ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲ್ಯಾಬ್ ಬೇಕಾಗಿಲ್ಲ: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಹೊಸ ಅಸ್ತ್ರ!

|
Google Oneindia Kannada News

ಜಿನೆವಾ, ಏಪ್ರಿಲ್.22: ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಹಚ್ಚುವುದಕ್ಕೆ ಪ್ರತಿಬಾರಿ ರಕ್ತ ಹಾಗೂ ಗಂಟಲು ದ್ರವ್ಯವನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಲ್ಯಾಬ್ ವರದಿ ನಂತರ ಸೋಂಕು ಇದೆಯೋ ಇಲ್ಲವೋ ಎಂಬುದು ದೃಢವಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವುದೇ ಇಲ್ಲ.

ಸ್ವಿಡ್ಜರ್ ಲ್ಯಾಂಡ್ ಇಟಿಎಚ್ ಜುರಿಚಿ ಪ್ರದೇಶದಲ್ಲಿ ಶಂಕಿತರಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಬಯೋಸೆನ್ಸಾರ್ ಬಳಸಿಯೇ ತಪಾಸಣೆ ನಡೆಸಲು ಅನುಕೂಲವಾಗುವಂತಾ ಹೊಸ ತಂತ್ರಜ್ಞಾನವನ್ನು ಸ್ವಿಡ್ಜರ್ ಲ್ಯಾಂಡ್ ನಲ್ಲಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ? ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?

ಕೊರೊನಾ ಸೋಂಕು ಪತ್ತೆ ಹಚ್ಚುವುದರ ಜೊತೆಗೆ ಗಾಳಿಯಲ್ಲಿ ಮಾರಕ ರೋಗಾಣು ಎಷ್ಟು ಅವಧಿಯವರೆಗೂ ಜೀವಂತವಾಗಿ ಇರಬಲ್ಲದು ಎಂಬುದನ್ನು ಈ ತಂತ್ರಜ್ಞಾನದಿಂದ ಪತ್ತೆ ಮಾಡಲು ಸಹಕಾರಿಯಾಗುತ್ತದೆ. ಉದಾಹರಣೆಗೆ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ ಹಾಗೂ ಆಸ್ಪತ್ರೆಗಳಲ್ಲಿ ಇದನ್ನು ಬಳಸಬಹುದು.

ಈವರೆಗೆ ಆಣ್ವಿಕ ವಿಧಾನದಲ್ಲಿ ಕೊರೊನಾ ವೈರಸ್ ಪತ್ತೆ

ಈವರೆಗೆ ಆಣ್ವಿಕ ವಿಧಾನದಲ್ಲಿ ಕೊರೊನಾ ವೈರಸ್ ಪತ್ತೆ

ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗನ್ನು ಹೋಗಲಾಡಿಸಲು ಜಾಗತಿಕ ಮಟ್ಟದಲ್ಲಿ ರಾಷ್ಟ್ರಗಳ ಪರಿತಪಿಸುತ್ತಿವೆ. ಇದರ ಮಧ್ಯೆ ಕೊರೊನಾ ವೈರಸ್ ಸೋಂಕು ತಪಾಸಣೆ ಸಂದರ್ಭ ಪ್ರಯೋಗಾಲಯಗಳಲ್ಲಿ ಆಣ್ವಿಕ ವಿಧಾನದಲ್ಲಿ ಸೋಂಕು ಪತ್ತೆ ಮಾಡಲಾಗುತ್ತಿತ್ತು. ಅಸಲಿಗೆ ಆಣ್ವಿಕ ವಿಧಾನ ಎಂದರೆ ವೈದ್ಯಕೀಯ ಭಾಷೆಯಲ್ಲಿ ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂದು ಕರೆಯಲಾಗುತ್ತದೆ. ಶಂಕಿತನ ಉಸಿರಾಟದ ಏರಿಳಿತ ಹಾಗೂ ಸೋಂಕಿತನ ಒಂದು ಸಣ್ಣ ರೋಗಾಣುವಿನಿಂದಲೇ ವ್ಯಕ್ತಿಯಲ್ಲಿ ಸೋಂಕು ಇದೆಯೋ ಇಲ್ಲವೋ ಎನ್ನುವನ್ನು ಪತ್ತೆ ಮಾಡಲಾಗುತ್ತದೆ

