• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲೋ.. ಯುದ್ಧ ನಿಲ್ಲಿಸಿ ಪ್ಲೀಸ್..! ಅಮೆರಿಕದ ಮಾತಿಗೆ ತಲೆಬಾಗಿತಾ ಇಸ್ರೇಲ್..?

|
Google Oneindia Kannada News

ಚೆಲ್ಲಾಪಿಲ್ಲಿಯಾಗಿ ಬಿದ್ದ ಶವಗಳು, ಮುಗಿಲೆತ್ತರಕ್ಕೆ ಚಾಚಿದ್ದ ಕಟ್ಟಡಗಳು ಪೀಸ್ ಪೀಸ್. ಹೀಗೆ ಇಡೀ ಊರಿಗೆ ಊರೇ ಉಡೀಸ್. ಇದು ಯಾವುದೋ ಕಾಲ್ಪನಿಕ ಕಥೆಯಲ್ಲ, ಯುದ್ಧಪೀಡಿತ ಗಾಜಾ ಪಟ್ಟಿಯ ದರುಂತ ಸ್ಥಿತಿ ಇದು. ಕೋಳಿ ಜಗಳದಂತೆ ಆರಂಭವಾಗಿದ್ದ ಗಲಾಟೆ 200ಕ್ಕೂ ಹೆಚ್ಚು ಜನರ ಸಾವಿನವರೆಗೂ ಬಂದು ನಿಂತಿದೆ.

   ಅಮೇರಿಕಾ ಅಧ್ಯಕ್ಷ Biden ಮಾತಿಗೆ ಬೆಲೆ ಕೊಡುತ್ತಾ ಇಸ್ರೇಲ್ | Oneindia Kannada

   ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ಕಿತ್ತಾಟ 200ಕ್ಕೂ ಹೆಚ್ಚು ಜನರ ಹೆಣ ಉರುಳಿಸಿದೆ. ಇದನ್ನೆಲ್ಲಾ ಕಂಡ ಜಗತ್ತು ಇಸ್ರೇಲ್ ವಿರುದ್ಧ ಆಕ್ರೋಶ ಹೊರಹಾಕಿದ್ದು, ಉಗ್ರರ ವಿರುದ್ಧದ ಹೋರಾಟದಲ್ಲಿ ಅಮಾಯಕರ ಪ್ರಾಣವನ್ನು ಕಳೆಯುತ್ತಿರುವುದು ಸರಿಯಲ್ಲ ಎನ್ನುತ್ತಿದ್ದಾರೆ ಜನ.

   ಪ್ರತಿಷ್ಠೆ ಕದನಕ್ಕೆ ನೂರಾರು ಅಮಾಯಕರು ಬಲಿ, 3 ಧರ್ಮಗಳ ತವರೂರು ಈಗ ರಕ್ತಸಿಕ್ತಪ್ರತಿಷ್ಠೆ ಕದನಕ್ಕೆ ನೂರಾರು ಅಮಾಯಕರು ಬಲಿ, 3 ಧರ್ಮಗಳ ತವರೂರು ಈಗ ರಕ್ತಸಿಕ್ತ

   ಇದೇ ರೀತಿ ಅಮೆರಿಕದಲ್ಲೂ ಅಧ್ಯಕ್ಷ ಬೈಡನ್ ಮೇಲೆ ಈ ರೀತಿಯ ಒತ್ತಡ ಹೆಚ್ಚಾಗಿದ್ದು, ಇಸ್ರೇಲ್ ಪ್ರಧಾನಿಗೆ ಬೈಡನ್ ಖುದ್ದಾಗಿ ಫೋನ್ ಕಾಲ್ ಮಾಡಿದ್ದಾರೆ. ಹಾಗೂ ಇಸ್ರೇಲ್ ನಡೆಸುತ್ತಿರುವ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡುವುದಾಗಿ ಘೋಷಿರುವ ಜೋ ಬೈಡನ್, ಅಮಾಯಕರ ರಕ್ತಪಾತ ಮಾಡಬೇಡಿ ದಯವಿಟ್ಟು ಎಂದು ಮನವಿ ಮಾಡಿದ್ದಾರೆ.

   ಅಲ್ಲದೆ ಕದನ ವಿರಾಮ ಘೋಷಿಸಿ ಎಂದು ಮನವಿಯನ್ನೂ ಮಾಡಿದ್ದಾರೆ. ಹೀಗೆ ಬೈಡನ್ ಒಂದೇ ವಾರದಲ್ಲಿ 2ನೇ ಬಾರಿಗೆ ಇಸ್ರೇಲ್ ಪ್ರಧಾನಿ ಬಳಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

   ಇಸ್ರೇಲ್ ಯುದ್ಧ ನಿಲ್ಲಿಸುತ್ತಾ..?

