿಗೆ ಹಾಲಿ ಅಧ್ಯಕ್ಷ ಬೋಲ್ಸೊನಾರೋ ಮುಂದಿನ ಚುನಾವಣೆಯಲ್ಲಿ ಬೆಲೆ ತೆರುವುದು ಪಕ್ಕಾ ಎನ್ನುತ್ತಿವೆ ಸಮೀಕ್ಷೆಗಳು. ಆದ್ರೆ ಈ ಹೊತ್ತಲ್ಲೇ ವರಸೆ ಬದಲಿಸಿರುವ ಬೋಲ್ಸೊನಾರೋ ಬ್ರೆಜಿಲ್‌ನಲ್ಲಿ 20 ವರ್ಷಗಳಿಂದ ಜಾರಿಯಲ್ಲಿರುವ ಚುನಾವಣಾ ವ್ಯವಸ್ಥೆಯನ್ನೇ ಬದಲಿಸಲು ಆಗ್ರಹಿಸಿದ್ದಾರೆ.

'ಮಾಡಿದ ಪಾಪ ಸುಮ್ನೆ ಬಿಡುತ್ತಾ?' ಬ್ರೆಜಿಲ್ ಅಧ್ಯಕ್ಷರಿಗೆ ಶಾಪ ಹಾಕಿದ್ದು ಯಾರು?'ಮಾಡಿದ ಪಾಪ ಸುಮ್ನೆ ಬಿಡುತ್ತಾ?' ಬ್ರೆಜಿಲ್ ಅಧ್ಯಕ್ಷರಿಗೆ ಶಾಪ ಹಾಕಿದ್ದು ಯಾರು?

ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆ ಬೇಡ, ಇದರಿಂದ ನನಗೆ ಮೋಸವಾಗುತ್ತೆ ಎಂದು ಥೇಟ್ ಟ್ರಂಪ್ ರೀತಿಯೇ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಬೋಲ್ಸೊನಾರೋ ಬೆಂಬಲಿಗರು ಬ್ರೆಜಿಲ್‌ನ ಬೀದಿಗಳಲ್ಲಿ ಹೋರಾಟ ಆರಂಭಿಸಿದ್ದು, ತಮ್ಮ ನಾಯಕನನ್ನ ಬೆಂಬಲಿಸಿದ್ದಾರೆ. ಈ ಬೆಳವಣಿಗೆಗಳು ಬ್ರೆಜಿಲ್‌ನಲ್ಲಿ ಹೊಸ ಸಂಘರ್ಷದ ಆತಂಕ ಸೃಷ್ಟಿಸಿದೆ.

 Bolsonaro supporters started protests to change Brazil’s voting system

ಸಾವಿರಾರು ಜನರಿಂದ ಹೋರಾಟ
ಬ್ರೆಜಿಲ್‌ ಸ್ಮಗ್ಲರ್‌ಗಳ ಸ್ವರ್ಗ, ಬ್ರೆಜಿಲ್‌ ರೌಡಿಗಳ ಅಡ್ಡೆ ಹೀಗೆ ಹಲವು ಕೆಟ್ಟ ಹೆಸರುಗಳನ್ನ ಪಡೆದಿದೆ ಪ್ರಕೃತಿಯ ತವರು. ಇಷ್ಟೆಲ್ಲಾ ಸಮಸ್ಯೆ ಇದ್ರೂ ಬೋಲ್ಸೊನಾರೋ ತಮ್ಮ ಆಡಳಿತದ ಅವಧಿಯಲ್ಲಿ ಏನನ್ನೂ ಸರಿಪಡಿಸಿಲ್ಲ. ಬದಲಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಹೋಗಿದೆ ಎಂಬ ಆರೋಪವಿದೆ. ಜನರು ಕೂಡ ಬೋಲ್ಸೊನಾರೋ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇಂತಹ ಹೊತ್ತಲ್ಲಿ ಚುನಾವಣೆ ವ್ಯವಸ್ಥೆ ಮೇಲೆ ಆರೋಪ ಮಾಡಿ, ತೇಪೆ ಹಾಕಲು ಬೋಲ್ಸೊನಾರೋ ಯತ್ನಿಸಿದ್ರಾ? ಎಂಬ ಡೌಟ್ ಮೂಡಿದೆ. ಅಮೆರಿಕದಲ್ಲಿ ಟ್ರಂಪ್ ಮಾಡಿದ ರೀತಿ, ಬ್ರೆಜಿಲ್‌ನಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಬ್ರೆಜಿಲ್‌ನ ರಾಜಧಾನಿ ಬ್ರೆಸಿಲಿಯಾ ಸೇರಿದಂತೆ 'ರಿಯೋ' ಮತ್ತಿತರೆಡೆ ಭಾರಿ ಹೋರಾಟ ಆರಂಭವಾಗಿದ್ದು, ಹಿಂಸೆಯ ಭೀತಿ ಆವರಿಸಿದೆ.

