ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಮಾಧ್ಯಮಗಳಲ್ಲಿ ಕೊವ್ಯಾಕ್ಸಿನ್ 'ತಲೆಬರಹ'ದ ಜೊತೆ ಬ್ರೆಜಿಲ್ ಅಧ್ಯಕ್ಷರ 'ಹಣೆಬರಹ'!

|
Google Oneindia Kannada News

ನವದೆಹಲಿ, ಜೂನ್ 28: ಬ್ರೆಜಿಲ್ ಮಾಧ್ಯಮಗಳಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯದ್ದೇ ಸುದ್ದಿ. ದೊಡ್ಡ ದೊಡ್ಡ ಅಕ್ಷರಗಳಲ್ಲಿ ಕೊವ್ಯಾಕ್ಸಿನ್ ತಲೆಬರಹದ ಜೊತೆಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೋ ಹಣೆಬರಹವು ಪ್ರಕಟವಾಗುತ್ತಿದೆ. "ಕೊವ್ಯಾಕ್ಸಿನ್ ಗೇಟ್" ಎಂಬ ಟ್ರೆಂಡಿಂಗ್ ವಿಷಯವು ಮಾಧ್ಯಮಗಳ ಪಾಲಿಗೆ ಮೃಷ್ಟಾನ್ನ ಭೋಜನವಾಗುತ್ತದೆ.

ಕೊವ್ಯಾಕ್ಸಿನ್ ಲಸಿಕೆ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ವರದಿಗಳು ಅಧ್ಯಕ್ಷ ಜೈಪ್ ಬೋಲ್ಸನಾರೋಗೆ ತೀವ್ರ ಸಂಕಷ್ಟವನ್ನು ತಂದೊಡ್ಡಿದೆ. ಅನುಮೋದನೆ ಪ್ರಮಾಣ ಶೇ.23ಕ್ಕೆ ಕುಸಿದರೆ, ಶೇ.50ರಷ್ಟು ಜನರು ತಿರಸ್ಕರಿಸಿದ್ದಾರೆ.

ಗುರುವಾರ ನಡೆದ ಅಭಿಪ್ರಾಯ ಸಮೀಕ್ಷೆಯಲ್ಲಿ ಜೈರ್ ಬೋಲ್ಸನಾರೋ ಭಾರಿ ಹಿನ್ನಡೆ ಅನುಭವಿಸಿದ್ದಾರೆ. ಜೂನ್ 24ರಂದು ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ ನಡೆದರೆ ಮಾಜಿ ಅಧ್ಯಕ್ಷ ಲುಲಾ-ದಾ-ಸಿಲ್ವಾ ವಿರುದ್ಧ ಜೈರ್ ಬೋಲ್ಸನಾರೋ ಸೋಲು ಅನುಭವಿಸಲಿದ್ದಾರೆ.

ಭಾರತದಿಂದ ದುಬಾರಿ ದುಡ್ಡಿನ ಕೊವ್ಯಾಕ್ಸಿನ್ ಲಸಿಕೆ ಖರೀದಿಸಿದ್ದೇಕೆ ಬ್ರೆಜಿಲ್ ಅಧ್ಯಕ್ಷ?ಭಾರತದಿಂದ ದುಬಾರಿ ದುಡ್ಡಿನ ಕೊವ್ಯಾಕ್ಸಿನ್ ಲಸಿಕೆ ಖರೀದಿಸಿದ್ದೇಕೆ ಬ್ರೆಜಿಲ್ ಅಧ್ಯಕ್ಷ?