   ಇಸ್ರೇಲ್ ಯುದ್ಧ ನಿಲ್ಲಿಸುತ್ತಾ..?

   ಖಂಡಿತಾ ಇಸ್ರೇಲ್ ಯುದ್ಧ ನಿಲ್ಲಿಸುವುದಿಲ್ಲ ಮತ್ತು ತನ್ನ ಈಗಿನ ದಾಳಿಯನ್ನ ಇಸ್ರೇಲ್ ಪಡೆಗಳು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ತಜ್ಞರು. ಏಕೆಂದರೆ ಇಸ್ರೇಲ್ ಸುಮ್ಮನಿದ್ದರೂ ಹಮಾಸ್ ಉಗ್ರ ಪಡೆ ಸುಖಾಸುಮ್ಮನೆ ಇಸ್ರೇಲ್ ಮೇಲೆ ದಾಳಿ ಮಾಡಿದೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಇಸ್ರೇಲ್ ಈ ಬಾರಿ ರೊಚ್ಚಿಗೆದ್ದಿದೆ. ಹೀಗಾಗಿಯೇ ತೀವ್ರವಾಗಿ ಪ್ರತಿದಾಳಿ ನಡೆಸುತ್ತಿದೆ ಇಸ್ರೇಲ್. ಇದರ ಪರಿಣಾಮವೇ ಗಾಜಾ ಪಟ್ಟಿ ಅಕ್ಷರಶಃ ಸ್ಮಶಾನ ರೂಪ ಪಡೆದಿದೆ. ಬೈಡನ್ ಕೇಳಿಕೊಂಡರೂ ಯುದ್ಧ ನಿಲ್ಲುವುದು ಅನುಮಾನ ಎನ್ನಲಾಗುತ್ತಿದೆ. ತಕ್ಷಣಕ್ಕೆ ಯುದ್ಧ ನಿಂತರೂ ಮತ್ತೆ ಯುದ್ಧ ಆರಂಭವಾಗುವ ಅಪಾಯವೇ ಹೆಚ್ಚಾಗಿದೆ.

   ಅಮೆರಿಕ-ಇಸ್ರೇಲ್ ಕುಚಿಕು..!

   ಅಮೆರಿಕ-ಇಸ್ರೇಲ್ ಕುಚಿಕು..!

   ಇಸ್ರೇಲ್ ಹಾಗೂ ಅಮೆರಿಕದ ಸ್ನೇಹದ ಬಗ್ಗೆ ಹೇಳಲು ಪುಟಗಳೇ ಸಾಲದು. ಅಮೆರಿಕ ಎಂದರೆ ಇಸ್ರೇಲ್‌ಗೆ ಅಚ್ಚುಮೆಚ್ಚು ಹಾಗೂ ನಂಬಿಕಸ್ಥ ಗೆಳೆಯ. ಹಾಗೇ ಅಮೆರಿಕ ಕೂಡ ಇಸ್ರೇಲ್ ಜೊತೆಗಿನ ಸ್ನೇಹವನ್ನ ಹಾಳು ಮಾಡಿಕೊಳ್ಳಲು ಇಷ್ಟಪಡುತ್ತಿಲ್ಲ. ಹೀಗಾಗಿಯೇ ಯುದ್ಧ ನಿಲ್ಲಿಸಲು ಇಸ್ರೇಲ್ ಮೇಲೆ ಜೋ ಬೈಡನ್ ಒತ್ತಡ ಹಾಕುತ್ತಿಲ್ಲ. ಬದಲಾಗಿ ಇಸ್ರೇಲ್ ಪ್ರಧಾನಿಯ ಮನವೊಲಿಸಲು ಬೈಡನ್ ಯತ್ನಿಸಿದ್ದಾರೆ. ಆದರೆ ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡವಾಗಿದ್ದು, ದ್ವೇಷದ ಜ್ವಾಲೆ ಯಾವಾಗ ಬೇಕಾದರೂ ಆರ್ಭಟಿಸಬಹುದು. ಹೀಗಾಗಿಯೇ ಗಾಜಾ ಪಟ್ಟಿಯ ಜನರು ಜೀವ ಕೈಯಲ್ಲಿಡಿದು ದಿನದೂಡುತ್ತಿದ್ದಾರೆ.

   ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ

   ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ

   ಹಮಾಸ್ ಉಗ್ರರ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದಾರೆ. ಈ ಮೂಲಕ ಹಮಾಸ್ ಉಗ್ರ ಪಡೆಯನ್ನ ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮತ್ತೊಂದ್ಕಡೆ ನಾವಿನ್ನೂ ಕಾರ್ಯಾಚರಣೆ ಮಧ್ಯದಲ್ಲಿದ್ದು, ಗುರಿ ಮುಟ್ಟಿಲ್ಲ ಎಂದು ಹೇಳಿದ್ದಾರೆ ನೆತನ್ಯಾಹು. ಹೀಗೆ ಇಸ್ರೇಲ್ ಯದ್ಧದಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶವನ್ನೂ ಪರೋಕ್ಷವಾಗಿ ರವಾನಿಸಿದ್ದಾರೆ ನೆತನ್ಯಾಹು.

   ಇಸ್ರೇಲ್-ಪ್ಯಾಲೆಸ್ತೇನ್‌ ನಡುವೆ ದಾಳಿ-ಪ್ರತಿದಾಳಿ

   ಇಸ್ರೇಲ್-ಪ್ಯಾಲೆಸ್ತೇನ್‌ ನಡುವೆ ದಾಳಿ-ಪ್ರತಿದಾಳಿ

   ಜಗತ್ತು ಕೊರೊನಾ ಕಿಚ್ಚಿನಲ್ಲಿ ಬೇಯುತ್ತಿದ್ದರೆ ಮಧ್ಯಪ್ರಾಚ್ಯ ಕೋಮು ಘರ್ಷಣೆಯಲ್ಲಿ ತೊಡಗಿದೆ. ಮತ್ತೊಂದೆಡೆ ಇಸ್ರೇಲ್-ಪ್ಯಾಲೆಸ್ತೇನ್‌ ನಡುವೆ ದಾಳಿ-ಪ್ರತಿದಾಳಿ ನಡೆಯುತ್ತಿರುವುದನ್ನು ನೋಡಿದರೆ 3ನೇ ಮಹಾಯುದ್ಧದ ಭೀತಿ ಆವರಿಸುತ್ತಿದೆ. ಏಕೆಂದರೆ ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್‌ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಇಸ್ರೇಲ್-ಪ್ಯಾಲೆಸ್ತೇನ್‌ ಕಿತ್ತಾಟ 3ನೇ ಮಹಾಯುದ್ಧದ ಆತಂಕವನ್ನು ತಂದೊಡ್ಡಿದೆ. ಪರಸ್ಪರ ರಾಕೆಟ್ ದಾಳಿಗೆ ಎರಡೂ ದೇಶಗಳು ಮುಂದಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.

   1967 ರ ಅರಬ್-ಇಸ್ರೇಲಿ ಯುದ್ಧದ ಸಮಯ

   1967 ರ ಅರಬ್-ಇಸ್ರೇಲಿ ಯುದ್ಧದ ಸಮಯ

   1967 ರ ಅರಬ್-ಇಸ್ರೇಲಿ ಯುದ್ಧದ ಸಮಯದಲ್ಲಿ ಇಸ್ರೇಲಿ ಪಡೆಗಳು ಭೂಪ್ರದೇಶವನ್ನು ವಶಪಡಿಸಿಕೊಂಡ ನೆನಪಿಗೆ ಮೆರವಣಿಗೆ ಆಯೋಜಿಸಲಾಗಿತ್ತು. ವಿಜಯದ ದಿನವನ್ನ ನೆನಪಿಸಿಕೊಳ್ಳುವ ಸಲುವಾಗಿ ಯಹೂದಿಗಳು ಜೆರುಸಲೇಂನ ಓಲ್ಡ್ ಸಿಟಿಯಲ್ಲಿ ಮೆರವಣಿಗೆಗೆ ಸಿದ್ಧತೆ ನಡೆಸಿದ್ದರು. ಆದರೆ ಮೆರವಣಿಗೆ ಆಯೋಜನೆ ಮಾಡಿದ್ದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎನ್ನಲಾಗುತ್ತಿದೆ. ಹೀಗೆ ಹಿಂಸೆ ಭುಗಿಲೇಳುತ್ತಲೇ ಇಸ್ರೇಲಿ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆ. ಇಸ್ರೇಲಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದೇ ತಡ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಇದಾದ ಬಳಿಕ ಪ್ಯಾಲೆಸ್ತೇನ್ ಹಾಗೂ ಇಸ್ರೇಲ್ ನಡುವೆ ಹಿಂಸೆ ಆರಂಭವಾಗಿ, ಗಾಜಾ ಪಟ್ಟಿ ಮೇಲೆ ನಡೆಯುತ್ತಿರುವ ದಾಳಿಗೆ 200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

   English summary
   Biden requests Israel to stop attacking on Gaza after pressure raised on him.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X