ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಕೋಹರಾಮ್ ಮಹಿಳಾ ಆತ್ಮಹತ್ಯಾ ಬಾಂಬರ್ ಗಳ ದಾಳಿ; ಒಟ್ಟು 12 ಮಂದಿ ಸಾವು

|
Google Oneindia Kannada News

ಬೊಕೋಹರಾಮ್ ಉಗ್ರ ಸಂಘಟನೆಯ ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್ ಗಳು ದಾಳಿ ನಡೆಸಿ, ಹತ್ತು ನಾಗರಿಕರು ಸೇರಿದಂತೆ ಹನ್ನೆರಡು ಮಂದಿ ಸಾವನ್ನಪ್ಪಿದ ಘಟನೆ ಮಂಗಳವಾರ ನೈಜೀರಿಯಾದ ನೈಜರ್ ನಲ್ಲಿ ಸಂಭವಿಸಿದೆ ಎಂದು ಅಲ್ಲಿನ ಮೇಯರ್ ಮಾಹಿತಿ ನೀಡಿದ್ದಾರೆ. ಇಬ್ಬರು ಮಹಿಳೆಯರು ತಮ್ಮನ್ನು ಸ್ಫೋಟಿಸಿಕೊಂಡಿದ್ದಾರೆ ಮತ್ತು ಒಬ್ಬ ಬಂದೂಕುಧಾರಿ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾಗಿ ಬುಧವಾರ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಹತ್ತು ನಾಗರಿಕರು ಹಾಗೂ ಇಬ್ಬರು ಆತ್ಮಹತ್ಯಾ ಬಾಂಬರ್ ಗಳು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಏಳರಿಂದ ಎಂಟು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಬೊಕೋ ಹರಾಮ್ ಉಗ್ರ ಸಂಘಟನೆಯೇ ಕಾರಣ ಎನ್ನಲಾಗಿದೆ. ಒಬ್ಬ ಮಹಿಳಾ ಬಾಂಬರ್ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲೇ ಸ್ಫೋಟಿಸಿಕೊಂಡಿದ್ದರೆ, ಮತ್ತೊಬ್ಬ ಬಾಂಬರ್ ಪೊಲೀಸ್ ನಾಕಾಬಂದಿ ಹಾಗೂ ಟೌನ್ ಹಾಲ್ ಮಧ್ಯೆ ಸ್ಫೋಟಿಸಿಕೊಂಡಿದ್ದಾಗಿ ತಿಳಿದುಬಂದಿದೆ.

ಸ್ಥಳೀಯರೊಬ್ಬರು ಮಾಹಿತಿ ಪ್ರಕಾರ, ಹಲವಾರು ಮನೆಗಳು ಸುಟ್ಟುಹೋಗಿವೆ. ಪೊಲೀಸ್ ಕ್ಯಾಂಪ್ ನಲ್ಲಿದ್ದ ಗಾಯಾಳು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮತ್ತೊಬ್ಬ ಶಸ್ತ್ರಧಾರಿ ಬೊಕೋಹರಾಮ್ ಸದಸ್ಯ ಡೈಲೆರಮ್ ಜಿಲ್ಲೆಯಲ್ಲಿ ದಾಳಿ ನಡೆಸಿದ್ದು, ಸಾರ್ವಜನಿಕರನ್ನು ಕೊಂದಿದ್ದಾನೆ.

Boko Haram attack in eastern Niger a dozen people dead

ಕಳೆದ ಗುರುವಾರದಂದು ಕರಿಡಿ ಎಂಬ ಹಳ್ಳಿಯಲ್ಲಿ ಎಂಟು ಜನರನ್ನು ಕೊಲ್ಲಲಾಗಿತ್ತು. ಶನಿವಾರದಂದು ನಡೆದ ನಾಲ್ಕು ದಾಳಿಯಲ್ಲಿ ಹದಿನಾಲ್ಕು ಮಂದಿ ಸಾವನ್ನಪ್ಪಿದ್ದರು. ಫೆಬ್ರವರಿ ಹದಿನಾರರಿಂದ ಈಚೆಗೆ ಹದಿನಾಲ್ಕು ಸೈನಿಕರನ್ನು ಕೊಲ್ಲಲಾಗಿದೆ. ಇನ್ನು ಸೈನ್ಯ ನೀಡುವ ಮಾಹಿತಿ ಪ್ರಕಾರ, ಕಳೆದ ವರ್ಷದ ಅಂತ್ಯಕ್ಕೆ ಇನ್ನೂರಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ. ಮಾರ್ಚ್ ಹನ್ನೆರಡರಂದು ಮೂವತ್ಮೂರು ಮಂದಿಯನ್ನು ಕೊಲ್ಲಲಾಗಿದೆ.

ಸೇನೆ ತಪ್ಪಿನಿಂದಾಗಿ ನೈಜೀರಿಯಾದಲ್ಲಿ 100ಕ್ಕೂ ಹೆಚ್ಚು ನಿರಾಶ್ರಿತರ ಹತ್ಯೆಸೇನೆ ತಪ್ಪಿನಿಂದಾಗಿ ನೈಜೀರಿಯಾದಲ್ಲಿ 100ಕ್ಕೂ ಹೆಚ್ಚು ನಿರಾಶ್ರಿತರ ಹತ್ಯೆ

ಹತ್ತು ವರ್ಷಗಳ ಹಿಂದೆ ಈಶಾನ್ಯ ನೈಜೀರಿಯಾದಲ್ಲಿ ಬೊಕೋಹರಾಮ್ ಕಾಲಿಟ್ಟ ನಂತರ ಅಂದಾಜು ಇಪ್ಪತ್ತೇಳು ಸಾವಿರ ಜನ ಸಾವನ್ನಪ್ಪಿದ್ದಾರೆ. ಇಪ್ಪತ್ತು ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ.

English summary
10 people were killed along with two suicide bombers in a coordinated attack late on march 26 by Boko Haram jihadists on a town in eastern Niger, the local mayor said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X