ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಲಾಹೋರ್ ನಲ್ಲಿ ಸ್ಫೋಟ: ಮೃತರ ಸಂಖ್ಯೆ 8ಕ್ಕೆ ಏರಿಕೆ

|
Google Oneindia Kannada News

ಲಾಹೋರ್, ಮೇ 08: ಪಾಕಿಸ್ತಾನದ ಲಾಹೋರ್ ನ ದಾತಾ ದರ್ಬಾರ್ ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಮೂವರು ಪೊಲೀಸರು ಮೃತರಾಗಿದ್ದಾರೆ. ಮೃತರಾದವರ ಒಟ್ಟು ಸಂಖ್ಯೆ ಎಂಟಕ್ಕೇರಿದೆ. ಮುಸ್ಲಿಮರ ಪವಿತ್ರ ರಂಜಾನ್ ಮಾಸದಲ್ಲೇ ಈ ದಾಳಿ ನಡೆದಿದೆ.

ಹನ್ನೊಂದನೇ ಶತಮಾನದ ಪ್ರಸಿದ್ಧ ಸೂಫಿ ಸಂತರ ತಾಣವಾದ ದಾತಾ ದರ್ಬಾರ್ ನಲ್ಲಿ ಈ ಸ್ಫೋಟ ಸಂಭವಿಸಿದ್ದು, ಸ್ಫೋಟದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಜಮ್ಮು-ಕಾಶ್ಮೀರ ಸೇನಾ ಶಿಬಿರದಲ್ಲಿ ನಿಗೂಢ ಸ್ಫೋಟಜಮ್ಮು-ಕಾಶ್ಮೀರ ಸೇನಾ ಶಿಬಿರದಲ್ಲಿ ನಿಗೂಢ ಸ್ಫೋಟ

Blast outside Data Darbar in Lahore, Pakistan

ಇದೇ ಸ್ಥಳದಲ್ಲಿ 2010 ರಲ್ಲಿ ನಡೆದಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40 ಜನರು ಮೃತರಾಗಿದ್ದರು. ಬುಧವಾರ ನಡೆದ ದಾಳಿಯಲ್ಲಿ ಮೂವರು ಮೃತರಾಗಿದ್ದರೆ, 15 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ: 14 ಮಂದಿ ಬಲಿಪಾಕಿಸ್ತಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ: 14 ಮಂದಿ ಬಲಿ

"ಈ ಸ್ಫೋಟ ರಕ್ಷಣಾ ಸಿಬ್ಬಂದಿಯನ್ನು ಗುರಿಯಾಗಿಸಿ ನಡೆದ ಆತ್ಮಾಹುತಿ ಬಾಂಬ್ ದಾಳಿ ಇರಬಹುದು" ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿ ಮುಹಮ್ಮದ್ ಕಾಶಿಫ್ ಎಂಬುವವರು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಫೋಟದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಕಳೆದ ಏಪ್ರಿಲ್ ನಲ್ಲಿ ಪಾಕಿಸ್ತಾನ ಕ್ವೆಟ್ಟಾದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 14 ಮಂದಿ ಮೃತರಾಗಿದ್ದರು.

English summary
Blast outside Data Darbar in Lahore, Pakistan, hree police officials martyred in Lahore blast outside Data Darbar shrine, 18 people injured, Geo News sources told.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X