ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೋರಾಟ ಗೆದ್ದಿದ್ದ ದಕ್ಷಿಣ ಕೊರಿಯಾ ಮತ್ತೆ ಅಕ್ಷರಶಃ ಬೆಚ್ಚಿ ಬೀಳಿತು!

|
Google Oneindia Kannada News

ಒಂದು ಹಂತದಲ್ಲಿ ಕೊರೊನಾ ವೈರಸ್ ಕೇಂದ್ರವಾಗಿದ್ದ ದಕ್ಷಿಣ ಕೊರಿಯಾ, ವಿಶಿಷ್ಟ ವೈದ್ಯಕೀಯ ಪ್ರಯೋಗವನ್ನು ನಡೆಸುವ ಮೂಲಕ ವೈರಾಣುವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಏಕಕಾಲದಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರನ್ನು ಪರೀಕ್ಷೆಗೆ ಒಳಪಡಿಸುವುದು ಮತ್ತು 24ಗಂಟೆಯಲ್ಲಿ ಪರೀಕ್ಷಾ ವರದಿಯನ್ನು ತರಿಸಿ, ಸೂಕ್ತ ಚಿಕಿತ್ಸೆಯನ್ನು ನೀಡುವ ಮೂಲಕ, ಒಂದು ಹಂತಕ್ಕೆ ಕೊರೊನಾ ವಿರುದ್ದ ದಕ್ಷಿಣ ಕೊರಿಯಾ ಗೆದ್ದಿತ್ತು.

ರೈತರ ಅನುಕೂಲಕ್ಕೆ ದುಪ್ಪಟ್ಟು ಹಾಪ್ ಕಾಮ್ಸ್; ಧೈರ್ಯ ಹೇಳಿದ ಕೃಷಿ ಸಚಿವರೈತರ ಅನುಕೂಲಕ್ಕೆ ದುಪ್ಪಟ್ಟು ಹಾಪ್ ಕಾಮ್ಸ್; ಧೈರ್ಯ ಹೇಳಿದ ಕೃಷಿ ಸಚಿವ

ಎರಡು ತಿಂಗಳ ಹಿಂದೆ ಅತಿಹೆಚ್ಚು ಸೋಂಕಿತರನ್ನು ಹೊಂದಿದ್ದ ದಕ್ಷಿಣ ಕೊರಿಯಾ, ಮೊನ್ನೆಮೊನ್ನೆಯವರೆಗೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿತ್ತು.

ವಿಶ್ವದೆಲ್ಲಡೆ ಕೋವಿಡ್ 19 ಕಿಟ್ ಗೆ ಹಾಹಾಕಾರ ಎದ್ದಿದ್ದರೆ, ಭಾರತ ಸೇರಿದಂತೆ, ಹಲವು ರಾಷ್ಟ್ರಗಳಿಗೆ ಈ ಕಿಟ್ ಅನ್ನು ರಫ್ತು ಮಾಡಲು ಕೊರಿಯಾ ಸಿದ್ದವಾಗಿದೆ. ಇಷ್ಟೆಲ್ಲಾ ಪಾಸಿಟೀವ್ ವಿದ್ಯಮಾನಗಳ ನಡುವೆ, ಕಳೆದ ಕೆಲವು ದಿನಗಳಲ್ಲಿನ ವಿದ್ಯಮಾನ ಕೊರಿಯಾಗೆ ಬಿಗ್ ಶಾಕ್ ನೀಡಿದೆ.

ಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ ಕೊವಿಡ್19 ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವಂತಿಲ್ಲ

ಕೋವಿಡ್ ಕಿಟ್ ರಫ್ತು

ಕೋವಿಡ್ ಕಿಟ್ ರಫ್ತು

ಮಾನವೀಯ ನೆಲೆಗಟ್ಟಿನಲ್ಲಿ ಕೋವಿಡ್ ಕಿಟ್ ಅನ್ನು ರಫ್ತು ಮಾಡಿ ಎನ್ನುವ ವಿಶ್ವದ ಇತರ ರಾಷ್ಟ್ರಗಳ ಮನವಿಯ ನಡುವೆ ದಕ್ಷಿಣ ಕೊರಿಯಾ ಈಗಾಗಲೇ, ಐವತ್ತು ಮಿಲಿಯನ್ ಡಾಲರ್ ಮೊತ್ತದ ಕಿಟ್ ಅನ್ನು ರಫ್ತು ಮಾಡಿಯಾಗಿದೆ. ಮುಂಬರುವ ದಿನಗಳಲ್ಲಿ ಅದು ಇನ್ನೂ ಜಾಸ್ತಿಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ...

