ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್‌ನಲ್ಲಿ ಮೊದಲ ಕೊರೊನಾ ಪ್ರಕರಣ: ವಿದೇಶಿಯರಿಗೆ ಎಂಟ್ರಿ ಇಲ್ಲ

|
Google Oneindia Kannada News

ನವದೆಹಲಿ, ಮಾರ್ಚ್ 7: ಭೂತಾನ್‌ನಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ವಿದೇಶಿಯರಿಗೆ ಸಧ್ಯಕ್ಕೆ ಭೂತಾನ್‌ನಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ಶುಕ್ರವಾರದಿಂದ ಎರಡು ವಾರಗಳ ಕಾಲ ವಿದೇಶಿಯರ ಭೇಟಿ ನಿಷೇಧಿಸಿದೆ. ಭೂತಾನ್‌ಗೆ ಪ್ರವಾಸಕ್ಕೆ ಬಂದಿದ್ದ ಅಮೆರಿಕದ ವ್ಯಕ್ತಿಯಲ್ಲಿ ಕೊರೊನಾ ಪತ್ತೆಯಾಗಿದೆ. ಆತ ಭೂತಾನ್‌ಗೆ ಬರುವ ಮೊದಲು ಅಸ್ಸಾಂಗೂ ಕೂಡ ಹೋಗಿಬಂದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

 ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌ ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌

ಹಾಗಾಗಿ ಭೂತಾನ್ ಸರ್ಕಾರವು ಕೆಲವು ದಿನಗಳ ಕಾಲ ವಿದೇಶಿಗರು ಭೂತಾನ್‌ಗೆ ಬರುವುದು ಬೇಡ ಎಂದು ಹೇಳಿದೆ. ಭುತಾನ್ ಎಲ್ಲಾ ವೈಮಾನಿಕ ಸಂಸ್ಥೆಗಳಿಗೂ ವಿಷಯ ತಿಳಿಸಿದ್ದು, ಸಧ್ಯಕ್ಕೆ ಯಾವುದೇ ವಿದೇಶಿಯರನ್ನು ಕರೆತರುವುದು ಬೇಡ ಎನ್ನುವ ಸೂಚನೆ ನೀಡಿದೆ.

Bhutan Reports First Case Of Coronavirus

ಭೂತಾನ್‌ನಲ್ಲಿ ಮೊದಲ ಕೊರೊನಾ ವೈರಸ್ ಪತ್ತೆಯಾದ ಬಳಿಕ ಅಸ್ಸಾಂನಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಅವರು ಭೂತಾನ್‌ನಿಂದ ಮಾರ್ಚ್ 2 ರಂದು ಗುವಾಹಟಿಗೂ ಹೋಗಿದ್ದರು. ಅವರು ಮುಂಬೈ, ಕೊಲ್ಕತ್ತ ಹಾಗೂ ಅಸ್ಸಾಂಗೆ ಹೋಗಿ ಬಂದಿದ್ದರು.

ಕುವೈತ್‌ ತೆರಳಬೇಕಾದರೆ ಭಾರತೀಯರು ಕೊರೊನಾ ವೈರಸ್ ಇಲ್ಲ ಎನ್ನುವ ಸರ್ಟಿಫಿಕೇಟ್ ನೀಡಬೇಕಿಲ್ಲ. ಚೀನಾದಲ್ಲಿ ಕೊರೊನಾದಿಂದ ಇದುವರೆಗೂ 3 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

English summary
Bhutan said on Friday it had banned the entry of tourists for two weeks after it confirmed its first case of the coronavirus, in a tourist who arrived form neighbouring India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X