• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚೀನಾ To ಅಮೆರಿಕಾ: ದೇಶ ತೊರೆದ ಸಚಿವರೇ ಹೇಳಿದ ಕೊರೊನಾವೈರಸ್ ಕಥೆ!

|
Google Oneindia Kannada News

ನವದೆಹಲಿ, ಜೂನ್ 20: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹರಡುವಿಕೆ ನಡುವೆ ಚೀನಾದ ಮುಖವಾಡವನ್ನು ಕಳಚುವಂತಾ ಘಟನೆ ನಡೆದಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ.

ಚೀನಾದ ರಾಜ್ಯ ಭದ್ರತೆಯ ಉಪ ಸಚಿವ ಡೊಂಗ್ ಜಿಂಗ್ವಾಯ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ತೆರಳಿದ್ದಾರೆ. ವುಹಾನ್ ಸೂಕ್ಷ್ಮಾಣು ಜೀವಗಳ ಸಂಸ್ಥೆಯಿಂದ ಕೊರೊನಾ ವೈರಸ್ ಸೋರಿಕೆ ಆಗಿರುವ ಬಗ್ಗೆ ಕೆಲವು ಗೌಪ್ಯ ಸಂಗತಿಗಳನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಎದುರು ಬಿಚ್ಚಿಟ್ಟಿದ್ದಾರೆ ಎಂದು ವರದಿಯಾಗಿದೆ.

ವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನವುಹಾನ್‌ ಲ್ಯಾಬ್‌ನಿಂದ ಕೊರೊನಾ ಸೋರಿಕೆಯಾಗಿರಬಹುದು: ಯುಎಸ್‌ ಅಧ್ಯಯನದ ಅಂತಿಮ ತೀರ್ಮಾನ

ಚೀನಾ ಭಾಷೆಯ ಕಮ್ಯುನಿಸ್ಟ್ ವಿರೋಧಿ ಮಾಧ್ಯಮ ಸ್ಪೇ ಟಾಕ್ ವರದಿ ಪ್ರಕಾರ, ಫೆಬ್ರವರಿ ಮಧ್ಯಭಾಗದಲ್ಲಿ ಹಾಂಗ್ ಕಾಂಗ್ ಮೂಲಕ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾಗೆ ಚೀನಾದ ಡೊಂಗ್ ಜಿಂಗ್ವಾಯ್ ತಮ್ಮ ಪುತ್ರಿ ಡೊಂಗ್ ಯಾಂಗ್ ಜೊತೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಚೀನಾದ ವುಹಾನ್ ವೈರಾಲಜಿ ಲ್ಯಾಬ್ ಬಗ್ಗೆ ಸಂಪೂರ್ಣ ಮಾಹಿತಿ

ಚೀನಾದ ವುಹಾನ್ ವೈರಾಲಜಿ ಲ್ಯಾಬ್ ಬಗ್ಗೆ ಸಂಪೂರ್ಣ ಮಾಹಿತಿ

ಯುಎಸ್ ಗುಪ್ತಚರ ಇಲಾಖೆ, ಭದ್ರತೆ ಮತ್ತು ವಿದೇಶಾಂಗ ನೀತಿಗೆ ಅನುಗುಣವಾಗಿ ವೇದಿಕೆ ಕಲ್ಪಿಸಿ ಕೊಡಲಾಗಿದೆ ಎಂದು ಸ್ಪೇ ಟಾಕ್ ವರದಿ ಮಾಡಿದೆ. 'ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂಲ ಮತ್ತು ವುಹಾನ್ ವೈರಾಲಜಿ ಲ್ಯಾಬ್ ಬಗ್ಗೆ ಅಮೆರಿಕಾದ ಆಡಳಿತಾಧಿಕಾರಿಗೆ ಚೀನಾದ ವೈಸ್ ಮಿನಿಸ್ಟರ್ ಡೊಂಗ್ ಜಿಂಗ್ವಾಯ್ ಮಾಹಿತಿ ನೀಡಿದ್ದಾರೆ,' ಎಂದು ವರದಿಯಾಗಿದೆ.

