ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲೋನ್ ಮಸ್ಕ್ ಟ್ವಿಟ್ಟರ್ ಅಸಲಿ ಖಾತೆಯ ನಕಲಿ ಫಾಲೋವರ್ಸ್ ಕತೆ ಬಹಿರಂಗ

|
Google Oneindia Kannada News

ನವದೆಹಲಿ, ಮೇ 2: ಬಿಲಿಯನೇರ್ ಎಲೋನ್ ಮಸ್ಕ್ ಟ್ವಿಟ್ಟರ್‌ನಲ್ಲಿ ಹೊಂದಿರುವ ಒಟ್ಟು ಫಾಲೋವರ್ಸ್ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ನಕಲಿ ಆಗಿವೆ ಎಂದು ಆನ್‌ಲೈನ್ ಆಡಿಟಿಂಗ್ ಟೂಲ್ ಹೇಳಿಕೊಂಡಿದೆ. ಮೈಕ್ರೋ-ಬ್ಲಾಗಿಂಗ್ ವೆಬ್‌ಸೈಟ್ ಅನ್ನು 44 ಶತಕೋಟಿ ಡಾಲರ್‌ಗೆ ಮಸ್ಕ್ ಖರೀದಿಸಲು ಒಪ್ಪಂದ ಮಾಡಿಕೊಂಡ ಕೆಲವೇ ದಿನಗಳಲ್ಲಿ ಈ ಸುದ್ದಿ ಹೊರಬಿದ್ದಿದೆ.

SparkToro ನಲ್ಲಿನ ಆಡಿಟ್‌ನ ಫಲಿತಾಂಶಗಳಲ್ಲಿ ಈ ಅಂಶ ಗೊತ್ತಾಗಿದೆ. ಮಸ್ಕ್ ಫಾಲೋವರ್ಸ್ ಸಂಖ್ಯೆಯಲ್ಲಿ ಶೇ. 53.3ರಷ್ಟು ನಕಲಿ ಎಂದು ಹೇಳಲಾಗುತ್ತಿದೆ, ಅಂದರೆ ಅವರು ಸ್ಪ್ಯಾಮ್ ಖಾತೆ, ಬಾಟ್‌ ಅಥವಾ ದೀರ್ಘಾವಧಿವರೆಗೂ ಚಾಲ್ತಿಯಲ್ಲಿಲ್ಲ ಎಂದು ಗೊತ್ತಾಗಿದೆ.

ಎಲಾನ್ ಮಸ್ಕ್ ಏನೆಲ್ಲಾ ಖರೀದಿ ಮಾಡಬೇಕು?, ನೆಟ್ಟಿಗರು ಹೇಳ್ತಾರೆ ನೋಡಿ!ಎಲಾನ್ ಮಸ್ಕ್ ಏನೆಲ್ಲಾ ಖರೀದಿ ಮಾಡಬೇಕು?, ನೆಟ್ಟಿಗರು ಹೇಳ್ತಾರೆ ನೋಡಿ!

ತಮ್ಮ ಫಾಲೋವರ್ಸ್‌ಗಳ ಸಂಖ್ಯೆಯಲ್ಲಿ ಎಷ್ಟು ಅಸಲಿಯಾಗಿದೆ, ಇನ್ನೆಷ್ಟು ನಕಲಿ ಆಗಿದೆ ಎಂಬುದನ್ನು ಪರಿಶೀಲಿಸಲು ಯಾವುದೇ ಟ್ವಿಟ್ಟರ್ ಬಳಕೆದಾರರು ಈ ಉಪಕರಣವನ್ನು ಬಳಸಿಕೊಳ್ಳಬಹುದು. ಆದಾಗ್ಯೂ, SparkToro ತೋರಿಸಿದ ಫಲಿತಾಂಶಗಳನ್ನು ವರದಿ ಮಾಡಿರುವ ಸುದ್ದಿಸಂಸ್ಥೆಯು ದೃಢೀಕರಿಸಲು ಸಾಧ್ಯವಿಲ್ಲ.

Billionaire Elon Musks Twitter followers in more than half are Fake; Claims Online Tool

90 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿರುವ ಮಸ್ಕ್:

