ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಗಾನಿಸ್ತಾನದ ಮಸೀದಿಯೊಳಗೆ ಬಾಂಬ್ ಸ್ಫೋಟ; ಕನಿಷ್ಠ 28 ಸಾವು

|
Google Oneindia Kannada News

ಕಾಬೂಲ್ (ಅಫ್ಗಾನಿಸ್ತಾನ), ಅಕ್ಟೋಬರ್ 18: ಅಫ್ಗಾನಿಸ್ತಾನದ ಮಸೀದಿಯೊಂದರಲ್ಲಿ ಶುಕ್ರವಾರ ಪ್ರಾರ್ಥನೆ ವೇಳೆ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಇಪ್ಪತ್ತೆಂಟು ಮಂದಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಅಫ್ಗಾನಿಸ್ತಾನದಲ್ಲಿ 'ಅಸಹನೀಯ' ಮಟ್ಟಕ್ಕೆ ಹಿಂಸಾಚಾರ ತಲುಪಿದೆ ಎಂದು ವಿಶ್ವಸಂಸ್ಥೆಯು ಹೇಳಿದ ಮರು ದಿನ ಈ ಅನಾಹುತ ಸಂಭವಿಸಿದೆ.

ಕಾಬೂಲ್ : ಮದುವೆ ಛತ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ, 63 ಸಾವುಕಾಬೂಲ್ : ಮದುವೆ ಛತ್ರದಲ್ಲಿ ಪ್ರಬಲ ಬಾಂಬ್ ಸ್ಫೋಟ, 63 ಸಾವು

ಪೂರ್ವ ನಂಗರ್ ಹಾರ್ ಪ್ರಾಂತ್ಯದಲ್ಲಿ ಈ ಘಟನೆ ಸಂಭವಿಸಿದೆ. ಬಾಂಬ್ ಸ್ಫೋಟಕ್ಕೆ ಮಸೀದಿಯ ಛಾವಣಿ ಕುಸಿದಿದೆ. ಕನಿಷ್ಠ ಐವತ್ತೈದು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತ್ಯದ ರಾಜ್ಯಪಾಲರ ವಕ್ತಾರ ಅತಾವುಲ್ಲಾ ಖೋಗಯಾನಿ ಹೇಳಿದ್ದಾರೆ. ಮೃತರು ಎಲ್ಲರೂ 'ಪ್ರಾರ್ಥನೆ ಸಲ್ಲಿಸುತ್ತಿದ್ದವರು' ಎಂದು ತಿಳಿಸಿದ್ದಾರೆ.

Blast Inside Mosque During Friday Prayer In Afghanistan; At Least 28 People Died

ಆದರೆ, ಘಟನೆ ಸಂಭವಿಸಿದ ಹಸ್ಕ ಮೀನ ಜಿಲ್ಲೆಯ ವೈದ್ಯರು ಹೇಳುವ ಪ್ರಕಾರ, ಮೂವತ್ತೆರಡು ದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ. ಐವತ್ತು ಮಂದಿ ಗಾಯಾಳುಗಳನ್ನು ಕರೆತರಲಾಗಿದೆ. ಕಳೆದ ಜುಲೈನಿಂದ ಸೆಪ್ಟೆಂಬರ್ ತನಕ ಅಫ್ಗಾನಿಸ್ತಾನದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಮೂರು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

English summary
At least 28 people died by blast inside mosque in Afghanistan during Friday prayer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X