ಚೀನಾ ಬಿಟ್ಟು ಹೋಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ

ಚೀನಾ ಬಿಟ್ಟು ಹೋಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳ

'ಒಂದು ವೇಳೆ ವದಂತಿ ನಿಜವಾಗಿದ್ದಲ್ಲಿ ಅದು ಅಧಿಕಾರಿಗಳು, ವಿಜ್ಞಾನಿಗಳು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಅತಿಹೆಚ್ಚಿನ ಸಂಖ್ಯೆಯಲ್ಲಿ ದೇಶ ಬಿಟ್ಟು ಹೋಗುತ್ತಿರುವುದು ಚೀನಾದ ಇತಿಹಾಸದಲ್ಲೇ ಮೊದಲಾಗುತ್ತದೆ'.

ಚೀನಾ ಭದ್ರತಾ ಸಚಿವಾಲಯದಲ್ಲಿ ಡೊಂಗ್ ಕಾರ್ಯ

ಚೀನಾ ಭದ್ರತಾ ಸಚಿವಾಲಯದಲ್ಲಿ ಡೊಂಗ್ ಕಾರ್ಯ

ಚೀನಾದ ರಾಜ್ಯ ಭದ್ರತಾ ಸಚಿವಾಲಯದಲ್ಲಿ ಸುದೀರ್ಘ ಅವಧಿವರೆಗೂ ಡೊಂಗ್ ಕಾರ್ಯ ನಿರ್ವಹಿಸಿದ್ದು, ಇವರು ಗುವಾಂಬು ಎಂದು ಚಿರಪರಿಚಿತರಾಗಿ ಇದ್ದರು. ಡೊಂಗ್ ಜಿಂಗ್ವಾಯ್ ಹಿನ್ನೆಲೆ ಗಮನಿಸಿದಾಗ 2018ರ ಏಪ್ರಿಲ್ ತಿಂಗಳಿನಲ್ಲಿ ಚೀನಾದ ವೈಸ್ ಮಿನಿಸ್ಟರ್ ಆಗಿ ನೇಮಕಗೊಳ್ಳುವುದಕ್ಕಿಂತ ಮೊದಲು ಚೀನಾದ ಗುಪ್ತಚರ ಇಲಾಖೆಗಿಂತ ಉನ್ನತ ಹುದ್ದೆಯಲ್ಲಿ ಸುದೀರ್ಘ ಅವಧಿವರೆಗೂ ಕಾರ್ಯ ನಿರ್ವಹಿಸಿರುವುದು ಗೊತ್ತಾಗುತ್ತದೆ.

ಕಳೆದ 1989ರ ಟಿಯಾನನ್ಮೆನ್ ಸ್ಕ್ವೇರ್ ಹತ್ಯಾಕಾಂಡದ ನಂತರ ಪಕ್ಷಾಂತರಗೊಂಡ ಚೀನಾದ ಮಾಜಿ ವಿದೇಶಾಂಗ ಸಚಿವಾಲಯದ ಅಧಿಕಾರಿಯಾಗಿದ್ದ ಹ್ಯಾನ್ ಲಿಯಾಂಚಾವೊ, ಅಲಾಸ್ಕಾದ ಸಿನೋ-ಅಮೇರಿಕನ್ ಶೃಂಗಸಭೆಯಲ್ಲಿ ಚೀನಾದ ಅಧಿಕಾರಿಗಳು ಡೊಂಗ್ ಪಕ್ಷಾಂತರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾಹಿತಿಯಿದೆ.

ಚೀನಾದ ಪ್ರಸ್ತಾಪ ತಿರಸ್ಕರಿಸಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ

ಚೀನಾದ ಪ್ರಸ್ತಾಪ ತಿರಸ್ಕರಿಸಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ

ಟ್ವಿಟರ್‌ಗೆ ಈ ಬಗ್ಗೆ ಸ್ಪಷ್ಟಪಡಿಸಲಾಗಿದ್ದು, ಅಮಾನಧೇಯ ಮೂಲವೊಂದನ್ನು ಉಲ್ಲೇಖಿಸಿದ ಹ್ಯಾನ್, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಕಮ್ಯುನಿಸ್ಟ್ ಪಕ್ಷದ ವಿದೇಶಾಂಗ ವ್ಯವಹಾರಗಳ ಮುಖ್ಯಸ್ಥ ಯಾಂಗ್ ಜೀಚಿ ಚೀನಾಗೆ, ಡೊಂಗ್ ಅನ್ನು ಹಿಂತಿರಿಗಿಸುವಂತೆ ಒತ್ತಾಯಿಸಿದ್ದರು. ಆದರೆ ಈ ಪ್ರಸ್ತಾಪವನ್ನು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ನಿರಾಕರಿಸಿದ್ದಾರೆ. ಈ ವದಂತಿಯು ನಿಜವಾಗಿದ್ದರೆ, "ಇದು ನಿಜವಾಗಿಯೂ ದೊಡ್ಡ ಬಾಂಬ್" ಎಂದು ಹ್ಯಾನ್ ಹೇಳಿದ್ದಾರೆ.

ಡೊಂಗ್ ಪಕ್ಷಾಂತರದ ಬಗ್ಗೆ ವರದಿಗಳ ಹರಿದಾಟ

ಚೀನಾ ವೈಸ್ ಮಿನಿಸ್ಟರ್ ಡೊಂಗ್ ಜಾಂಗ್ವಾಯ್ ಸೇರಿದಂತೆ ಹಲವರ ಪಕ್ಷಾಂತರವನ್ನು ದೃಢಪಡಿಸದ ವರದಿಗಳು ನಿಯಮಿತವಾಗಿ ಹರಿದಾಡುತ್ತಿವೆ ಎಂದು ಹಲವಾರು ತಜ್ಞರು ನೀಡಿದ ಹೇಳಿಕೆ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಪೆಂಟಗನ್ ರಾಜ್ಯ ಇಲಾಖೆ ಮತ್ತು ಸಿಐಎ ತಜ್ಞ ನಿಕೋಲಸ್ ಎಫ್ಟಿಮಿಯೇಡ್ಸ್ ಈ ವರದಿಯನ್ನು "ನಿಖರವಾಗಿ ಏನು, ಒಂದು ವದಂತಿ" ಎಂದು ಕರೆದಿದ್ದಾರೆ. ಬೀಜಿಂಗ್ ಮತ್ತು ಕಮ್ಯುನಿಸ್ಟ್ ವಿರೋಧಿ ಸಾಗರೋತ್ತರ ಚೀನೀಯರ ನಡುವಿನ ಮಾಹಿತಿ ಯುದ್ಧದಲ್ಲಿ ಇದು ಸಾರ್ವಕಾಲಿಕ ನಡೆಯುತ್ತದೆ ಎಂದು ನಿಕೋಲಸ್ ಹೇಳಿದ್ದಾರೆ.

ದಿ ಸೌಫನ್ ಗ್ರೂಪ್‌ನ ಹಿರಿಯ ಗುಪ್ತಚರ ವಿಶ್ಲೇಷಕ ಮೊಲ್ಲಿ ಸಾಲ್ಟ್‌ಸ್ಕಾಗ್ ಕೂಡ ಎಚ್ಚರಿಕೆಯಿಂದ ಒತ್ತಾಯಿಸಿದ್ದಾರೆ. ಚೀನಾದ ತಜ್ಞರ ಪಕ್ಷಾಂತರಗಳನ್ನು ದೃಢೀಕರಿಸದ ವರದಿಗಳು ನಿಯಮಿತವಾಗಿ ಹರಡುತ್ತಿವೆ ಎಂದು ಹೇಳಿದ್ದಾರೆ.