ಹಗರಣದ ಬಗ್ಗೆ ಮಾಹಿತಿ ಜಗತ್ಜಾಹೀರಾಗುತ್ತಿದ್ದಂತೆ ಜನರು ಆಕ್ರೋಶಗೊಂಡಿದ್ದಾರೆ. ಹಗರಣದ ಬಗ್ಗೆ ಪ್ರಶ್ನಿಸಲು ತೆರಳಿದ ವರದಿಗಾರರ ಮೇಲೆ ಸಾರ್ವಜನಿಕರು ಕೂಗಾಡುತ್ತಿದ್ದು, ತುಂಬಿದ ಜನರ ನಡುವೆ ಮಕ್ಕಳ ಮುಖಕ್ಕೆ ಹಾಕಿರುವ ಮಾಸ್ಕ್ ಕಿತ್ತೆಸೆಯುತ್ತಿದ್ದಾರೆ. ಇದು ಪ್ರಸ್ತುತ ಕೊವ್ಯಾಕ್ಸಿನ್ ಲಸಿಕೆ ಖರೀದಿ ಹಗರಣದಿಂದ ಬ್ರೆಜಿಲ್ ನಲ್ಲಿ ಸೃಷ್ಟಿಯಾಗಿರುವ ಕಥೆ. ಬ್ರೆಜಿಲ್ ಅಧ್ಯಕ್ಷರು ಮತ್ತು ಕೊವ್ಯಾಕ್ಸಿನ್ ಲಸಿಕೆ ಖರೀದಿ ಒಪ್ಪಂದದ ಹಗರಣ ಆರೋಪದ ಕುರಿತು ಮುಂದುವರಿದ ಭಾಗವನ್ನು ಇಲ್ಲಿ ಓದಿ.

ಕೊವ್ಯಾಕ್ಸಿನ್ ಲಸಿಕೆ ಕುರಿತು ಜಾಗತಿಕ ಮಟ್ಟದಲ್ಲಿ ತೊಂದರೆ

ಕೊವ್ಯಾಕ್ಸಿನ್ ಲಸಿಕೆ ಕುರಿತು ಜಾಗತಿಕ ಮಟ್ಟದಲ್ಲಿ ತೊಂದರೆ

ಬ್ರೆಜಿಲ್ ಜೊತೆಗೆ ಭಾರತ್ ಬಯೋಟೆಕ್ ಮಾಡಿಕೊಂಡಿರುವ ಕೊವ್ಯಾಕ್ಸಿನ್ ಲಸಿಕೆ ಖರೀದಿ ಒಪ್ಪಂದದ ಸುತ್ತಲೂ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪದಿಂದ ಭಾರತೀಯ ಮೂಲದ ಕಂಪನಿಗೂ ತೀವ್ರ ತೊಂದರೆ ಆಗಲಿದೆ. ಜಾಗತಿಕ ಮಟ್ಟದಲ್ಲಿ ಕೊವ್ಯಾಕ್ಸಿನ್ ಲಸಿಕೆ ಪೂರೈಸಲು ಪ್ರಯತ್ನಿಸುತ್ತಿರುವ ಕಂಪನಿಗೆ ಹಿನ್ನೆಡೆಯಾಗುವ ಅಪಾಯವಿದೆ. ಭಾರತೀಯ ಕಂಪನಿಗೆ ಸಂಬಂಧಿಸಿದ ಬ್ರೆಜಿಲ್ ಪ್ರೆಸಿಸಾ ಮೆಡಿಕಾಮೆಂಟಸ್ ಹಾಗೂ ಸಿಂಗಾಪೂರ್ ಮೂಲದ ಮಾಡಿಸನ್ ಬಯೋಟೆಕ್ ಅಂಗಸಂಸ್ಥೆಗಳ ಕುರಿತು ತನಿಖೆ ನಡೆಸಲಾಗುತ್ತಿದೆ. ಬ್ರೆಜಿಲಿಯನ್ ಕಂಪನಿಯ ಮುಖ್ಯಸ್ಥ ಫ್ಯಾಬಿಯಾನೋ ಮ್ಯಾಕ್ಸಿಮಿಯಾನೋ ಮುಂದಿನ ವಾರ ಸಂಸದೀಯ ಆಯೋಗದ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ.

ಕೊವ್ಯಾಕ್ಸಿನ್ ಹಗರಣಕ್ಕೆ ಹೊಸ ತಿರುವು ಸಿಗಲು ಕಾರಣ?

ಕೊವ್ಯಾಕ್ಸಿನ್ ಹಗರಣಕ್ಕೆ ಹೊಸ ತಿರುವು ಸಿಗಲು ಕಾರಣ?

