ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೂ ಮುನ್ನ ಲಿಬರಲ್ ಪಾರ್ಟಿ ಸೇರ್ಪಡೆಗೊಂಡ ಬೋಲ್ಸೊನಾರೊ

|
Google Oneindia Kannada News

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಸೆಂಟ್ರಿಸ್ಟ್ ಲಿಬರಲ್ ಪಾರ್ಟಿ (ಪಾರ್ಟಿಡೊ ಲಿಬರಲ್) ಗೆ ಸೇರಲಿದ್ದಾರೆ ಎಂದು ಪಕ್ಷ ಅಧಿಕೃತ ಹೇಳಿಕೆ ಹೊರಡಿಸಿದೆ.

ಬೋಲ್ಸೊನಾರೊ ಲಿಬರಲ್ ಪಕ್ಷ ಸೇರುತ್ತಿರುವುದೇಕೆ?
ಬೋಲ್ಸೊನಾರೊ 2019 ರಲ್ಲಿ ತಮ್ಮ ಬಲಪಂಥೀಯ ಸಾಮಾಜಿಕ ಲಿಬರಲ್ ಪಕ್ಷವನ್ನು ತೊರೆದಿದ್ದರು, ಅವರನ್ನು ಅಧಿಕೃತ ರಾಜಕೀಯ ಸಂಬಂಧ ತೊರೆದಿದ್ದರು. ಬೋಲ್ಸೊನಾರೊ ಅವರು ಮರುಚುನಾವಣೆಗೆ ಸ್ಪರ್ಧಿಸಲು ಬಯಸಿದರೆ ಮತ್ತೆ ಪಕ್ಷವನ್ನು ಸೇರಬೇಕಾಗುತ್ತದೆ, ಸ್ವತಂತ್ರ ಅಭ್ಯರ್ಥಿಗಳಿಗೆ ಮತದಾನದಲ್ಲಿ ಕಾನೂನುಬದ್ಧವಾಗಿ ಅವಕಾಶವಿಲ್ಲ.

ಬಲಪಂಥೀಯ ಬ್ರೆಜಿಲಿಯನ್ ನಾಯಕ ಬೋಲ್ಸೊನಾರೊ ನವೆಂಬರ್ 22 ರಂದು ಬ್ರೆಸಿಲಿಯಾದಲ್ಲಿ ಲಿಬರಲ್ ಪಕ್ಷದ ಸದಸ್ಯತ್ವ ಪತ್ರಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ.

ಲಿಬರಲ್ ಪಕ್ಷವು "ಸೆಂಟ್ರಾವ್"(Centrao) ಎಂಬ ಪಕ್ಷಗಳ ಸ್ಥಾಪನೆಯ ಒಕ್ಕೂಟದ ಸದಸ್ಯರಾಗಿದ್ದಾರೆ. ಈ ಪಕ್ಷಗಳು ಬೋಲ್ಸೊನಾರೊಗೆ ಅಧಿಕಾರದಲ್ಲಿದ್ದಾಗ ಶಾಸನವನ್ನು ಅಂಗೀಕರಿಸಲು ಸಹಾಯ ಮಾಡಿವೆ ಮತ್ತು ಅವರನ್ನು ದೋಷಾರೋಪಣೆಯಿಂದ ರಕ್ಷಿಸಿವೆ.

Bolsonaro took office in 2019 on a conservative anti-corruption platform

ಲಿಬರಲ್ ಪಕ್ಷಕ್ಕೆ ಸೇರುವುದರ ಮೂಲಕ, ಬೋಲ್ಸನಾರೊ ಅವರ ರಾಜಕೀಯ ತಂತ್ರದಲ್ಲಿನ ಬದಲಾವಣೆಯನ್ನು ಗಮನಿಸಬಹುದು. 2018 ರಲ್ಲಿ ತನ್ನ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಮಯದಲ್ಲಿ ವ್ಯವಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೋಲ್ಸೊನಾರೊ ಈ ಹಿಂದೆ 2019 ರಲ್ಲಿ ಅಲೈಯನ್ಸ್ ಫಾರ್ ಬ್ರೆಜಿಲ್‌ನಲ್ಲಿ ತಮ್ಮದೇ ಆದ ಪಕ್ಷವನ್ನು ಪ್ರಾರಂಭಿಸಲು ಪ್ರಯತ್ನಿಸಿದರು, ಆದರೆ ನೋಂದಣಿಗೆ ಅಗತ್ಯವಾದ ಸಹಿಗಳನ್ನು ಸಂಗ್ರಹಿಸಲು ಅದು ವಿಫಲವಾಯಿತು.