ದೇಶದ ಆರೋಗ್ಯ ಇಲಾಖೆ

ದೇಶದ ಆರೋಗ್ಯ ಇಲಾಖೆ

ಸುಮಾರು 120ಕ್ಕೂ ಹೆಚ್ಚು ಸೋಂಕಿತರು ವಿವಿಧ ಪರೀಕ್ಷಗೆ ಒಳಪಟ್ಟ ನಂತರ, ಇವರದ್ದು ನೆಗೆಟೀವ್ ವರದಿ ಬಂದಿತ್ತು. ಇವರುಗಳನ್ನೆಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಕೂಡಾ ಮಾಡಲಾಗಿತ್ತು. ಆದರೆ, ಮರುಪರೀಕ್ಷೆ ನಡೆಸಿದಾಗ, ಮತ್ತೆ ಪಾಸಿಟೀವ್ ರಿಪೋರ್ಟ್ ಬಂದಿರುವುದು, ದೇಶದ ಆರೋಗ್ಯ ಇಲಾಖೆಯನ್ನು ಬೆಚ್ಚಿಬೀಳಿಸುವಂತೆ ಮಾಡಿದೆ ಎಂದು ಅಲ್ ಜಜೀರಾ ಪತ್ರಿಕೆ ವರದಿ ಮಾಡಿದೆ.

ದಕ್ಷಿಣ ಕೊರಿಯಾ ಸರಕಾರ

ದಕ್ಷಿಣ ಕೊರಿಯಾ ಸರಕಾರ

ಕಳೆದ ವಾರ 51 ಇಂತಹ ಮರು ಪ್ರಕರಣಗಳು ವರದಿಯಾಗಿತ್ತು. ಒಂದು ವಾರದ ಅಂತರದಲ್ಲಿ ಇಂತಹ ಕೇಸ್ ಗಳು ದ್ವಿಗುಣಗೊಳ್ಳುತ್ತಿರುವುದು ದಕ್ಷಿಣ ಕೊರಿಯಾ ಸರಕಾರವನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಸ್ವಲ್ಪ ಸಡಿಸಲು ಹೊರಟಿದ್ದ ಕೊರಿಯಾಗೆ ಈ ಮರು ಪ್ರಕರಣಗಳು ಮತ್ತೆ ಭಾರೀ ಶಾಕ್ ನೀಡಿದೆ.

ವಿಶ್ವಕ್ಕೇ ಕೊರಿಯಾ ಮಾದರಿಯಾಗಿತ್ತು

ವಿಶ್ವಕ್ಕೇ ಕೊರಿಯಾ ಮಾದರಿಯಾಗಿತ್ತು

ಕೊರೊನಾ ಇದುವರೆಗೆ 217 ಜನರನ್ನು ದಕ್ಷಿಣ ಕೊರಿಯಾದಲ್ಲಿ ಬಲಿ ಪಡೆದುಕೊಂಡಿತ್ತು. 10,537 ಕೇಸ್ ಗಳು ದಾಖಲಾಗಿದ್ದರೂ, ಸೂಕ್ತ ಕ್ರಮದ ಮೂಲಕ ವಿಶ್ವಕ್ಕೇ ಕೊರಿಯಾ ಮಾದರಿಯಾಗಿತ್ತು. ಒಟ್ಟಾರೆಯಾಗಿ ಕೇವಲ 25 ಹೊಸ ಕೇಸ್ ಗಳು ಮಾತ್ರ (ಕಳೆದ ಮೂರು ದಿನಗಳಲ್ಲಿ) ದೇಶದಲ್ಲಿ ದಾಖಲಾಗಿದ್ದವು. ಆದರೆ, ಈ ವೈರಾಣು ಮರುಜೀವ ಪಡೆದುಕೊಂಡಿರಬಹುದು ಎಂದು ದೇಶದ ಆರೋಗ್ಯ ಇಲಾಖೆಯ ಅಂದಾಜು ಸರಿಯಾಗಿದ್ದರೆ, ದೇಶ ಮತ್ತೆ ತನ್ನ ಹಿಂದಿನ ಕಟ್ಟುನಿಟ್ಟಿನ ಕ್ರಮಕ್ಕೆ ವಾಪಸ್ ಹೋಗಬೇಕಾಗಿ ಬರಬಹುದು.

English summary
Big Problem For South Korea As, Recovered Coronavirus Patients Test Positive Again,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X