ಜಗತ್ತಿನಲ್ಲೇ ಮೂರನೇ ಅತಿ ದುಬಾರಿ ಲಸಿಕೆ ಎನಿಸಿರುವ ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆ ಖರೀದಿ ಮುಂದಾಗಿರುವುದು ಏಕೆ ಎಂಬ ಬಗ್ಗೆಯಷ್ಟೇ ಆರಂಭದಲ್ಲಿ ಬ್ರೆಜಿಲ್ ಜನಪ್ರತಿನಿಧಿಗಳು ಪ್ರಶ್ನೆ ಮಾಡುತ್ತಿದ್ದರು. ಆದರೆ ಮಂಗಳವಾರ 'ಓ ಗ್ಲೋಬೋ' ಸುದ್ದಿ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಮಾಡಿಸನ್ ಬಯೋಟೆಕ್ ಜೊತೆ ಯಾವುದೇ ಸರಕುಗೆ ಸಂಬಂಧಿಸಿದಂತೆ ಬ್ರೆಜಿಲ್ ಸರ್ಕಾರ ಒಪ್ಪಂದ ಮಾಡಿಕೊಂಡಿಲ್ಲ ಎಂದು ರಿಕಾರ್ಡೋ ಮಿರಿಂಡಾ ಸ್ಪಷ್ಟಪಡಿಸುತ್ತಿದ್ದಂತೆ ಇಡೀ ಪ್ರಕರಣಕ್ಕೆ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿತು. ಕಡಲಾಚೆಗಿನ ಸಂಸ್ಥೆ ಮೂಲಕ ಲಸಿಕೆ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ತೆರಿಗೆ ವಂಚಿಸುವ ಹಗರಣ ನಡೆದಿದೆಯಾ ಎಂಬ ಅನುಮಾನಗಳು ಹುಟ್ಟಿಕೊಳ್ಳುವುದಕ್ಕೆ ಆರಂಭಿಸಿತು.

ಜಗತ್ತಿನ 3ನೇ ದುಬಾರಿ ಕೊರೊನಾವೈರಸ್ ಲಸಿಕೆ ಕೊವ್ಯಾಕ್ಸಿನ್!ಜಗತ್ತಿನ 3ನೇ ದುಬಾರಿ ಕೊರೊನಾವೈರಸ್ ಲಸಿಕೆ ಕೊವ್ಯಾಕ್ಸಿನ್!

ಮಿರಿಂಡಾ ಬ್ರದರ್ಸ್ ವಿರುದ್ಧ ಸರ್ಕಾರ ಕಾರ್ಯದರ್ಶಿ ವಾಗ್ದಾಳಿ

ಮಿರಿಂಡಾ ಬ್ರದರ್ಸ್ ವಿರುದ್ಧ ಸರ್ಕಾರ ಕಾರ್ಯದರ್ಶಿ ವಾಗ್ದಾಳಿ

"ಸರಕು ಪಟ್ಟಿಯನ್ನು ಹಾಳು ಮಾಡುವುದರ ಮೂಲಕ ಮಿರಿಂಡಾ ಸಹೋದರರು ಅಧ್ಯಕ್ಷ ಜೈರ್ ಬೋಲ್ಸನಾರೋ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ," ಎಂದು ಬ್ರೆಜಿಲ್ ಅಧ್ಯಕ್ಷೀಯ ಕಾರ್ಯದರ್ಶಿ ಓನಿಕ್ಸ್ ಲೋರೆಂಜೋನಿ ತಿಳಿಸಿದ್ದಾರೆ. ಅಲ್ಲದೇ, "ಈ ಒಪ್ಪಂದದಲ್ಲಿ ಯಾವುದೇ ಮೂರನೇ ಕಂಪನಿಯು ಭಾಗಿಯಾಗಿಲ್ಲ. ಸಿಂಗಾಪೂರ್್ನಲ್ಲಿ ಇರುವ ಮಾಡಿಸನ್ ಬಯೋಟೆಕ್ ಎನ್ನುವುದು ಭಾರತ್ ಬಯೋಟೆಕ್ ಕಂಪನಿಯ ಅಂಗಸಂಸ್ಥೆಯಾಗಿದೆ. ಭಾರತ್ ಬಯೋಟೆಕ್ ಸಂಸ್ಥೆ ಜೊತೆಗೆ ನಡೆಸಿದ ಎಲ್ಲ ಒಪ್ಪಂದಗಳು ಜಾಗತಿಕ ಮಟ್ಟದ ವಹಿವಾಟು ಆಗಿದೆ," ಎಂದು ಲೋರೆಂಜೋನಿ ಹೇಳಿದ್ದಾರೆ.

