ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್; ತೆಹ್ರಾನ್‌ನಲ್ಲಿ ಪ್ರಬಲ ಸ್ಫೋಟ, 19 ಸಾವು

|
Google Oneindia Kannada News

ತೆಹ್ರಾನ್, ಜುಲೈ 01 : ಇರಾನ್ ರಾಜಧಾನಿ ತೆಹ್ರಾನ್‌ನಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು 19 ಜನರು ಮೃತಪಟ್ಟಿದ್ದಾರೆ. ಸ್ಫೋಟ ನಡೆದ ಕಟ್ಟಡದ ಅಕ್ಕ-ಪಕ್ಕದ ಕಟ್ಟಡಗಳಲ್ಲೂ ದಟ್ಟವಾದ ಕಪ್ಪು ಹೊಗೆ ಕಾಣಿಸಿಕೊಂಡಿದೆ.

ಉತ್ತರ ತೆಹ್ರಾನ್‌ನ ಕ್ಲಿನಿಕ್‌ವೊಂದರಲ್ಲಿ ಮಂಗಳವಾರ ರಾತ್ರಿ ಈ ಪ್ರಬಲ ಸ್ಫೋಟ ಸಂಭವಿಸಿದೆ. 19 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಸುದ್ದಿ ಸಂಸ್ಥೆ ಐಎಸ್‌ಎನ್‌ಎ ವರದಿ ಮಾಡಿದೆ.

ಕೊರೊನಾ ಸಂಕಷ್ಟ: ಇರಾನ್ ಹಿಂದಿಕ್ಕಿದ ಭಾರತ ಟಾಪ್ ಹತ್ತರೊಳಗೆ ಪ್ರವೇಶಕೊರೊನಾ ಸಂಕಷ್ಟ: ಇರಾನ್ ಹಿಂದಿಕ್ಕಿದ ಭಾರತ ಟಾಪ್ ಹತ್ತರೊಳಗೆ ಪ್ರವೇಶ

ಸ್ಫೋಟ ನಡೆದ ತಕ್ಷಣ ತೆಹ್ರಾನ್ ಅಗ್ನಿ ಶಾಮಕ ದಳಗಳು ಸ್ಥಳಕ್ಕೆ ಧಾವಿಸಿವೆ. ದಟ್ಟಹೊಗೆಯಿಂದಾಗಿ ಕಾರ್ಯಾಚರಣೆ ನಡೆಸಲು ಸುಮಾರು 2 ಗಂಟೆಗಳ ಕಾಲ ಬೇಕಾಯಿತು. ಕ್ಲಿನಿಕ್‌ನಲ್ಲಿದ್ದ ವೈದ್ಯಕೀಯ ರಸಾಯನಿಕಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.

 ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನಕ್ಕೆ ವಾರೆಂಟ್ ಹೊರಡಿಸಿದ ಇರಾನ್

blast

ಕ್ಲಿನಿಕ್ ಇರುವ ಕಟ್ಟಡದಲ್ಲಿ ಗ್ಯಾಸ್ ಸೋರಿಕೆಯಾದ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಮೃತಪಟ್ಟವರಲ್ಲಿ ಮಹಿಳೆಯರೇ ಅಧಿಕವಾಗಿದ್ದಾರೆ. ಹೊಗೆಯ ಕಾರಣ ಉಸಿರಾಡಲು ಕಷ್ಟವಾಗಿ ಹಲವು ಮೃತಪಟ್ಟಿದ್ದಾರೆ.

ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ,ಇರಾನ್ ಸಹಕಾರ ಕೇಳಿದ ಭಾರತ ಮರುಭೂಮಿ ಮಿಡತೆ ಅಪಾಯ: ಪಾಕಿಸ್ತಾನ,ಇರಾನ್ ಸಹಕಾರ ಕೇಳಿದ ಭಾರತ

ಈ ಸ್ಫೋಟ ನಡೆದ ಪ್ರದೇಶದಲ್ಲಿ 2015ರಲ್ಲಿ ಪರಮಾಣು ಸಂಶೋಧನೆ ನಡೆಯುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು. ಕೆಲವು ವರ್ಷಗಳ ಕಾಲ ಈ ಸ್ಥಳದ ಮೇಲೆ ನಿಗಾ ಇಡಲಾಗಿತ್ತು.

English summary
A powerful explosion at a clinic in northern Tehran of the Iran. 19 people killed and 6 more injured in the blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X