ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರೊಳಗೆ ಯುರೋಪಿನಲ್ಲಿ ಕೊರೊನಾವೈರಸ್ ಲಸಿಕೆ ಬಿಡುಗಡೆ?

|
Google Oneindia Kannada News

ನವದೆಹಲಿ, ಡಿಸೆಂಬರ್,02: ಯುರೋಪ್ ರಾಷ್ಟ್ರಗಳಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಕೊರೊನಾವೈರಸ್ ಸೋಂಕಿಗೆ ಲಸಿಕೆ ಬಿಡುಗಡೆಯಾಗುವ ಮುನ್ಸೂಚನೆಗಳು ಸಿಕ್ಕಿವೆ. ಜರ್ಮನ್ ಫಾರ್ಮಾಸೆಂಟಿಕಲ್ ಕಂಪನಿ ಆಗಿರುವ ಬಯೋನೆಟೆಕ್ ಮತ್ತು ಯುೆಸ್ ಸಹಭಾಗಿತ್ವದ ಪಿ-ಫಿಜರ್ ಕಂಪನಿಗಳು ಸಂಶೋಧಿಸಿರುವ ಕೊವಿಡ್-19 ಲಸಿಕೆ ಅನುಮೋದನೆಗೆ ಮನವಿ ಸಲ್ಲಿಸಿವೆ.

ಯುರೋಪಿಯನ್ ಮೆಡಿಸನ್ಸ್ ಏಜೆನ್ಸಿಗೆ ಕೊರೊನಾವೈರಸ್ ಲಸಿಕೆ ಸಂಶೋಧನಾ ಕಂಪನಿಗಳು ಅನುಮೋದನೆಗಾಗಿ ಮನವಿ ಸಲ್ಲಿಸಿರುವ ಬಗ್ಗೆ ಎರಡೂ ಕಂಪನಿಗಳು ಮಾಹಿತಿ ನೀಡಿವೆ. ಕಳೆದ ಅಕ್ಟೋಬರ್.06ರಿಂದಲೂ ಸಂಶೋಧನಾ ಪ್ರಕ್ರಿಯೆ ಕುರಿತು ಬೆಳವಣಿಗೆಗಳ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಾಗಿದೆ.

ನಾವು ಇಡೀ ದೇಶಕ್ಕೆ ಕೊರೊನಾ ಲಸಿಕೆ ಒದಗಿಸುತ್ತೇವೆ ಎಂದು ಹೇಳಿಲ್ಲ: ಆರೋಗ್ಯ ಸಚಿವಾಲಯನಾವು ಇಡೀ ದೇಶಕ್ಕೆ ಕೊರೊನಾ ಲಸಿಕೆ ಒದಗಿಸುತ್ತೇವೆ ಎಂದು ಹೇಳಿಲ್ಲ: ಆರೋಗ್ಯ ಸಚಿವಾಲಯ

ಮಾಡರ್ನಾ ಕಂಪನಿಯ ಕೊರೊನಾವೈರಸ್ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಿಕೊಳ್ಳುವುದಕ್ಕೆ ಸೂಕ್ತವಾಗಿದೆ ಎಂದು ಯುಎಸ್ ಮತ್ತು ಯುರೋಪಿಯನ್ ಔಷಧೀಯ ಮಂಡಳಿಗೆ ತಿಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

BioNtech, Pfizer Apply For Covid-19 Vaccine Approval In Europe

2020ರಲ್ಲೇ ಕೊರೊನಾವೈರಸ್ ಲಸಿಕೆ ಬಳಕೆ:

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಸಿದ್ಧಪಡಿಸಿದ BNT162b2 ಮಾದರಿಯ ಲಸಿಕೆಗೆ ಅನುಮೋದನೆ ಸಿಕ್ಕಿದ್ದಲ್ಲಿ 2020ರಲ್ಲೇ ಈ ಲಸಿಕೆಯನ್ನು ಬಳಕೆಗೆ ತರಲಾಗುತ್ತದೆ ಎಂದು ಬಯೋನೆಟೆಕ್ ಕಂಪನಿ ಹೇಳಿದೆ.

Recommended Video

Corona ಸೊಂಕಿತರಲ್ಲಿ ಇವ್ರು ಸೇಫ್ ಅಂತೆ??

ಕಳೆದ ನವೆಂಬರ್.20ರಂದೇ ಎರಡೂ ಕಂಪನಿಗಳು ಕೊರೊನಾವೈರಸ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಯುನೈಟೆಡ್ ಸ್ಟೇಟ್ಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿವೆ. ಎರಡು ಕಂಪನಿಗಳು ನವೆಂಬರ್.18ರಂದು ನಡೆಸಿದ ಅಂತಿಮ ಹಂತದ ವೈದ್ಯಕೀಯ ಪ್ರಯೋಗದಲ್ಲಿ ತಮ್ಮ ಮಾದರಿ ಲಸಿಕೆಯು ಶೇ.95ರಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಹೇಳಿದ್ದವು.

English summary
BioNtech, Pfizer Apply For Covid-19 Vaccine Approval In Europe, Target To Released Before 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X