2022ರವರೆಗೂ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಗುವುದೇ ಅನುಮಾನ!2022ರವರೆಗೂ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ಸಿಗುವುದೇ ಅನುಮಾನ!

ಘೋಷಣೆ ಪತ್ರದ ಬಗ್ಗೆ ಉಲ್ಲೇಖಿಸಿದ ಲೋರೆಂಜೋನಿ

ಘೋಷಣೆ ಪತ್ರದ ಬಗ್ಗೆ ಉಲ್ಲೇಖಿಸಿದ ಲೋರೆಂಜೋನಿ

ಕೊವ್ಯಾಕ್ಸಿನ್ ಲಸಿಕೆಗೆ ಸಂಬಂಧಿಸಿದಂತೆ ಭಾರತೀಯ ಕಂಪನಿ ಬರೆದಿರುವ ಘೋಷಣೆ ಪತ್ರದ ಬಗ್ಗೆ ಬ್ರೆಜಿಲ್ ಅಧ್ಯಕ್ಷೀಯ ಕಾರ್ಯದರ್ಶಿ ಓನಿಕ್ಸ್ ಲೋರೆಂಜೋನಿ ಉಲ್ಲೇಖಿಸಿದರು. ಈ ಪತ್ರದಲ್ಲಿ ಎರಡು ಸಂಸ್ಥೆಗಳಿಂದ ಲಸಿಕೆ ಸರಬರಾಜಿನ ಬಗ್ಗೆ ಒಪ್ಪಂದ ಮಾಡಲಾಗುತ್ತದೆ. ಮಾಡಿಸನ್ ಬಯೋಟೆಕ್ ಕಂಪನಿಯಲ್ಲಿ ಸಂಗ್ರಹಿಸಿದ ಸರಕನ್ನು ಪಾಲುದಾರರು ಸ್ವೀಕರಿಸುವಂತೆ ಕೋರಲಾಗಿತ್ತು. ಆದರೆ, ದಿನಾಂಕವನ್ನು ಉಲ್ಲೇಖಿಸದ ಪತ್ರದಲ್ಲಿ ಸಿಂಗಾಪೂರ್ ಕಂಪನಿಯು ಶಾಶ್ವತ ಅಥವಾ ತಾತ್ಕಾಲಿಕ ಅಂಗಸಂಸ್ಥೆಯಾಗಿದೆ ಅಥವಾ ಎರಡು ಕಂಪನಿಗಳ ಮಧ್ಯೆ ಯಾವಾಗ ಒಪ್ಪಂದ ನಡೆದಿದೆ ಎಂಬ ಬಗ್ಗೆ ಯಾವುದೇ ಉಲ್ಲೇಖ ಇರಲಿಲ್ಲ. ಮಾಡಿಸನ್ ಬಯೋಟೆಕ್ ಸಂಸ್ಥೆಯು ಒಪ್ಪಂದದ ಭಾಗವಾಗಿದೆಯೇ, ಹಾಗಿದ್ದಲ್ಲಿ ಆ ಕಂಪನಿಯ ಮಾಲೀಕರು ಯಾರು, ಈ ಕಂಪನಿ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಸ್ವತಃ ಅಧ್ಯಕ್ಷೀಯ ಕಾರ್ಯದರ್ಶಿ ಓನಿಕ್ಸ್ ಲೋರೆಂಜೋನಿ ಉತ್ತರಿಸುವ ಗೋಜಿಗೆ ಹೋಗಲಿಲ್ಲ.

ಮಾಡಿಸನ್ ಬಯೋಟೆಕ್, ಭಾರತ್ ಬಯೋಟೆಕ್ ನಡುವೆ ನಂಟು?

ಮಾಡಿಸನ್ ಬಯೋಟೆಕ್, ಭಾರತ್ ಬಯೋಟೆಕ್ ನಡುವೆ ನಂಟು?

