ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿನ ಐಟಿ ಕಂಪನಿಗಳಿಗೆ ಶೀಘ್ರವೇ ಹೆಚ್-1ಬಿ ವೀಸಾ ಶಾಕ್!

ಅಮೆರಿಕದಲ್ಲಿ ಉದ್ಯೋಗ ನಿಮಿತ್ತ ಹಾರುವ ಭಾರತೀಯರ ಟೆಕಿಗಳಿಗೆ ನೀಡಲಾಗುವ ಹೆಚ್-1ಬಿ ವೀಸಾ ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಅಮೆರಿಕದ ಸೆನೆಟರ್ ಗಳು ಸಜ್ಜಾಗಿದ್ದಾರೆ.

|
Google Oneindia Kannada News

ವಾಷಿಂಗ್ಟನ್, ಜನವರಿ 20: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಪ್ರಮಾಣ ವಚನ ಅದ್ಧೂರಿ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ, ಅತ್ತ ಅಮೆರಿಕ ಸರ್ಕಾರ ಅಧಿಕಾರಿಗಳು ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯ ವೇಳೆ ಮಾಡಿದ್ದ ಘೋಷಣೆಗಳ ಅನುಷ್ಠಾನಕ್ಕೆ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.

ಅಮೆರಿಕದ ಸಂಸದರಾದ ಚುಕ್ ಗ್ರಾಸ್ಲೆ ಹಾಗೂ ಡಿಕ್ ಡರ್ಬನ್ ಅವರು ಟ್ರಂಪ್ ಅವರು ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಶುರುವಾಗುವ ಸಂಸತ್ ಅಧಿವೇಶನದಲ್ಲಿ ಈ ಕರಡು ಪ್ರತಿಯನ್ನು ಮಂಡಿಸಲು ಸಿದ್ಧರಾಗಿದ್ದಾರೆ.[ಏನಿದು ಎಚ್1ಬಿ ವೀಸಾ ತಿದ್ದುಪಡಿ ಕಾಯ್ದೆ? ಇದ್ಹೇಗೆ ಟೆಕ್ಕಿಗಳಿಗೆ ಮಾರಕ?]

bill-curb-the-chances-on-h-1b-visa-be-introduced-soon-in-america-congress

ಕರಡು ಪ್ರತಿಯಲ್ಲಿ, ವಿದೇಶಿ ಟೆಕ್ಕಿಗಳಿಗೆ ನೀಡಲಾಗುವ ಎಚ್-1ಬಿ ವೀಸಾ ಕಾಯ್ದೆಗೆ ತಿದ್ದುಪಡಿ ತರಲು ಕರಡು ಪ್ರತಿಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಜತೆಯಲ್ಲೇ, ಅಮೆರಿಕದ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಹೊಸ ಕರಡು ಪ್ರತಿಯಲ್ಲಿ ಹೊಸ ಅಂಶಗಳನ್ನು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.[ಎಚ್1 ಬಿ ವೀಸಾ ಮಸೂದೆ ತಿದ್ದುಪಡಿ ಮತ್ತೆ ಜಾರಿಗೆ]

ಅಮೆರಿಕ ಸಂಸತ್ತಿನಲ್ಲಿ ಈ ಕರಡು ಪ್ರತಿಗೆ ಒಪ್ಪಿಗೆ ಸಿಕ್ಕಲ್ಲಿ ಅದು ಭಾರತೀಯ ಐಟಿ ವಲಯಕ್ಕೆ ದೊಡ್ಡ ಹೊಡೆತ ಕೊಟ್ಟಂತಾಗುತ್ತದೆಂದು ಭಾರತೀಯ ವಿತ್ತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
A new bill will be introduced in America congress to impose some restrictions on H-1B visas which may give a big blow to Indian IT sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X