ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಕ್ಕೆ ಅತ್ಯಂತ ಕಿರಿಯ ವಯಸ್ಸಿನ ವಿದೇಶಾಂಗ ಸಚಿವ; ಬಿಲಾವಲ್ ದಾಖಲೆ

|
Google Oneindia Kannada News

ಇಸ್ಲಾಮಾಬಾದ್, ಏ. 28: ಪಾಕಿಸ್ತಾನದ ಮಾಜಿ ಅಧ್ಯಕ್ಷರು, ಮಾಜಿ ಪ್ರಧಾನಿಗಳ ಕುಟುಂಬಕ್ಕೆ ಸೇರಿದ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari) ಅವರು ಪಾಕಿಸ್ತಾನದ ನೂತನ ವಿದೇಶಾಂಗ ಸಚಿವರಾಗಿದ್ದಾರೆ. 33 ವರ್ಷದ ಬಿಲಾವಲ್ ಅವರಿಗೆ ಇದು ಮೊದಲ ಆಡಳಿತ ಜವಾಬ್ದಾರಿಯಾಗಿದೆ. ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ವಿದೇಶಾಂಗ ಸಚಿವರಾದ ದಾಖಲೆ ಅವರದ್ದಾಗಿದೆ. ಹಣಕಾಸು ಪರಿಸ್ಥಿತಿ, ಅಂತರರಾಷ್ಟ್ರೀಯ ಸಂಬಂಧ ವಿಚಾರಗಳಲ್ಲಿ ಬಹಳ ಸವಾಲುಗಳನ್ನ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಸಣ್ಣ ವಯಸ್ಸಿನ ಬಿಲಾವಲ್ ಭುಟ್ಟೋ ಅವರು ಮಾರ್ಗೋಪಾಯಗಳನ್ನ ಕಂಡುಕೊಳ್ಳಬಲ್ಲರೇ ಎಂಬುದು ಪ್ರಶ್ನೆ.

ಪಾಕಿಸ್ತಾನ ಅಧ್ಯಕ್ಷ ಅರಿಫ್ ಅಲ್ವಿ ಇಂದು ಅಧ್ಯಕ್ಷೀಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಬಿಲಾವಲ್ ಭುಟ್ಟೋ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ಶಾಹಬಾಜ್ ಷರೀಫ್, ಮಾಜಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಹಾಗು ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Breaking; ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ, ನಾಲ್ವರು ಸಾವು Breaking; ಕರಾಚಿ ವಿಶ್ವವಿದ್ಯಾಲಯದಲ್ಲಿ ಸ್ಫೋಟ, ನಾಲ್ವರು ಸಾವು

ಬಿಲಾವಲ್ ಭುಟ್ಟೋ ಅವರ ತಾಯಿ ಬೇನಜೀರ್ ಭುಟ್ಟೋ ಹತ್ಯೆಯಾದಾಗ ಕೇವಲ 20ನೇ ವಯಸ್ಸಿಗೆ ರಾಜಕೀಯಕ್ಕೆ ಅಡಿ ಇಟ್ಟು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಚುಕ್ಕಾಣಿ ಹಿಡಿದರು. ಆದರೆ, ಮೊದಲ ಬಾರಿಗೆ ಅವರು ಚುನಾವಣೆ ಎದುರಿಸಿದ್ದು 2018ರಲ್ಲಿ. ರಾಷ್ಟ್ರೀಯ ಸಭೆಗೆ (ಲೋಕಸಭೆ) ಚುನಾಯಿತರಾಗಿ ಸಂಸದರಾದರು. ಇಮ್ರಾನ್ ಖಾನ್ ಸರಕಾರ ಪತನಗೊಂಡ ಬಳಿಕ ಈಗ ಅವರಿಗೆ ವಿದೇಶಾಂಗ ಸಚಿವರಾಗುವ ಯೋಗ ಸಿಕ್ಕಿದೆ. ಬಿಲಾವಲ್ ಅವರ ಅಜ್ಜ ಜುಲ್ಫಿಕರ್ ಅಲಿ ಭುಟ್ಟೋ ಅವರು ಹಿಂದೆ ಪಾಕಿಸ್ತಾನದ ಪ್ರಧಾನಿಗಳಾಗಿದ್ದರು. ಬಿಲಾವಲ್ ಅವರ ತಂದೆ ಅಸಿಫ್ ಅಲಿ ಜರ್ದಾರಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದರು. ಪ್ರಬಲ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದ ಬಿಲಾವಲ್ ಅವರು ವಿದೇಶಾಂಗ ಸಚಿವರಾಗಿ ಎದುರುಗೊಳ್ಳಲಿರುವ ಪ್ರಬಲ ಸವಾಲುಗಳನ್ನ ಸಮರ್ಥವಾಗಿ ಎದುರಿಸಬಲ್ಲರಾ?