ಎಲೋನ್ ಮಸ್ಕ್ ತಮ್ಮ ಟ್ವಿಟ್ಟರ್‌ನಲ್ಲಿ 90 ಮಿಲಿಯನ್ ಫಾಲೋವರ್ಸ್ ಅನ್ನು ಹೊಂದಿದ್ದಾರೆ. "ಈ ಲೆಕ್ಕಪರಿಶೋಧನೆಯು elonmusk ಅವರನ್ನು ಫಾಲೋ ಮಾಡುತ್ತಿರುವ ಇತ್ತೀಚಿನ 1,00,000 ಖಾತೆಗಳಿಂದ 2,000 ಯಾದೃಚ್ಛಿಕ ಖಾತೆಗಳ ಮಾದರಿಯನ್ನು ವಿಶ್ಲೇಷಿಸುತ್ತದೆ. ನಂತರ ಸ್ಪ್ಯಾಮ್ / ಬಾಟ್ / ಕಡಿಮೆ ಗುಣಮಟ್ಟದ ಖಾತೆಗಳೊಂದಿಗೆ ಪರಸ್ಪರ ಸಂಬಂಧ ಹೊಂದಿರುವ 25+ ಅಂಶಗಳನ್ನು ನೋಡುತ್ತದೆ," ಎಂಬುದಾಗಿ SparkToro ದಿ ಇಂಡಿಪೆಂಡೆಂಟ್‌ಗೆ ಹೇಳಿದೆ.

ನಕಲಿ ಅನುಯಾಯಿಗಳನ್ನು ಹೊಂದಿರುವವರೇ ಹೆಚ್ಚು:

"ಎಲೋನ್ ಮಸ್ಕ್ ರೀತಿಯಲ್ಲೇ ಅತಿಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವ ಟ್ವಿಟರ್ ಖಾತೆಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಸರಾಸರಿಯಲ್ಲಿ ಶೇ.41ರಷ್ಟು ಫಾಲೋವರ್ಸ್ ನಕಲಿ ಎಂಬುದು ಗೊತ್ತಾಗಿದೆ. ಅಂದರೆ ಅಸಲಿ ಅನುಯಾಯಿಗಳಿಗಿಂತ ನಕಲಿ ಅನುಯಾಯಿಗಳ ಸಂಖ್ಯೆಯೇ ಹೆಚ್ಚಾಗಿರುವುದು ಕಂಡು ಬಂದಿದೆ," ಎಂದು SparkToro ಹೇಳಿದೆ

Billionaire Elon Musks Twitter followers in more than half are Fake; Claims Online Tool

ಎಲೋನ್ ಮಸ್ಕ್ ಪ್ರಸ್ತುತ ಟ್ವಿಟ್ಟರ್‌ನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ ಪೂರ್ಣಗೊಳಿಸುವತ್ತ ಲಕ್ಷ್ಯ ವಹಿಸಿದ್ದಾರೆ. ಈ ಹಂತದಲ್ಲಿ ಟ್ವಿಟ್ಟರ್‌ಅನ್ನು ಬಾಟ್‌ಗಳು ಮತ್ತು ಸ್ಪ್ಯಾಮ್ ಖಾತೆಗಳಿಂದ ಮುಕ್ತಗೊಳಿಸುವುದಾಗಿ ವಾಗ್ದಾನ ಮಾಡಿದ್ದಾರೆ.

"ನಮ್ಮ ಟ್ವಿಟ್ಟರ್‌ ಬಿಡ್ ಯಶಸ್ವಿಯಾದರೆ, ನಾವು ಸ್ಪ್ಯಾಮ್ ಬಾಟ್‌ಗಳನ್ನು ಸೋಲಿಸುತ್ತೇವೆ ಅಥವಾ ಪ್ರಯತ್ನಿಸುತ್ತಾ ಸಾಯುತ್ತೇವೆ" ಎಂದು ಟೆಸ್ಲಾ ಮುಖ್ಯಸ್ಥರು ಏಪ್ರಿಲ್ 21ರಂದು ಟ್ವೀಟ್ ಮಾಡಿದ್ದರು.

ಕಳೆದ ವಾರ ರಾಯಿಟರ್ಸ್ ವರದಿ ಪ್ರಕಾರ, ಎಲೋನ್ ಮಸ್ಕ್ Twitter Inc ನ ಯೋಜಿತ ಖರೀದಿಗೆ ಹಣಕಾಸು ಒದಗಿಸಲು ಟೆಸ್ಲಾದಲ್ಲಿ 8.5 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಅದೇ ವಾರ ಸುಮಾರು 9.6 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಿದ್ದಾರೆ, ಗುರುವಾರ ಮತ್ತು ಶುಕ್ರವಾರ US ಸೆಕ್ಯುರಿಟೀಸ್ ಫೈಲಿಂಗ್‌ಗಳ ಪ್ರಕಾರ, ಕಂಪನಿಯಲ್ಲಿನ ಅವರ ಪಾಲಿನ 5.6 ಪ್ರತಿಶತಕ್ಕೆ ಸಮನಾಗಿದೆ. ಇನ್ನು ಫೋರ್ಬ್ಸ್ ಪ್ರಕಾರ, ಎಲೋನ್ ಮಸ್ಕ್ ಒಟ್ಟು ಆಸ್ತಿಮೌಲ್ಯವು 268 ಬಿಲಿಯನ್ ಡಾಲರ್ ಆಗಿದೆ.

English summary
Billionaire Elon Musk's Twitter followers in more than half are Fake; Claims Online Tool.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X