ವುಹಾನ್ ಪ್ರಯೋಗಾಲಯದಲ್ಲಿ ಜೈವಿಕ ಯುದ್ಧ ಸಂಶೋಧನೆ

ವುಹಾನ್ ಪ್ರಯೋಗಾಲಯದಲ್ಲಿ ಜೈವಿಕ ಯುದ್ಧ ಸಂಶೋಧನೆ

"ಕಳೆದ 2020ರ ಸಪ್ಟೆಂಬರ್ ತಿಂಗಳಿನಲ್ಲಿ ಕೊನೆಯದಾಗಿ ಡೊಂಗ್ ಜಾಂಗ್ವಾಯ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಚೀನಾದ 'ಬೈಡು' ಸರ್ಜ್ ಇಂಜಿನ್ ನಿಂದ ಆತನ ಫೋಟೋಗಳನ್ನು ತೆಗೆದು ಹಾಕಲಾಗಿದೆ, ಎಂದು ಹ್ಯಾನ್ ತಿಳಿಸಿದ್ದಾರೆ. "ಡೊಂಗ್ ಜಾಂಗ್ಲಾಯ್ ಹೆಸರನ್ನು ಉಲ್ಲೇಖಿಸದೇ ಮಾತನಾಡಿದ ಅವರು, ಟ್ರಂಪ್ ಪರವಾದ ದೊಡ್ಡ ತಂಡವೊಂದು ಅಮೆರಿಕಾಗೆ ಪಕ್ಷಾಂತರ ಆಗಿದೆ. ವುಹಾನ್ ವೈರಾಲಜಿ ಪ್ರಯೋಗಾಲಯದಲ್ಲಿ ನಡೆಯುತ್ತಿರುವ ಜೈವಿಕ ಯುದ್ಧ ಸಂಶೋಧನೆಗಳನ್ನು ಚೀನಾದ ಗುಪ್ತಚರ ಇಲಾಖೆಯಿಂದಲೂ ಗೌಪ್ಯವಾಗಿ ಇರಿಸಲಾಗುತ್ತಿದೆ," ಎಂದಿದ್ದಾರೆ.

ಕೊರೊನಾವೈರಸ್ ಮನುಷ್ಯರಲ್ಲಿ ಕಾಣಿಸಿಕೊಂಡಿದ್ದು ಹೇಗೆ?

ಕೊರೊನಾವೈರಸ್ ಮನುಷ್ಯರಲ್ಲಿ ಕಾಣಿಸಿಕೊಂಡಿದ್ದು ಹೇಗೆ?

ಇಂದು ಜಗತ್ತಿನ ಬಲಿಷ್ಠ ರಾಷ್ಟ್ರಗಳನ್ನೇ ಚಿಂತೆಗೀಡು ಮಾಡಿರುವ ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ಮೊದಲು ಕಾಣಿಸಿಕೊಂಡಿದ್ದು ಎಲ್ಲಿ ಎಂಬ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಒಂದು ಹಂತದಲ್ಲಿ ಚೀನಾದ ವುಹಾನ್ ನಗರದ ಹಸಿಮಾಂಸ ಮಾರಾಟದ ಮಾರುಕಟ್ಟೆಯಲ್ಲಿ ಕೊರೊನಾವೈರಸ್ ಹರಡಿತು ಎನ್ನಲಾಗುತ್ತಿದೆ. ಇನ್ನೊಂದು ಕಡೆ ವುಹಾನ್ ವೈರಾಲಜಿ ಸಂಸ್ಥೆಯಿಂದ ಉದ್ದೇಶಪೂರ್ವಕವಾಗಿ ರೋಗಾಣುವನ್ನು ಸೋರಿಕೆ ಮಾಡಲಾಗಿದೆ ಎಂಬ ಶಂಕೆಯಿದೆ.

