• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2011ರ ಜಪಾನ್ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಅವಶೇಷ ಪತ್ತೆ

|

ಟೋಕಿಯೋ, ಮಾರ್ಚ್ 05: 2011ರಲ್ಲಿ ಜಪಾನ್ ನಲ್ಲಿ ಸಂಭವಿಸಿದ್ದ ಭೀಕರ ಸುನಾಮಿಯಲ್ಲಿ ನಾಪತ್ತೆಯಾಗಿದ್ದ ಮಹಿಳೆಯ ಅವಶೇಷ ಈಗ ಪತ್ತೆಯಾಗಿದೆ. ಅಂದರೆ ಸುಮಾರು 10 ವರ್ಷಗಳ ಬಳಿಕ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.2011ರ ಸುನಾಮಿಯಲ್ಲಿ 2,500 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿದೆ.

ಈ ಸುನಾಮಿಯಲ್ಲಿ ಹಲವು ಕುಟುಂಬಗಳು ತಮ್ಮ ಪ್ರೀತಿ ಪಾತ್ರರರನ್ನು ಕಳೆದುಕೊಂಡಿದ್ದಾರೆ, ಅವರಿಂದ ಇನ್ನೂ ಕಳೆದು ಹೋದವರ ನೆನಪಲ್ಲೆ ಕಾಲ ಕಳೆಯುತ್ತಿದ್ದಾರೆ. ತಮ್ಮ ತಾಯಿಯ ಅಸ್ಥಿ ಹುಡುಕಿ ಕೊಟ್ಟಿದ್ದಕ್ಕಾಗಿ ಮಹಿಳೆಯ ಪುತ್ರ ಧನ್ಯವಾದ ಅರ್ಪಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ 3 ಬಾರಿ ಭೂಕಂಪ, ಕಡಲ ತೀರಕ್ಕೆ ಬಂದೆರಗಿದ ಸುನಾಮಿ ನ್ಯೂಜಿಲೆಂಡ್‌ನಲ್ಲಿ 3 ಬಾರಿ ಭೂಕಂಪ, ಕಡಲ ತೀರಕ್ಕೆ ಬಂದೆರಗಿದ ಸುನಾಮಿ

ಮಿಯಾಗಿಯ ಈಶಾನ್ಯ ಕಡಲತೀರದಲ್ಲಿ ಫೆಬ್ರವರಿ 17 ರಂದು ತಲೆಬುರುಡೆ ಸೇರಿದಂತೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

Body Of Missing Woman In Japan 2011 Tsunami Identified Decade On

2011ರ ಮಾರ್ಚ್ 11ರಂದು ನಾಪತ್ತೆಯಾಗಿದ್ದ ನಾಟ್ಸುಕೋ ಒಕ್ಯುಹಾಮಾ ಎಂಬ ಮಹಿಳೆಯ ಅಸ್ಥಿ ಪಂಜರ ಇದಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಮಾರ್ಚ್ 04 ರಿಂದ ಸರಣಿ ಭೂಕಂಪಗಳು ಸಂಭವಿಸುತ್ತಿವೆ. ಇದೀಗ ಕಡಲ ತೀರಕ್ಕೆ ಸುನಾಮಿ ಬಂದಪ್ಪಳಿಸಿದೆ.

ಮೂರು ಬಾರಿ ಒಂದೇ ಜಾಗದಲ್ಲಿ ಭೂಕಂಪ ಸಂಭವಿಸಿದೆ. ಮಾಧ್ಯಮಗಳ ವರದಿ ಪ್ರಕಾರ, 8.1 ತೀವ್ರತೆಯ ಭೂಕಂಪದಿಂದ ಉದ್ಭವಿಸಿದ ಸುನಾಮಿ ಸುಮಾರು 10 ಅಡಿ ಎತ್ತರ ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ.

ನ್ಯೂಜಿಲೆಂಡ್ ದೇಶದ ಪೂರ್ವಭಾಗದಲ್ಲಿರುವ ನಾರ್ತ್ ಐಲೆಂಡ್ ದ್ವೀಪದ ಬಳಿ ಒಂದಾದ ಮೇಲೊಂದು ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ.

English summary
The remains of a woman who went missing in the devastating 2011 Japan tsunami have been found and identified, police said Friday, days before the 10th anniversary of the disaster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X