'ಆಪರೇಷನ್ ಕಾರ್ ವಾಶ್' ನ್ಯಾಯಾಧೀಶರು ಅಧ್ಯಕ್ಷೀಯ ಚುನಾವಣೆಗೆ

ಏತನ್ಮಧ್ಯೆ, ಮಾಜಿ ನ್ಯಾಯಾಧೀಶ ಸೆರ್ಗಿಯೊ ಮೊರೊ ಅವರು ಬುಧವಾರ ರಾಜಕೀಯ ಪಕ್ಷವನ್ನು ಸೇರಿಕೊಂಡಿದ್ದರು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಸುಳಿವು ನೀಡಿದ್ದಾರೆ. ದೇಶದ "ಆಪರೇಷನ್ ಕಾರ್ ವಾಶ್" ಭ್ರಷ್ಟಾಚಾರ ತನಿಖೆಯನ್ನು ಮೇಲ್ವಿಚಾರಣೆ ಮಾಡಿದ ಮೊರೊ ಅವರು ಕೇಂದ್ರ-ಬಲ ಪೊಡೆಮೊಸ್ ಪಕ್ಷದ ಸದಸ್ಯರಾಗಿದ್ದಾರೆ.

'ಅಭಿವೃದ್ಧಿಶೀಲ ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮತ್ತು ಬಡತನವನ್ನು ನಿರ್ಮೂಲನೆ ಮಾಡುವ ಸಲುವಾಗಿ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿಯುವೆ,' ಎಂದು ಮೊರೊ ಹೇಳಿದರು.

ಮೊರೊ 2019 ರಲ್ಲಿ ಬೋಲ್ಸೊನಾರೊ ಅವರ ನ್ಯಾಯಾಂಗ ಇಲಾಖೆ ಸಚಿವರಾಗಿದ್ದರು, ಆದರೆ ನಂತರ ಅಧ್ಯಕ್ಷರೊಂದಿಗೆ ಜಗಳವಾಡಿಕೊಂಡು ತಮ್ಮ ಸ್ಥಾನವನ್ನು ತೊರೆದಿದ್ದರು.

"ಆಪರೇಷನ್ ಕಾರ್ ವಾಶ್" ನ ಚುಕ್ಕಾಣಿ ಹಿಡಿದಿದ್ದ ಸಮಯದಲ್ಲಿ, ಮೊರೊ ಮಾಜಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅಥವಾ ಲುಲಾ ವಿರುದ್ಧ 2017 ರಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿದರು, ಎಡಪಂಥೀಯ ವ್ಯಕ್ತಿಯನ್ನು 2018 ರಲ್ಲಿ ಜೈಲಿಗೆ ಕಳುಹಿಸಿದರು. ನಂತರ ಲೂಲಾ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಫೆಡರಲ್ ಕೋರ್ಟ್ ಮೋರೊ ಭ್ರಷ್ಟಾಚಾರದ ವಿಚಾರಣೆಯ ಮೇಲ್ವಿಚಾರಣೆಯಲ್ಲಿ ಪಕ್ಷಪಾತಿ ಎಂದುಪ ಪರಿಗಣಿಸಿದೆ.

2003 ರಿಂದ 2010 ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಲೂಲಾ ಅವರು 2022 ರ ಚುನಾವಣೆಯಲ್ಲಿ ಬೋಲ್ಸೊನಾರೊ ವಿರುದ್ಧ ಸ್ಪರ್ಧಿಸುವ ನಿರೀಕ್ಷೆಯಿದೆ. ಲೂಲಾ ಅವರ ಕೊರೊನಾವೈರಸ್ ಮತ್ತು ಆರ್ಥಿಕ ನೀತಿಗಳ ಬಗ್ಗೆ ಬೋಲ್ಸೊನಾರೊ ಅವರನ್ನು ದೂಷಿಸಿದ್ದಾರೆ ಮತ್ತು ಪ್ರಸ್ತುತ ಅಧ್ಯಕ್ಷರನ್ನು "ಮನೋರೋಗಿ" ಎಂದು ಜರೆದಿದ್ದಾರೆ.

ಇತ್ತೀಚಿನ ಸಮೀಕ್ಷೆಗಳು ಲೂಲಾ ಅಧ್ಯಕ್ಷೀಯ ಸಮರದಲ್ಲಿ ಬೋಲ್ಸೊನಾರೊ ಅವರನ್ನು ಸುಲಭವಾಗಿ ಸೋಲಿಸುತ್ತಾರೆ ಎಂದು ಸೂಚಿಸಿವೆ, ಮೊರೊ ಅವರಿಬ್ಬರ ಹಿಂದೆ ಹಿಂದುಳಿದಿದ್ದಾರೆ. ಬೋಲ್ಸೊನಾರೊ ಅವರು ಚುನಾವಣೆಯ ಅಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷ ಅಧ್ಯಕ್ಷ ಸ್ಥಾನವನ್ನು ಕಳೆದುಕೊಂಡರೆ ಅವರು ಶಾಂತಿಯುತವಾಗಿ ಸ್ಥಾನದಿಂದ ಕೆಳಗಿಳಿಯಬಾರದು ಎಂದು ನಿರ್ಧರಿಸಿದಂತೆ ಕಾಣುತ್ತಿದೆ. (Reuters, AFP, AP)

English summary
Brazilian President Jair Bolsonaro is required to join a political party to run for reelection. His decision to join the establishment Liberal Party suggests a shift in political strategy for the far-right leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X