ಕೊರೊನಾವೈರಸ್ ಮೂಲ ಹುಡುಕಾಟಕ್ಕೆ ಪಟ್ಟು

ಕೊರೊನಾವೈರಸ್ ಮೂಲ ಹುಡುಕಾಟಕ್ಕೆ ಪಟ್ಟು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂಲ ಯಾವುದು ಎಂಬ ಬಗ್ಗೆ ಆಳವಾದ ತನಿಖೆ ನಡೆಸಬೇಕು ಎಂದು ಅಮೆರಿಕಾ, ಬ್ರಿಟನ್ ಅಂತ ದೊಡ್ಡ ರಾಷ್ಟ್ರಗಳು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಡ ಹೇರಿವೆ. ಚೀನಾದಲ್ಲಿ ಮೊದಲು ಸೋಂಕು ಕಾಣಿಸಿಕೊಂಡ ನಗರ ಮತ್ತು ಮಾರುಕಟ್ಟೆಗೆ ಭೇಟಿ ನೀಡಬೇಕು. ವುಹಾನ್ ವೈರಾಲಜಿಯಲ್ಲಿ ನಡೆಯುತ್ತಿರುವ ಪ್ರಯೋಗ ಮತ್ತು ಸೋಂಕಿನ ಮೂಲ ಎಲ್ಲಿದೆ ಎಂಬ ಬಗ್ಗೆ ತನಿಖೆಗೆ ತಂಡವನ್ನು ಕಳುಹಿಸಿ ಕೊಡಬೇಕು ಎಂದು ಒತ್ತಾಯಿಸಲಾಗುತ್ತಿದೆ.

ವುಹಾನ್ ವೈರಾಲಜಿಯಲ್ಲಿ WHO ಅಧಿಕಾರಿಗಳಿಗೆ ಪ್ರವೇಶವಿಲ್ಲ!

ವುಹಾನ್ ವೈರಾಲಜಿಯಲ್ಲಿ WHO ಅಧಿಕಾರಿಗಳಿಗೆ ಪ್ರವೇಶವಿಲ್ಲ!

ಕೊರೊನಾವೈರಸ್ ಸೋಂಕಿನ ಮೂಲವನ್ನು ಹುಡುಕಿ ಹೊರಟ ವಿಶ್ವ ಆರೋಗ್ಯ ಸಂಸ್ಥೆಯ ತನಿಖಾ ತಂಡಕ್ಕೆ ವುಹಾನ್ ನಗರ ಸೂಕ್ಷ್ಮರೋಗಾಣು ಶಾಸ್ತ್ರ ಅಧ್ಯಯನ ಸಂಸ್ಥೆಯಿಂದ ರೋಗಾಣು ಸೋರಿಕೆ ಆಗಿರುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹೇಳಿತ್ತು. ಆದರೆ ಇತ್ತೀಚಿಗೆ ಅದೇ WHO ತನಿಖಾ ತಂಡದಲ್ಲಿದ್ದ ಸದಸ್ಯರೊಬ್ಬರು ಚೀನಾದ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ವುಹಾನ್ ನಗರ ವೈರಾಲಜಿ ಸಂಸ್ಥೆಗೆ ಪ್ರವೇಶಿಸಲು ಹಾಗೂ ಕೊವಿಡ್-19 ಸೋಂಕಿನ ಆರಂಭಿಕ ಹಂತದ ದತ್ತಾಂಶವನ್ನು ನೀಡಲು ಚೀನಾ ನಿರಾಕರಿಸಿತ್ತು ಎಂದು ಹೇಳಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪೋಸ್ಟ್ ವರದಿ ಮಾಡಿದೆ.

English summary
Biden Admin Received Information About Wuhan Lab, After China's Top Official Defected To US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X