ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್ ನ ಪ್ರಧಾನಿ ಶನಿವಾರ- ಗುರುವಾರ ಶುದ್ಧಾನು ಶುದ್ಧ ವೈದ್ಯೋ ನಾರಾಯಣೋ ಹರಿಃ

By ಅನಿಲ್ ಆಚಾರ್
|
Google Oneindia Kannada News

ಭೂತಾನ್ ನಲ್ಲಿ ವೈದ್ಯ ಲೋತೆ ತ್ಸೆರಿಂಗ್ ಶನಿವಾರದಂದು ಜಿಗ್ಮೆ ದೋರ್ಜಿ ವಾಂಗ್ ಚುಕ್ ನ್ಯಾಷನಲ್ ರೆಫರಲ್ ಆಸ್ಪತ್ರೆಯಲ್ಲಿ ಒಬ್ಬ ರೋಗಿಗೆ ಮೂತ್ರ ಕೋಶದ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ಅದೆಂಥ ಅಚ್ಚರಿ ಅಂತೀರಾ? ವಾರದ ಉಳಿದ ದಿನಗಳಲ್ಲಿ ಈ ವೈದ್ಯರು ಆ ದೇಶದ ಪ್ರಧಾನಮಂತ್ರಿ. ಹೌದು, ಅತ್ಯಂತ ಸಂತುಷ್ಟ ದೇಶ ಭೂತಾನ್ ಪ್ರಧಾನಿ ವೈದ್ಯರೂ ಹೌದು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ನನ್ನ ಪಾಲಿಗೆ ಇದು ಒತ್ತಡ ನಿವಾರಿಸಿಕೊಳ್ಳುವ ದಾರಿ ಎನ್ನುತ್ತಾರೆ ತ್ಸೆರಿಂಗ್. ಏಳೂವರೆ ಲಕ್ಷ ಜನರಿಂದ ಕಳೆದ ವರ್ಷ ಚುನಾಯಿತರಾದ ಪ್ರಧಾನಿ ಅವರು. "ಕೆಲವರು ಗಾಲ್ಫ್ ಆಡುತ್ತಾರೆ. ಕೆಲವರು ಆರ್ಚರಿ. ನಾನು ಆಪರೇಷನ್ ಮಾಡಲು ಬಯಸುತ್ತೇನೆ. ನನ್ನ ವಾರಾಂತ್ಯಗಳನ್ನು ಇಲ್ಲಿ ಕಳೆಯುತ್ತೇನೆ" ಎನ್ನುತ್ತಾರೆ ಐವತ್ತು ವರ್ಷದ ತ್ಸೆರಿಂಗ್.

ಭಾರತಸ್ನೇಹಿ ದೇಶ ಭೂತಾನ್ ಎಂಬ ಭೂ ಲೋಕದ ಸ್ವರ್ಗಭಾರತಸ್ನೇಹಿ ದೇಶ ಭೂತಾನ್ ಎಂಬ ಭೂ ಲೋಕದ ಸ್ವರ್ಗ

ಹಾಗಂತ ತ್ಸೆರಿಂಗ್ ಅವರು ಬಂದರು ಅನ್ನೋ ಕಾರಣಕ್ಕೆ ವಿಶೇಷವಾದ ಗೌರವ ಏನಿಲ್ಲ. ನರ್ಸ್ ಗಳು ತಮ್ಮಷ್ಟಕ್ಕೆ ಕೆಲಸ ಮಾಡುತ್ತಾರೆ. ರೋಗಿಗಳು ತಮ್ಮಷ್ಟಕ್ಕೆ ತಾವಿರುತ್ತಾರೆ. ಶೇಕಡಾ ಅರವತ್ತರಷ್ಟು ಅರಣ್ಯ ಪ್ರದೇಶವೇ ಇರುವ ಈ ದೇಶದಲ್ಲಿ ವಾಯು ಮಾಲಿನ್ಯ ಇಲ್ಲ. ಒಳ್ಳೆ ಸೀಸನ್ ಇರುವ ವೇಳೆ ಪ್ರವಾಸಿಗರಿಗೆ ದಿನಕ್ಕೆ ಇನ್ನೂರೈವತ್ತು ಅಮೆರಿಕನ್ ಡಾಲರ್ ಶುಲ್ಕ ವಿಧಿಸುತ್ತಾರೆ.

