ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಮೆನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ: 26 ಮಂದಿ ಸಾವು

|
Google Oneindia Kannada News

ಆಡೆನ್, ಡಿಸೆಂಬರ್ 31: ಯೆಮೆನ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಪೋಟವಾಗಿದ್ದು, 26 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ,ಯೆಮೆನ್ ನ ಅಡೆನ್ ವಿಮಾನ ನಿಲ್ದಾಣದಲ್ಲಿಸ ಈ ಘಟನೆ ನಡೆದಿದ್ದು, ನೂತನವಾಗಿ ರಚನೆಯಾದ ಸರ್ಕಾರದ ಸಂಪುಟದ ಸದಸ್ಯರಿದ್ದ ವಿಮಾನವೊಂದು ಇಳಿದ ಕೆಲವೇ ಕ್ಷಣಗಳ ನಂತರ ನಿಲ್ದಾಣದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಕನಿಷ್ಟ 26 ಮಂದಿ ಸಾವನ್ನಪ್ಪಿದ್ದಾರೆ.

2020ರ ಬೈರುತ್‌ ಮಹಾ ಸ್ಫೋಟ, 3 ಲಕ್ಷ ನಿರಾಶ್ರಿತರ ಪರದಾಟ2020ರ ಬೈರುತ್‌ ಮಹಾ ಸ್ಫೋಟ, 3 ಲಕ್ಷ ನಿರಾಶ್ರಿತರ ಪರದಾಟ

ಸೌದಿ ಅರೇಬಿಯಾದಲ್ಲಿ ಯೆಮನ್‌ನ ರಾಷ್ಟ್ರಪತಿ ಅಬೆದ್ರಬ್ಬೊ ಮನ್ಸೂರ್‌ ಹಾದಿ ಅವರಿಂದ ಕೆಲ ದಿನಗಳ ಹಿಂದೆ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ಸಚಿವರು, ಏಡನ್‌ಗೆ ಆಗಮಿಸಿದ್ದರು.

Blast At Aden Airport Kills At Least 26, Wounds Over 50

ಇರಾನ್‌ ಬೆಂಬಲಿತ ಹುತಿ ಬಂಡುಕೋರರು ಈ ಹೇಡಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದು, ಸಚಿವರೆಲ್ಲರೂ ಸುರಕ್ಷಿತವಾಗಿದ್ದಾರೆ, 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ವೈದ್ಯಕೀಯ ಮತ್ತು ಸರ್ಕಾರಿ ಮೂಲಗಳು ತಿಳಿಸಿವೆ. ಅಂತೆಯೇ ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಬಹುದು ಎನ್ನಲಾಗಿದೆ.

ಸ್ಫೋಟದ ವೇಳೆ ವಿಮಾನದಿಂದ ಇಳಿದಿದ್ದ ಸರ್ಕಾರದ ಎಲ್ಲ ಸದಸ್ಯರೂ ಸುರಕ್ಷಿತವಾಗಿದ್ದಾರೆ' ಎಂದೂ ಮಾಹಿತಿ ನೀಡಿದರು.ಯೆಮನ್‌ನ ಪ್ರಧಾನಿ ಮೊಯೀನ್‌ ಅಬ್ದುಲ್‌ಮಲಿಕ್‌ ಸಯೀದ್‌ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಾಂಬ್ ಸ್ಫೋಟ ಹೇಡಿತನ ಕೃತ್ಯವಾಗಿದೆ.

ಹಿಂಸಾಚಾರವನ್ನು ಒಪ್ಪುವುದಿಲ್ಲ,. ಭಯೋತ್ಪಾದಕ ದಾಳಿ ಯೆಮೆನ್ ಮತ್ತು ಅದರ ಜನರ ವಿರುದ್ಧ ನಡೆಸಿದ ಯುದ್ಧದ ಒಂದು ಭಾಗವಾಗಿದೆ.

ತನಿಖೆ ಪ್ರಗತಿಯಲ್ಲಿದ್ದು, ಸ್ಫೋಟದ ಹಿಂದಿನ ಕೈವಾಡದ ಕುರಿತು ಶೀಘ್ರ ಬಹಿರಂಗವಾಗಲಿದೆ. ಹಾಗೆಯೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

English summary
At least 26 people were killed Wednesday as explosions rocked Yemen's Aden airport moments after a new unity government flew in, in what some officials charged was a "cowardly" attack by Iran-backed Huthi rebels.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X