ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ, ನಾಲ್ವರು ಸಾವು

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 26; ಕರಾಚಿಯಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ.

ಕರಾಚಿಯಲ್ಲಿರುವ ಪಾಕಿಸ್ತಾನ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದ್ದ ವ್ಯಾನ್‌ ಮಂಗಳವಾರ ಮಧ್ಯಾಹ್ನ ಸ್ಫೋಟಗೊಂಡಿದೆ. ಪಾಕಿಸ್ತಾನ ಸೇನೆಯ ಯೋಧರು, ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ.

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ 30 ಮಂದಿ ಸಾವು ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ 30 ಮಂದಿ ಸಾವು

Blast In Karachi University Premises 4 Killed

ಸ್ಥಳೀಯ ವಾಹಿನಿಗಳ ಮಾಹಿತಿ ಪ್ರಕಾರ ಸ್ಫೋಟದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮೂವರು ಚೀನಾ ಮೂಲದವರು. ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಭಾರತವನ್ನು ಹಾಡಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್! ಭಾರತವನ್ನು ಹಾಡಿ ಹೊಗಳಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್!

ಮಧ್ಯಾಹ್ನ 1.52ರ ಸುಮಾರಿಗೆ ವಿಶ್ವವಿದ್ಯಾಲಯದ ಆವರಣ ಚೀನಾ ಭಾಷೆ ಕಲಿಕಾ ಕೇಂದ್ರ ಹೊರಗೆ ನಿಲ್ಲಿಸಲಾಗಿದ್ದ ವ್ಯಾನ್ ಸ್ಫೋಟಗೊಂಡಿದೆ. ಕಲಿಕಾ ಕೇಂದ್ರದ ನಿರ್ದೇಶಕರು ಸಹ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

 ಪಾಕಿಸ್ತಾನ ಇತಿಹಾಸದಲ್ಲಿ ಯಾವ ಪ್ರಧಾನಿಗೂ ಪೂರ್ಣಾವಧಿ ಅಧಿಕಾರ ಪೂರೈಸಲು ಸಾಧ್ಯವಾಗಿಲ್ಲವೇಕೆ? ಪಾಕಿಸ್ತಾನ ಇತಿಹಾಸದಲ್ಲಿ ಯಾವ ಪ್ರಧಾನಿಗೂ ಪೂರ್ಣಾವಧಿ ಅಧಿಕಾರ ಪೂರೈಸಲು ಸಾಧ್ಯವಾಗಿಲ್ಲವೇಕೆ?

ನಿರ್ದೇಶಕರ ಕಾರು ಚಾಲಕ ಪಾಕಿಸ್ತಾನ ಮೂಲದ ಖಲೀದ್ ಸಹ ಸಾವನ್ನಪ್ಪಿದ್ದಾರೆ. ವ್ಯಾನ್‌ನಲ್ಲಿ 7 ರಿಂದ 8 ಜನರು ಆಗಮಿಸಿದ್ದರು ಎಂಬ ಮಾಹಿತಿ ಇದೆ. ವ್ಯಾನ್ ವಿವಿಯ ಮುಖ್ಯ ಗೇಟ್ ಮೂಲಕವೇ ಕ್ಯಾಂಪಸ್‌ಗೆ ಆಗಮಿಸಿತ್ತು.

ಮೊದಲು ಗ್ಯಾಸ್ ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿದೆ ಎಂದು ಅಂದಾಜಿಸಲಾಗಿತ್ತು. ಪೊಲೀಸರು ಇದೊಂದು ಆತ್ಮಹತ್ಯಾ ದಾಳಿ ಎಂದು ಶಂಕಿಸಿದ್ದಾರೆ. ಬಾಂಬ್ ನಿಷ್ಕ್ರಿಯದಳದ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದೆ.

ಸ್ಫೋಟದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಕ್ಯಾಂಪಸ್ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುರ್ಖಾ ಧರಿಸಿ ಬಂದಿದ್ದ ಮಹಿಳೆಯ ಕೈವಾಡ ಸ್ಫೋಟದಲ್ಲಿ ಇದೆ ಎಂದು ಕರಾಚಿ ಪೊಲೀಸ್ ಆಯುಕ್ತರು ಶಂಕಿಸಿದ್ದಾರೆ, ಈ ಕುರಿತು ತನಿಖೆ ನಡೆಯುತ್ತಿದೆ.

English summary
Car explosion inside the premises of the university of Pakistan in Karachi. Four people were killed and several others were injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X