ಕಡಲಾಚೆ ಕಂಪನಿ ಜೊತೆಗಿನ ಒಪ್ಪಂದ ಹಾಗೂ ಮಾಡಿಸನ್ ಬಯೋಟೆಕ್ ಕುರಿತು ವಿವಾದಕ್ಕೆ ಸಂಬಂಧಿಸಿದಂತೆ ಬ್ರೆಜಿಲಿಯನ್ ವೆಬ್ ಸೈಟ್ UOL ವರದಿಯೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಭಾರತ್ ಬಯೋಟೆಕ್ ಹಾಗೂ ಮಾಡಿಸನ್ ಬಯೋಟೆಕ್ ನಡುವಿನ ನಂಟಿನ ಬಗ್ಗೆ ಉಲ್ಲೇಖಿಸಲಾಗಿದೆ. ಆರೋಪಕ್ಕೆ ಗುರಿಯಾಗಿರುವ ಮಾಡಿಸನ್ ಬಯೋಟೆಕ್ ಸಂಸ್ಥೆಯು ಅಧಿಕೃತವಾಗಿ ನೋಂದಣಿಯಾಗಿದೆ. ಮಾಡಿಸನ್ ಬಯೋಟೆಕ್ ಸಂಸ್ಥೆಯಲ್ಲಿ ಮೂವರು ನಿರ್ದೇಶಕರಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ್ ಬಯೋಟೆಕ್ ಸಂಸ್ಥಾಪಕ ಮತ್ತು ನಿರ್ದೇಶಕ ಕೃಷ್ಣಮೂರ್ತಿ ಎಲ್ಲಾ ಅದರಲ್ಲಿ ಒಬ್ಬರಾಗಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ಹಾಗೂ ಸಂಶೋಧನೆಯಲ್ಲಿ ಭಾಗವಹಿಸಿದ್ದ ಯುಎಸ್ ಪ್ರಜೆ ರಾಚೆಲ್ ಎಲ್ಲಾ ಹಾಗೂ ಸಿಂಗಾಪೂರ್ ಪ್ರಜೆ ಆಗಿರುವ ಕೃಷ್ಣಮೂರ್ತಿ ಸೇಕರ್ ಕೂಡ ಮಾಡಿಸನ್ ಬಯೋಟೆಕ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ ಎಂದು ವರದಿಯಾಗಿದೆ.

ಮಾಡಿಸನ್ ಬಯೋಟೆಕ್ ಸಂಸ್ಥೆ ಆರಂಭದ ಇತಿಹಾಸ

ಮಾಡಿಸನ್ ಬಯೋಟೆಕ್ ಸಂಸ್ಥೆ ಆರಂಭದ ಇತಿಹಾಸ

ಕಂಪನಿಯು ಕಡಲಾಚೆಯ ಘಟಕವನ್ನು ಹೊಂದುವುದು ಕಾನೂನುಬಾಹಿರವೇನೂ ಇಲ್ಲ. ಆದರೆ ಮಾಡಿಸನ್ ಬಯೋಟೆಕ್ ರಚನೆ ಮತ್ತು ಕಾರ್ಯವೈಖರಿ ಕುರಿತಾದ ವಿವರಗಳ ಕುರಿತಾದ ಗೊಂದಲಗಳು ಬ್ರೆಜಿಲ್ ತನಿಖೆಯಲ್ಲಿ ಅನುಮಾನ ಹುಟ್ಟಿಕೊಳ್ಳುವಂತೆ ಮಾಡಿದೆ. ಸಿಂಗಾಪೂರ್ ಲೆಕ್ಕಪತ್ರ ನಿರ್ವಹಣೆ ಮತ್ತು ಕಾರ್ಪೊರೇಟ್ ನಿಯಂತ್ರಣ ಪ್ರಾಧಿಕಾರದ ಪ್ರಕಾರ, 2020ರ ಫೆಬ್ರವರಿ 14ರಂದು ಆರಂಭಿಕ ಹಂತದಲ್ಲಿ 1,000 ಸಿಂಗಾಪೂರ್ ಡಾಲರ್ ಹೂಡಿಕೆಯೊಂದಿಗೆ ಕಂಪನಿ ಆರಂಭಿಸಲಾಗಿತ್ತು. ಅಂದು ಭಾರತ್ ಬಯೋಟೆಕ್ ಸಂಸ್ಥೆಗೆ ಸೇರಿದ ಭಾರತೀಯ ಪಶುವೈದ್ಯಕೀಯ ಪ್ರಯೋಗಾಲಯ ಕಂಪನಿ ಜೊತೆಗೆ ಪಾಲುದಾರಿಕೆಯನ್ನು ಹೊಂದಲಾಗಿತ್ತು.

