ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಹಫೀಜ್ ಸಯೀದ್ ನ ದೊಡ್ಡ ಬೆಂಬಲಿಗ : ಮುಷರಫ್

|
Google Oneindia Kannada News

ಉಗ್ರ ಸಂಘಟನೆ ಲಷ್ಕರ್ ಇ ತೈಬಾ ಮತ್ತು ಅದರ ಸ್ಥಾಪಕ ಹಫೀಜ್ ಸಯೀದ್ ನ ದೊಡ್ಡ ಬೆಂಬಲಿಗ ನಾನು ಎಂದು ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ, ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಗೃಹ ಬಂಧನದಿಂದ ಮುಕ್ತಮುಂಬೈ ದಾಳಿ ಮಾಸ್ಟರ್ ಮೈಂಡ್ ಹಫೀಜ್ ಗೃಹ ಬಂಧನದಿಂದ ಮುಕ್ತ

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ದಮನ ಮಾಡುವಲ್ಲಿ ಲಷ್ಕರ್ ಇ ತೈಬಾದ ಪಾತ್ರವಿದೆ ಎಂದಿರುವ ಮುಷರಫ್, ಕಾಶ್ಮೀರದಲ್ಲಿ ಹಫೀಜ್ ಸಯೀದ್ ನ ಪಾತ್ರವಿದೆ. ಮತ್ತು ಆತನಿಗೆ ನನ್ನ ಬೆಂಬಲವಿದೆ ಎಂದು ಹೇಳಿದ್ದಾರೆ.

ಹಫೀಜ್ ಸಯೀದ್ ನ ಬಂಧಿಸಿ, ಶಿಕ್ಷಿಸಿ: ಪಾಕ್ ಗೆ ಅಮೆರಿಕ ತಾಕೀತುಹಫೀಜ್ ಸಯೀದ್ ನ ಬಂಧಿಸಿ, ಶಿಕ್ಷಿಸಿ: ಪಾಕ್ ಗೆ ಅಮೆರಿಕ ತಾಕೀತು

ಇತ್ತೀಚೆಗಷ್ಟೇ ಪಾಕಿಸ್ತಾನದ ಇಪ್ಪತ್ಮೂರು ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದ್ದನ್ನು ಘೋಷಿಸಿದ್ದ ಮುಷರಫ್, ಜಮ್ಮು-ಕಾಶ್ಮೀರದಲ್ಲಿ ಭಾರತದ ಸೇನೆಯ ವಿರುದ್ಧದ ದಮನ ಕಾರ್ಯಾಚರಣೆಗೆ ನನ್ನ ಬೆಂಬಲವಿದೆ ಎಂದಿದ್ದಾರೆ.

ಉಗ್ರ ಹಫೀಜ್ ಬಿಡುಗಡೆ : ಕಾಶ್ಮೀರದಲ್ಲಿ ಹೈ ಅಲರ್ಟ್ಉಗ್ರ ಹಫೀಜ್ ಬಿಡುಗಡೆ : ಕಾಶ್ಮೀರದಲ್ಲಿ ಹೈ ಅಲರ್ಟ್

"ಲಷ್ಕರ್ ಇ ತೈಬಾ ದೊಡ್ಡ ಶಕ್ತಿ. ಅಮೆರಿಕ ಜತೆ ಒಡಂಬಡಿಕೆ ಮಾಡಿಕೊಂಡು ಭಾರತವು ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ. ಲಷ್ಕರ್ ಇ ತೈಬಾ ಕಾಶ್ಮೀರದಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದೆ" ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮವೊಂದಕ್ಕೆ ದುಬೈನಲ್ಲಿರುವ ಮುಷರಫ್ ಪ್ರತಿಕ್ರಿಯಿಸಿದ್ದಾರೆ.

ನನ್ನನ್ನು ಉಗ್ರ ಸಂಘಟನೆಗಳು ಇಷ್ಟಪಡುತ್ತಿದ್ದವು

ನನ್ನನ್ನು ಉಗ್ರ ಸಂಘಟನೆಗಳು ಇಷ್ಟಪಡುತ್ತಿದ್ದವು

ಒಂದು ಕಡೆ ತಮ್ಮನ್ನು ಲಷ್ಕರ್ ಇ ತೈಬಾದ ದೊಡ್ಡ ಬೆಂಬಲಿಗ ಎಂದು ಕರೆದುಕೊಂಡಿರುವ ಮುಷರಫ್, ನನ್ನನ್ನು ಉಗ್ರ ಸಂಘಟನೆಗಳು ಇಷ್ಟಪಡುತ್ತಿದ್ದವು. ಹಫೀಜ್ ಸಯೀದ್ ನೇತೃತ್ವದ ಜಮಾತ್ ಉದ್ ದವಾ ಸಂಘಟನೆ ನನ್ನನ್ನು ಇಷ್ಟಪಡುತ್ತಿತ್ತು ಎಂದಿದ್ದಾರೆ.

ಅಂದಿನ ಸನ್ನಿವೇಶ ಬೇರೆ

ಅಂದಿನ ಸನ್ನಿವೇಶ ಬೇರೆ

ಆದರೆ, ಮುಷರಫ್ ಸರಕಾರದ ಅವಧಿಯಲ್ಲೇ ಉಗ್ರ ಸಂಘಟನೆ ಲಷ್ಕರ್ ಇ ತೈಬಾವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, "ಅದು ಬೇರೆ ಸನ್ನಿವೇಶ" ಎಂದಷ್ಟೇ ಹೇಳಿ, ಹೆಚ್ಚಿನ ಉತ್ತರ ನೀಡಲಿಲ್ಲ.

ಗೃಹಬಂಧನದಿಂದ ಮುಕ್ತಗೊಂಡ ಹಫೀಜ್

ಗೃಹಬಂಧನದಿಂದ ಮುಕ್ತಗೊಂಡ ಹಫೀಜ್

ಕಳೆದ ಜನವರಿಯಿಂದ ಗೃಹಬಂಧನದಲ್ಲಿದ್ದ ಹಫೀಜ್ ಸಯೀದ್ ನನ್ನು ಪಾಕಿಸ್ತಾನ ಕೋರ್ಟ್ ಮುಕ್ತಗೊಳಿಸಿ ಆದೇಶ ನೀಡಿದ ನಂತರದಲ್ಲಿ ಪರ್ವೇಜ್ ಮುಷರಫ್ ಹೇಳಿಕೆ ಬಂದಿದೆ. ಅಂದಹಾಗೆ 26/11 ಮುಂಬೈ ಉಗ್ರರ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ನನ್ನು ಬಂಧಮುಕ್ತಗೊಳಿಸಿದ ತೀರ್ಮಾನಕ್ಕೆ ಭಾರತ ಆಕ್ಷೇಪ ದಾಖಲಿಸಿದೆ.

ಆತ ಜಾಗತಿಕ ಭಯೋತ್ಪಾದಕ

ಆತ ಜಾಗತಿಕ ಭಯೋತ್ಪಾದಕ

ಹಫೀಜ್ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿದ್ದು, ಆತನ ಬಗ್ಗೆ ಮಾಹಿತಿ ನೀಡಿದರೆ ಹಾಗೂ ಆತನಿಗೆ ಶಿಕ್ಷೆಯಾಗುವಂಥ ಸಾಕ್ಷ್ಯಾಧಾರಕ್ಕೆ ಒಂದು ಕೋಟಿ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿದೆ.

English summary
I am a biggest supporter Lashkar-e-Taiba and its founder Hafiz Saeed, Pakistan's former dictator Pervez Musharraf has said in Dubai in a TV interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X