 ಥಿಂಪುವಿನಲ್ಲಿ ಟ್ರಾಫಿಕ್ ದೀಪಗಳಿರುವುದಿಲ್ಲ

ಥಿಂಪುವಿನಲ್ಲಿ ಟ್ರಾಫಿಕ್ ದೀಪಗಳಿರುವುದಿಲ್ಲ

ರಾಜಧಾನಿ ಥಿಂಪುವಿನಲ್ಲಿ ಟ್ರಾಫಿಕ್ ದೀಪಗಳಿರುವುದಿಲ್ಲ. ತಂಬಾಕು ಮಾರಾಟಕ್ಕೆ ನಿರ್ಬಂಧವಿದೆ. ಇಪ್ಪತ್ತು ವರ್ಷದಿಂದ ಈಚೆಗೆ ಟೀವಿಯ ಬಳಕೆಗೆ ಅವಕಾಶ ನೀಡಲಾಗಿದೆ. ತ್ಸೆರಿಂಗ್ ಅವರು ಬಾಂಗ್ಲಾದೇಶ್, ಜಪಾನ್, ಆಸ್ಟ್ರೇಲಿಯಾ, ಅಮೆರಿಕದಲ್ಲಿ ತರಬೇತಿ ಪಡೆದಿದ್ದಾರೆ. ಆರು ವರ್ಷಗಳ ಹಿಂದೆ ತಮ್ಮ ರಾಜಕೀಯ ಜೀವನ ಆರಂಭಿಸಿದ್ದಾರೆ. ಆ ವರ್ಷದ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಗೆಲುವು ದಾಖಲಿಸಲು ಆಗಲಿಲ್ಲ. ಆ ಸೋಲಿನ ನಂತರ ದೂರದ ಹಳ್ಳಿ ಹಳ್ಳಿಗೂ ತೆರಳಿ ತ್ಸೆರಿಂಗ್ ವೈದ್ಯಕೀಯ ಚಿಕಿತ್ಸೆ ನೀಡಿದ್ದರು. ಈಗ ಪ್ರಧಾನಿಯಾದ ಮೇಲೆ ಶನಿವಾರದಂದು ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ಮತ್ತು ಗುರುವಾರದಂದು ವೈದ್ಯರಿಗೆ, ತರಬೇತಿಯಲ್ಲಿರುವವರಿಗೆ ಸಲಹೆ ನೀಡುವುದಕ್ಕೆ ಹಾಗೂ ಭಾನುವಾರ ತಮ್ಮ ಕುಟುಂಬಕ್ಕೆ ಮೀಸಲಿಟ್ಟಿದ್ದಾರೆ.

