ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ?

|
Google Oneindia Kannada News

ಕೊವಿಡ್ 19 ರೋಗಿಗಳ ಸಾವಿಗೆ ರಕ್ತ ಹೆಪ್ಪುಗಟ್ಟುವಿಕೆಯೇ ಪ್ರಮುಖ ಕಾರಣವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನು ಕಾಡುತ್ತಿದೆ.

ಕೊವಿಡ್ 19, ಸಾರ್ಸ್ ಕೋವ್ -2 ಕೂಡ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ. ಇದು ಥ್ರಾಂಬಸ್ ಕಾಯಿಲೆಗೆ ಕಾರಣವಾಗಬಹುದು. ಯಾವುದೇ ಗಾಯವಾದಾಗ ರಕ್ತ ಹೆಪ್ಪುಗಟ್ಟುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.

ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿ

ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಥ್ರಾಂಬಸ್ ಎಂದು ಕರೆಯಲಾಗುತ್ತದೆ. ಇದು ರಕ್ತನಾಳವನ್ನು ಮುಚ್ಚಿ ರಕ್ತದ ಹರಿಯುವಿಕೆಯನ್ನು ತಡೆಯುತ್ತದೆ. ಏನೇ ಆದರೂ ನಾವು ಅಂದುಕೊಂಡಿದ್ದಕ್ಕಿಂತ ಕೊರೊನಾ ಸೋಂಕು ಹೆಚ್ಚು ಅಪಾಯಕಾರಿಯಾಗಿದೆ.

ರಕ್ತ ಹೆಪ್ಪುಗಟ್ಟುವಿಕೆಯಿಂದ ಆಗುವ ಅನನುಕೂಲತೆ ಏನು?

ರಕ್ತ ಹೆಪ್ಪುಗಟ್ಟುವಿಕೆಯಿಂದ ಆಗುವ ಅನನುಕೂಲತೆ ಏನು?

ರಕ್ತ ಹೆಪ್ಪುಗಟ್ಟುವಿಕೆಯಿಂದ ಹೃದಯಕ್ಕೆ ರಕ್ತ ಸಂಚಾರ ಸ್ಥಗಿತಗೊಳ್ಳುತ್ತದೆ. ಹೃದಯಕ್ಕೆ ಸಂಚಾರವಿಲ್ಲದಿದ್ದರೆ ದೇಹದ ಬೇರೆಲ್ಲಾ ಭಾಗಗಳಿಗೆ ರಕ್ತ ಸಂಚಾರ ನಿಂತು ಹೋಗುತ್ತದೆ ಇದರಿಂದ ಹೃದಯಾಘಾತ, ಪಾರ್ಶ್ವವಾಯು ಜೊತೆಗೆ ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ.

ಥ್ರಾಂಬಸ್ ದೇಹದ ಬೇರೆ ಭಾಗಗಳಿಗೆ ರಕ್ತ ಸಂಚರಿಸಲು ಬಿಡುವುದಿಲ್ಲ

ಥ್ರಾಂಬಸ್ ದೇಹದ ಬೇರೆ ಭಾಗಗಳಿಗೆ ರಕ್ತ ಸಂಚರಿಸಲು ಬಿಡುವುದಿಲ್ಲ

ಥ್ರಾಂಬಸ್ ದೇಹದ ಬೇರೆ ಭಾಗಗಳಿಗೆ ರಕ್ತ ಸಂಚಾರಿಸುವುದಕ್ಕೆ ತಡೆ ಹಾಕುತ್ತದೆ. ಇದರಿಂದಾಗಿ ಶ್ವಾಸಕೋಶ, ಮೆದುಳು, ಹೃದಯ, ಕಿಡ್ನಿಗೆ ರಕ್ತ ಸಂಚಾರವಿಲ್ಲದೆ ಯಾವಾಗ ಬೇಕಾದರೂ ವೈಫಲ್ಯ ಕಾಣಿಸಿಕೊಳ್ಳಬಹುದು. ಪ್ರಾಣಕ್ಕೂ ಅಪಾಯ ಹೆಚ್ಚು.