ಆರೋಪ ನಿರಾಕರಿಸಿದ ಆಯೋಗ
ಬ್ರೆಜಿಲ್ ಚುನಾವಣಾ ವ್ಯವಸ್ಥೆ ಬಗ್ಗೆ ಜೈರ್ ಬೋಲ್ಸೊನಾರೋ ಮಾಡಿರುವ ಆರೋಪವನ್ನು ಅಲ್ಲಿನ ಚುನಾವಣಾ ಆಯೋಗ ನಿರಾಕರಿಸಿದೆ. ಬೋಲ್ಸೊನಾರೋ ಮಾಡಿದ ಆರೋಪದಲ್ಲಿ ಸತ್ಯವಿಲ್ಲ. 2018ರಲ್ಲಿ ಮೋಸ ನಡೆದಿತ್ತು ಎಂದು ಜೈರ್ ಬೋಲ್ಸೊನಾರೋ ಹೇಳುತ್ತಿರುವುಕ್ಕೆ ಪುರಾವೆ ಇಲ್ಲ. ಬ್ರೆಜಿಲ್ ಚುನಾವಣಾ ವ್ಯವಸ್ಥೆ ಸರಿಯಾಗೇ ಇದೆ ಎಂದು ಬ್ರೆಜಿಲ್ ಚುನಾವಣಾ ಆಯೋಗ ಸಮರ್ಥನೆಯನ್ನೂ ನೀಡಿದೆ. ಆದ್ರೆ ಇದನ್ನ ಇಷ್ಟಕ್ಕೇ ನಿಲ್ಲಿಸಲು ಇಷ್ಟವಿಲ್ಲದ ಬೋಲ್ಸೊನಾರೋ ಬೆಂಬಲಿಗರು ಹೋರಾಟ ಆರಂಭಿಸಿದ್ದಾರೆ. ಕೊರೊನಾ ಕಂಟಕದ ನಡುವೆಯೇ ಹೋರಾಟ ಮತ್ತು ಹಿಂಸಾಚಾರವನ್ನ ಎದುರಿಸಬೇಕಾದ ಪರಿಸ್ಥಿತಿ ಬ್ರೆಜಿಲ್‌ನಲ್ಲಿ ಸೃಷ್ಟಿಯಾಗಿದೆ.

ಬೋಲ್ಸೊನಾರೋ ವಿರುದ್ಧ ಆಕ್ರೋಶ
ಬ್ರೆಜಿಲ್‌ನಲ್ಲಿ ಬೋಲ್ಸೊನಾರೋ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ವಿವಾದ ಸೃಷ್ಟಿಸುತ್ತಿದ್ದಾರೆ. ಕೊರೊನಾ ನಿಯಂತ್ರಣದ ವಿಚಾರದಲ್ಲಿ ಈಗಾಗಲೇ ಬ್ರೆಜಿಲ್‌ ಸಂಸತ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲೇ ಅಮೆಜಾನ್ ಮೂಲ ನಿವಾಸಿಗಳು ಜೈರ್ ಬೋಲ್ಸೊನಾರೋ ಸರ್ಕಾರದ ವಿರುದ್ಧ ರೊಚ್ಚಿಗೆದ್ದು ಹೋರಾಟ ಆರಂಭಿಸಿದ್ದಾರೆ. ಇದರ ನಡುವೆ ಪರಿಸರ ಸಂರಕ್ಷಣೆ ವಿಚಾರದಲ್ಲೂ ಬೋಲ್ಸೊನಾರೋ ಸರ್ಕಾರದ ಈ ಅಸಡ್ಡೆ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದ್ಯಾವುದಕ್ಕೂ ಜೈರ್ ಬೋಲ್ಸೊನಾರೋ ಕೇರ್ ಮಾಡುವ ಲಕ್ಷಣಗಳೇ ಕಾಣುತ್ತಿಲ್ಲ. ಇಷ್ಟೆಲ್ಲದರ ನಡುವೆ ಚುನಾವಣಾ ವ್ಯವಸ್ಥೆಯ ಮೇಲೆ ಬೋಲ್ಸೊನಾರೋ ಅನುಮಾನ ವ್ಯಕ್ತಪಡಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

English summary
After Bolsonaro demanding to change Brazil’s voting system, president’s supporters started protests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X