ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳಿಗೂ ಕೊರೊನಾ ಲಸಿಕೆ: ಬಯೋಎನ್‌ಟೆಕ್ ಘೋಷಣೆ

|
Google Oneindia Kannada News

ಬರ್ಲಿನ್‌, ಮೇ 1: ಯುರೋಪ್‌ನಲ್ಲಿ 12 ರಿಂದ 15 ವರ್ಷದ ವಯಸ್ಸಿವರಿಗೂ ಕೊರೊನಾ ಲಸಿಕೆ ನೀಡಲಾಗುವುದು ಎಂದು ಜರ್ಮನಿಯ ಔಷಧಿ ಕಂಪನಿ ಬಯೋಎನ್‌ಟೆಕ್ ಹೇಳಿದೆ.

ವಿಶ್ವದಲ್ಲಿ ಕೊರೊನಾ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿದೆ. ಮೇ 1ರಂದು ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಲಿದೆ.

ಭಾರತದಲ್ಲಿ ಪೂರ್ಣ ಲಸಿಕೆ ಪಡೆದವರ ಪ್ರಮಾಣ ಶೇ 1.97ಭಾರತದಲ್ಲಿ ಪೂರ್ಣ ಲಸಿಕೆ ಪಡೆದವರ ಪ್ರಮಾಣ ಶೇ 1.97

ಮಾರ್ಚ್ ಅಂತ್ಯದ ವೇಳೆಗೆ, 2,260 ಮಂದಿ ಅಮೆರಿಕ ಸ್ವಯಂಸೇವಕರ ಮೇಲೆ ಪರೀಕ್ಷೆ ನಡೆಸಲಾಗಿದೆ. ಮಕ್ಕಳಲ್ಲಿ ಕೊರೊನಾ ತಡೆಗಟ್ಟಲು ಫೈಜರ್ ಲಸಿಕೆ ಪರಿಣಾಮಕಾರಿ ಎಂದು ಈ ಅಧ್ಯಯನಗಳು ತೋರಿಸಿವೆ. ಚಿಕ್ಕ ಮಕ್ಕಳಿಗೆ ಫೈಜರ್ ಲಸಿಕೆ ತುಂಬಾ ಸುರಕ್ಷಿತವಾಗಿದೆ ಎಂದು ಬಯೋನೆಟೆಕ್ ಹೇಳಿದೆ.

BioNTech, Pfizer Seek EU Approval For Childrens COVID Vaccines

ಶಾಲೆಗೆ ಹೋಗುವ ಮಕ್ಕಳಿಗೆ, 12 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದೆ. ಈ ಸಂಬಂಧ ಅನುಮೋದನೆಗಾಗಿ ಯುಎಸ್‌ಎಫ್‌ಡಿಎ, ಯುರೋಪಿಯನ್ ನಿಯಂತ್ರಕರಿಗೆ ವರದಿ ಸಲ್ಲಿಸಲಾಗಿದೆ ಎಂದು ಫಿಜರ್ ಸಿಇಓ ಎರ್ಲಾಬ್ ಬೌರ್ಲಾ ಹೇಳಿದ್ದಾರೆ.

ಲಸಿಕೆ ಜೂನ್ ವೇಳೆಗೆ ಚಿಕ್ಕ ಮಕ್ಕಳಿಗೆ ಲಭ್ಯವಾಗಲಿದೆ. ಪ್ರಸ್ತುತ ಹಲವು ಲಸಿಕೆ ತಯಾರಕರು ಮಕ್ಕಳಿಗೆ ಲಸಿಕೆ ತಯಾರಿಸಲು ಪೈಪೋಟಿ ನಡೆಸುತ್ತಿವೆ.

ಲಸಿಕೆಯು 12-15 ವರ್ಷ ವಯಸ್ಸಿನ ಮಕ್ಕಳಲ್ಲಿ ಶೇ 100ರಷ್ಟು ಪರಿಣಾಮಕಾರಿ ಎಂದು ಹೇಳಿದ್ದಾರೆ. ಈವರೆಗೆ ಲಸಿಕೆ ಕುರಿತು ಪ್ರಯೋಗಗಳನ್ನು ನಡೆಸಲಾಗಿದ್ದು, ಅವುಗಳಿಗೆ ಸಂಬಂಧಿಸಿ ಆಧಾರಗಳನ್ನು ಸಲ್ಲಿಸಲಾಗಿದೆ.

English summary
German vaccine manufacturer BioNtech and US pharma giant Pfizer officially requested European Union regulators to widen approval of their coronavirus vaccine to include adolescents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X