ವೈರಲ್ ಇನ್‌ಫೆಕ್ಷನ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣ

ವೈರಲ್ ಇನ್‌ಫೆಕ್ಷನ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣ

ವೈರಲ್ ಇನ್‌ಫೆಕ್ಷನ್ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಬಹುದು, ಒಂದೊಮ್ಮೆ ರಕ್ತ ಹೆಪ್ಪುಗಟ್ಟಿದರೆ ದೇಹದಲ್ಲಿ ಡಿ ಪ್ರೋಟಿನ್ ಅಂಶವೆಷ್ಟು ಇದೆ ಎಂಬುದನ್ನು ಮೊದಲು ನೋಡುತ್ತಾರೆ.ಫೈಬ್ರಿನೊಲಿಸಿಸ್ ಎಂಬ ಪ್ರಕ್ರಿಯೆಯಲ್ಲಿ ಪ್ಲಾಸ್ಮಿನ್ ಎಂಬ ಕಿಣ್ವವು ರಕ್ತ ಹೆಪ್ಪುಗಟ್ಟುವಿಕೆಯನ್ನು ಕುಗ್ಗಿಸಿ ನಂತರ ರಕ್ತದಲ್ಲಿ ಡಿ-ಡೈಮರ್ ಉತ್ಪತ್ತಿ ಮಾಡುತ್ತದೆ. ರಕ್ತದಲ್ಲಿನ ಡಿ-ಡೈಮರ್ ಥ್ರಂಬೋಸಿಸ್ ಮತ್ತು ಎಂಬಾಲಿಸಮ್‌ನ ಸೂಚನೆಯಾಗಿದೆ.

ಕೊವಿಡ್ 19 ಶ್ವಾಸಕೋಶ ಸೋಂಕಿಗಿಂತ ಅಪಾಯ

ಕೊವಿಡ್ 19 ಶ್ವಾಸಕೋಶ ಸೋಂಕಿಗಿಂತ ಅಪಾಯ

ಕೊವಿಡ್ 19 ಶ್ವಾಸಕೋಶದ ಸೋಂಕಿಗಿಂತ ಹೆಚ್ಚು ಅಪಾಯಕಾರಿಯಾಗಿದೆ. ಥ್ರಂಬೋಸಿಸ್ ಹಾಗೂ ಎಂಬೋಲಿಸಮ್‌ ಬೆಳವಣಿಗೆಯಿಂದ ಶ್ವಾಸಕೋಶ ಮತ್ತು ಇತರೆ ಅಂಗಗಳ ರಕ್ತನಾಳಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸ್ಪಷ್ಟವಾಗಿದೆ.

ಫ್ರಾನ್ಸ್‌ನಲ್ಲಿ 100 ರಲ್ಲಿ 20 ರೋಗಿಗಳು ಅಪಾಯದಲ್ಲಿದ್ದಾರೆ

ಫ್ರಾನ್ಸ್‌ನಲ್ಲಿ 100 ರಲ್ಲಿ 20 ರೋಗಿಗಳು ಅಪಾಯದಲ್ಲಿದ್ದಾರೆ

ಫ್ರಾಮ್ಸ್‌ನ ಆಸ್ಪತ್ರೆಯಲ್ಲಿರುವ 100 ಕೊವಿಡ್ 19 ರೋಗಿಗಳಲ್ಲಿ 20ರಷ್ಟು ರೋಗಿಗಳು ಅಪಾಯದಲ್ಲಿದ್ದಾರೆ, ಅವರ ರಕ್ತದಲ್ಲಿ ಪ್ಲೇಟ್‌ಲೆಟ್‌ ಕಡಿಮೆ ಇವೆ, ಹಾಗೆಯೇ ಡಿ-ಡೈಮರ್ ಪ್ರಮಾಣ ಹೆಚ್ಚಿದೆ. ಅವರನ್ನು ಐಸಿಯುನಲ್ಲಿರಿಸಲಾಗಿದೆ. ಫ್ರಾನ್ಸ್‌ನಲ್ಲಿ ಮತ್ತೊಂದು ವರದಿಯಲ್ಲಿ ಕೂಡ ಶೇ.100 ರಲ್ಲಿ ಶೇ.30 ರಷ್ಟು ಮಂದಿ ರಕ್ತಹೆಪ್ಪುಗಟ್ಟುವಿಕೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Coronavirus Disease 2019 (Covid-19), a viral respiratory illness caused by the severe acute respiratory syndrome coronavirus 2 (SARS-CoV-2), may predispose patients to thrombotic disease, both in the venous and arterial circulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X