Bilawal Bhutto becomes youngest foreign minister in Pakistan history

ಭುಟ್ಟೋ ಮುಂದಿರುವ ಪ್ರಮುಖ ಸವಾಲುಗಳು:
* ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಕೆಲ ದಶಕಗಳಿಂದ ಆಪ್ತ ಸಂಬಂಧ ಇದೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಅಮೆರಿಕದ ವಿರುದ್ಧ ಹೇಳಿಕೆಗಳನ್ನ ಕೊಟ್ಟಿದ್ದರು. ಈಗ ಪಾಕಿಸ್ತಾನದಿಂದ ಅಮೆರಿಕ ದೂರ ಹೋಗುವ ಸಾಧ್ಯತೆಯೂ ಇಲ್ಲದಿಲ್ಲ. ಇಂಥ ಹೊತ್ತಿನಲ್ಲಿ ಪಾಕಿಸ್ತಾನ ಮತ್ತು ಅಮೆರಿಕ ನಡುವೆ ಮತ್ತೆ ಬಾಂಧವ್ಯ ಬೆಳೆಸುವ ಜವಾಬ್ದಾರಿ ಬಿಲಾವಲ್ ಹೆಗಲಿಗಿದೆ.
* ಭಾರತ ಜೊತೆಗಿನ ನಿರಂತರ ಘರ್ಷಣೆ ಪಾಕಿಸ್ತಾನದ ಆರ್ಥಿಕತೆಗೆ ಸಂಚಕಾರ ತಂದಿದೆ. ಪಾಕಿಸ್ತಾನ ಶಾಂತಿ ಬಯಸುತ್ತದೆ ಎಂಬ ಸಂದೇಶವನ್ನು ಹೊರಡಿಸಿ ಭಾರತದ ವಿಶ್ವಾಸ ಗಳಿಸುವ ಹೊಣೆಗಾರಿಕೆ ಮತ್ತು ಸವಾಲು ಭುಟ್ಟೋ ಅವರ ಮುಂದಿದೆ.
* ಭಾರತದೊಂದಿಗೆ ತಿಕ್ಕಾಟ ಇಲ್ಲದೇ ಜಮ್ಮು ಕಾಶ್ಮೀರ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳುವುದು ಈಗ ಪಾಕಿಸ್ತಾನಕ್ಕೆ ಬಹುದೊಡ್ಡ ಸವಾಲು.

Bilawal Bhutto becomes youngest foreign minister in Pakistan history

ಪೂರ್ವಿಕರ ಬಲಿದಾನದ ಶಕ್ತಿ:
ಬಿಲಾವಲ್ ಅವರ ತಾತ ಜುಲ್ಫಿಕರ್ ಅಲಿ ಭುಟ್ಟೋ ಅವರನ್ನ ಕೊಲೆ ಪ್ರಕರಣವೊಂದರ ಸಂಬಂಧ 1979ರಲ್ಲಿ ನೇಣಿಗೆ ಹಾಕಲಾಗಿತ್ತು. 2007ರಲ್ಲಿ ಅವರ ತಾಯಿ ಬೇನಜೀರ್ ಭುಟ್ಟೋ ಅವರನ್ನ ಉಗ್ರಗಾಮಿಗಳು ಬಾಂಬ್ ದಾಳಿ ನಡೆಸಿ ಕೊಂದುಹಾಕಿದ್ದರು.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಅಮೆರಿಕನ್ ಸಂಸದೆ ಭೇಟಿ: ಭಾರತ ಆಕ್ಷೇಪ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಅಮೆರಿಕನ್ ಸಂಸದೆ ಭೇಟಿ: ಭಾರತ ಆಕ್ಷೇಪ

ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರಕಾರ:
ಪಿಟಿಐ ಪಕ್ಷದ ಇಮ್ರಾನ್ ಖಾನ್ ಬಹುಮತ ಕಳೆದುಕೊಂಡ ಬಳಿಕ ವಿಪಕ್ಷಗಳು ಒಗ್ಗೂಡಿ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿವೆ. ಪಿಎಂಎಲ್(ಎನ್) ಮತ್ತು ಪಿಪಿಪಿ ಪಕ್ಷಗಳ ಸಮ್ಮಿಶ್ರ ಸರಕಾರ ನಡೆದಿದೆ. ಪ್ರಧಾನಿ ಶಾಹಬಾಜ್ ಷರೀಫ್ ಅವರೂ ಕೂಡ ಪ್ರಬಲ ರಾಜಕೀಯ ಕುಟುಂಬದ ಸದಸ್ಯರು. ಮಾಜಿ ಅಧ್ಯಕ್ಷ ನವಾಜ್ ಷರೀಫ್ ಅವರ ಸಹೋದರ ಅವರು.

(ಒನ್ಇಂಡಿಯಾ ಸುದ್ದಿ)

English summary
Scion of Pakistan's leading political dynasty, Bilawal Bhutto Zardari, on Wednesday took oath as the foreign minister in the government led by Prime Minister Shehbaz Sharif.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X