ಕೊರೊನಾ ಸೋಂಕು ಪತ್ತೆಗೆ ಬಯೋಸೆನ್ಸಾರ್

ಕೊರೊನಾ ಸೋಂಕು ಪತ್ತೆಗೆ ಬಯೋಸೆನ್ಸಾರ್

ವಿಶ್ವದ ಹಲವು ದೇಶದಲ್ಲಿ ಆಣ್ವಿಕ ವಿಧಾನದ ಮೂಲಕ ಸೋಂಕು ಪತ್ತೆ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಬಯೋಸೆನ್ಸಾರ್ ವಿಧಾನದಲ್ಲಿ ಕೊರೊನಾ ವೈರಸ್ ಸೋಂಕಿತರನ್ನು ಪತ್ತೆ ಮಾಡುವ ಹೊಸ ತಂತ್ರಜ್ಞಾನವನ್ನು ಸ್ವಿಸ್ ಫೆಡರಲ್ ಲ್ಯಾಬೋರೆಟರಿಸ್ ಫಾರ್ ಮೆಟಿರಿಯಲ್ ಸೈನ್ಸ್ ಆಂಡ್ ಟೆಕ್ನಾಲಜಿಯಲ್ಲಿ ಇರುವ ಜಿಂಗ್ ವಾಂಗ್ ತಂಡವು ಸಂಶೋಧಿಸಿದೆ. ಈ ವಿಧಾನದ ತಪಾಸಣೆಯು ಹೆಚ್ಚು ಸುರಕ್ಷಿತ ಹಾಗೂ ವಿಶ್ವಾಸಾರ್ಹ ಎಂದು ಹೇಳಲಾಗುತ್ತಿದೆ.

ಆರ್ಎನ್ಎ ಲಕ್ಷಣಗಳನ್ನು ಹೊಂದಿರುವ ಕೊರೊನಾ

ಆರ್ಎನ್ಎ ಲಕ್ಷಣಗಳನ್ನು ಹೊಂದಿರುವ ಕೊರೊನಾ

ನೊವೆಲ್ ಕೊರೊನಾ ವೈರಸ್ ನ್ನು ಆನ್ಎನ್ಎ ವೈರಸ್ ಎಂದು ಗುರುತಿಸಲಾಗಿದೆ. ಆರ್ಎನ್ಎ ಎಂದರೆ ವೈದ್ಯಕೀಯ ಭಾಷೆಯಲ್ಲಿ ವೈರಸ್ ಗಳ ಹುಟ್ಟಿಗೆ ಕಾರಣವಾಗುವ ಒಂದು ಅಂಶವಾಗಿದೆ. ಡಿಎನ್ಎ ಅಂಶವು ಮನುಷ್ಯರೂ ಸೇರಿದಂತೆ ಜೀವಿಗಳ ಹುಟ್ಟು ಮತ್ತು ಗುರುತು ಪತ್ತೆಗೆ ಸಾಕ್ಷಿಯಾಗಿರುತ್ತದೆ. ಅದೇ ರೀತಿ ಆರ್ಎನ್ಎ ಅಂಶವು ವೈರಸ್ ಹುಟ್ಟಿಗೆ ಕಾರಣವಾಗಿರುತ್ತವೆ. ಸೋಂಕಿತರಲ್ಲಿ ವೈರಸ್ ಗಳ ಪ್ರಮಾಣ ಹೆಚ್ಚಾಗುವುದಕ್ಕೆ ಈ ಆರ್ಎನ್ಎ ಕಾರಣ ಎಂದು ಹೇಳಲಾಗುತ್ತದೆ.

ಕೊವಿಡ್19 ಮತ್ತು ಸಾರ್ಸ್ ನಡುವೆ ಅಷ್ಟಾಗಿ ವ್ಯತ್ಯಾಸಗಳಿಲ್ಲ

ಕೊವಿಡ್19 ಮತ್ತು ಸಾರ್ಸ್ ನಡುವೆ ಅಷ್ಟಾಗಿ ವ್ಯತ್ಯಾಸಗಳಿಲ್ಲ

ನೊವೆಲ್ ಕೊರೊನಾ ವೈರಸ್ ನ್ನು ವೈದ್ಯಕೀಯ ಸಂಶೋಧಕರು ಸಾರ್ಸ್ ಕೊರೊನಾ ವೈರಸ್-2(SARS-CoV-2) ಎಂದು ಕರೆದಿದ್ದಾರೆ. 2003ರಲ್ಲಿ ಕಾಣಿಸಿಕೊಂಡ ಸಾರ್ಸ್ ಕೊರೊನಾ ವೈರಸ್(SARS-CoV) ಹಾಗೂ ಇಂದು ಜಗತ್ತನ್ನು ಕಾಡುತ್ತಿರುವ ನೊವೆಲ್ ಕೊರೊನಾ ವೈರಸ್ ನ್ನು ಸೂಕ್ಷ್ಣವಾಗಿ ಅಧ್ಯಯನ ಮಾಡಿದ್ದಾರೆ. ಎರಡು ವೈರಸ್ ಗಳ ನಡುವೆ ಕೆಲವು ಆರ್ಎನ್ಎಗಳಲ್ಲಿ ವ್ಯತ್ಯಾಸವಿದೆ. ಎರಡು ವೈರಸ್ ಗಳ ನಡುವಿನ ವ್ಯತ್ಯಾಸವನ್ನು ಈಗ ಅಭಿವೃದ್ಧಿಪಡಿಸಿರುವ ಬಯೋಸೆನ್ಸಾರ್ ಪತ್ತೆ ಮಾಡುವಲ್ಲಿ ಶಕ್ತವಾಗಿದೆ ಎಂದು ಜಿಂಗ್ ವಾಂಗ್ ತಿಳಿಸಿದ್ದಾರೆ.

English summary
Biosensor Testing Method Quickly Detect Novel Coronavirus. Swiss Federal Laboratories For Materials Science And Technology Have Developed An Alternative Test Method.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X