ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲೂಚಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ, 5 ಮಂದಿ ಸಾವು

|
Google Oneindia Kannada News

ಚಮನ್, ಆ. 10: ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಗಡಿ ಭಾಗದ ಪಟ್ಟಣವೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ.

ಅಫ್ಘಾನಿಸ್ತಾನ ಗಡಿ ಭಾಗದ ಚಮನ್ ಪಟ್ಟಣದ ಹಾಜಿ ನಿದಾ ಮಾರುಕಟ್ಟೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 5 ಮಂದಿ ಮೃತಪಟ್ಟಿದ್ದು, 10 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ಪೋಷಿತ 6500 ಉಗ್ರರು!

ಇಲ್ಲಿ ತನಕ ಈ ಸ್ಫೋಟದ ಹೊಣೆಯನ್ನು ಯಾವ ಉಗ್ರ ಸಂಘಟನೆಯೂ ಹೊತ್ತುಕೊಂಡಿಲ್ಲ. ಅಫ್ಘನ್ ಮೂಲದ ಉಗ್ರ ಸಂಘಟನೆಗಳು, ಪ್ರತ್ಯೇಕತಾವಾದಿಗಳು ಸೇರಿದಂತೆ ಹಲವು ಉಗ್ರ ಸಂಘಟನೆಗಳು ಈ ಪ್ರಾಂತ್ಯದಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿವೆ. ಜುಲೈ 21ರಂದು ತುರ್ಬಾತ್ ಬಜಾರ್ ನಲ್ಲಿ ನಡೆದ ಸ್ಫೋಟದಲ್ಲಿ ಓರ್ವ ಮೃತಪಟ್ಟು, 6 ಮಂದಿಗೆ ಗಾಯಗಳಾಗಿತ್ತು.

Blast in Haji Nida market of Chaman town in Balochistan

ಪಾಕ್ ಮೂಲದ ಉಗ್ರ ಸಂಘಟನೆಗಳಿಗೆ ಸೇರಿದ 6500ಕ್ಕೂ ಹೆಚ್ಚು ಉಗ್ರರು ಅಫ್ಘಾನ್‌ನಲ್ಲಿದ್ದಾರೆ ಅಂತಾ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಿಳಿಸಿದೆ. ಉಗ್ರರ ತವರು ಅಫ್ಘಾನಿಸ್ತಾನದಲ್ಲಿ ಹತ್ತಾರು ವರ್ಷಗಳಿಂದ ನೆಮ್ಮದಿಯೇ ಇಲ್ಲ. ಎಲ್ಲಿ, ಯಾವಾಗ ಬಾಂಬ್ ಸಿಡಿಯುತ್ತೋ ಎಂಬ ಆತಂಕದಲ್ಲಿಯೇ ದಿನದೂಡಬೇಕಿದೆ. ಜನ ಜೀವ ಕೈಯಲ್ಲಿ ಹಿಡಿದು ಹೊರಗೆ ಬರಬೇಕು. ಇಂತಹ ಸ್ಥಿತಿಯಲ್ಲಿ ಅಫ್ಘಾನ್‌ನಲ್ಲಿ ಶಾಂತಿ ಸ್ಥಾಪಿಸಲು ಬೇಕಾದ ಎಲ್ಲಾ ಪ್ರಯತ್ನಗಳು ನಡೆದಿವೆ.
English summary
A powerful bomb blast at a market in a Pakistani town bordering Afghanistan on Monday killed at least five people and injured 10 others, police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X