ಸಿಂಗಾಪೂರ್ 31ನೇ ಕಂಟೇನ್ಮೆಂಟ್ ರಸ್ತೆಯಲ್ಲಿ ಸ್ಪಾ ಏರಾ ಫಾರ್ಮಾ ಎಂಬ ಹೆಸರಿನ ಮತ್ತೊಂದು ಕಂಪನಿಯನ್ನು ನೋಂದಣಿ ಮಾಡಿಸಲಾಗಿತ್ತು. 2020ರ ನವೆಂಬರ್ 12ರಂದು ಮಾಡಿಸನ್ ಬಯೋಟೆಕ್ ಸಂಸ್ಥೆಯ ನಿರ್ದೇಶಕರಾಗಿ ನೇಮಕಗೊಂಡ ಕೃಷ್ಣಮೂರ್ತಿ ಸೇಕರ್, ಈ ಕಂಪನಿಯ ನಿರ್ದೇಶಕರಾದರು.

ವಿಶ್ವದ ದುಬಾರಿ ಲಸಿಕೆಯಲ್ಲಿ ಕೊವ್ಯಾಕ್ಸಿನ್ 3ನೇ ಸ್ಥಾನ

ವಿಶ್ವದ ದುಬಾರಿ ಲಸಿಕೆಯಲ್ಲಿ ಕೊವ್ಯಾಕ್ಸಿನ್ 3ನೇ ಸ್ಥಾನ

ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ದುಬಾರಿ ಎನಿಸಿರುವ ಕೊರೊನಾವೈರಸ್ ಲಸಿಕೆಯ ಪೈಕಿ ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕಯೂ ಸಹ ಒಂದಾಗಿದೆ. ಕೊವಿಶೀಲ್ಡ್ ಲಸಿಕೆಗಿಂತ ಎರಡು ಪಟ್ಟು ಹೆಚ್ಚು ಬೆಲೆಯನ್ನು ಹೊಂದಿದೆ. ವಿದೇಶಗಳಲ್ಲಿ ಫೈಜಸ್ ಕಂಪನಿಯ ಲಸಿಕೆಯಷ್ಟೇ ಹಣವನ್ನು ಭಾರತೀಯರು ಸ್ವದೇಶಿ ಲಸಿಕೆಗೆ ನೀಡಬೇಕಾಗಿದೆ. ವಿಶ್ವದ ದುಬಾರಿ ಲಸಿಕೆಗಳ ಪಟ್ಟಿಯಲ್ಲಿ ಕೊವ್ಯಾಕ್ಸಿನ್ ಮೂರನೇ ಸ್ಥಾನದಲ್ಲಿದೆ. ಚೀನಾದ ಸಿನೋಫಾರ್ಮಾ ಮೊದಲ ಸ್ಥಾನ ಹಾಗೂ ಅಮೆರಿಕಾದ ಫೈಜರ್ ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿವೆ.

ಭಾರತದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯುವ ಒಂದು ಡೋಸ್ ಕೊವಿಶೀಲ್ಡ್ ಲಸಿಕೆಗೆ 780 ರೂಪಾಯಿ, ರಷ್ಯಾದ ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,145 ರೂ. ಬೆಲೆ ನಿಗದಿಗೊಳಿಸಲಾಗಿದೆ. ಆದರೆ ಒಂದು ಡೋಸ್ ಕೊವ್ಯಾಕ್ಸಿನ್ ಲಸಿಕೆಗೆ ಸೇವಾ ಶುಲ್ಕ ಹಾಗೂ ಜಿಎಸ್ ಟಿ ಸೇರಿ 1,410 ರೂಪಾಯಿ ಆಗುತ್ತದೆ.

English summary
Bolsonaro Linked To Alleged Corruption In Buying Of Bharat Biotech's Covaxin; Trending In Country's Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X