 ಪ್ರಧಾನಿ ಕಚೇರಿಯ ಕುರ್ಚಿಗೆ ಒಂದು ಲ್ಯಾಬ್ ಕೋಟ್

ಪ್ರಧಾನಿ ಕಚೇರಿಯ ಕುರ್ಚಿಗೆ ಒಂದು ಲ್ಯಾಬ್ ಕೋಟ್

ಇನ್ನು ಪ್ರಧಾನಿ ಕಚೇರಿಯ ಕುರ್ಚಿಗೆ ಒಂದು ಲ್ಯಾಬ್ ಕೋಟ್ ನೇತು ಹಾಕಿರುತ್ತದೆ. ಇದ್ಯಾಕೆ ಅಂತ ಅವರನ್ನು ಕೇಳಿದರೆ, ಆರೋಗ್ಯ್ ರಕ್ಷಣೆ ಬಗ್ಗೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ನೆನಪಿಸುವ ಸಲುವಾಗಿ ಎನ್ನುತ್ತಾರೆ ತ್ಸೆರಿಂಗ್. ಭೂತಾನ್ ನಲ್ಲಿ ರೋಗಿಗಳು ವೈದ್ಯಕೀಯ ಸೌಲಭ್ಯಕ್ಕೆ ನೇರವಾಗಿ ಹಣ ನೀಡುವ ಅಗತ್ಯವಿಲ್ಲ. ಅಷ್ಟೇ ಸಾಲುವುದಿಲ್ಲ ಎಂಬುದು ಪ್ರಧಾನಿಗಳ ಅಭಿಪ್ರಾಯ. ಇನ್ನು ತ್ಸೆರಿಂಗ್ ರಿಂದ ಚಿಕಿತ್ಸೆ ಪಡೆದ ರೋಗಿಯನ್ನು ಮಾತನಾಡಿಸಿದರೆ, ನನಗೆ ಈಗ ಪ್ರಧಾನಿಗಳು ಶಸ್ತ್ರಚಿಕಿತ್ಸೆ ಮಾಡಿದರು. ಅವರು ಈ ದೇಶದ ಉತ್ತಮ ವೈದ್ಯರಲ್ಲಿ ಒಬ್ಬರು. ನನಗೆ ಹೆಚ್ಚು ಸಮಾಧಾನ ಇದೆ ಎನ್ನುತ್ತಾರೆ.

 ನೀತಿ- ನಿಯಮಗಳ ಆರೋಗ್ಯ ಸ್ಕ್ಯಾನ್ ಮಾಡ್ತೀನಿ

ನೀತಿ- ನಿಯಮಗಳ ಆರೋಗ್ಯ ಸ್ಕ್ಯಾನ್ ಮಾಡ್ತೀನಿ

ರಾಜಕಾರಣ ಹಾಗೂ ವೈದ್ಯಕೀಯ ವೃತ್ತಿ ಎರಡೂ ಒಂದೇ ಥರ ಅನ್ನೋದು ತ್ಸೆರಿಂಗ್ ಮಾತು. ಆಸ್ಪತ್ರೆಯಲ್ಲಿ ನಾನು ರೋಗಿಗಳನ್ನು ಸ್ಕ್ಯಾನ್ ಮಾಡ್ತೀನಿ, ಚಿಕಿತ್ಸೆ ನೀಡ್ತೀನಿ. ಇನ್ನು ಸರಕಾರದಲ್ಲಿ ನಾನು ನೀತಿ- ನಿಯಮಗಳ ಆರೋಗ್ಯ ಸ್ಕ್ಯಾನ್ ಮಾಡ್ತೀನಿ ಮತ್ತು ಅವುಗಳನ್ನು ಉತ್ತಮ ಪಡಿಸುವುದಕ್ಕೆ ಯತ್ನಿಸುತ್ತೀನಿ. ಇದನ್ನು ನಾನು ಬದುಕಿರುವ ತನಕ ಮುಂದುವರಿಸುತ್ತೀನಿ. ಇಲ್ಲಿ ಇರಲು ಸಾಧ್ಯವಿರುವ ಯಾವ ದಿನವನ್ನೂ ತಪ್ಪಿಸುವುದಿಲ್ಲ ಎನ್ನುತ್ತಾರೆ. ನಾನು ಯಾವಾಗೆಲ್ಲ ವಾರದ ದಿನಗಳಲ್ಲಿ ಕೆಲಸದ ಕಡೆಗೆ ಕಾರನ್ನು ಚಾಲನೆ ಮಾಡಿಕೊಂಡು ಹೋಗ್ತಾ ಇರ್ತೀನೋ ಆಗೆಲ್ಲ ಎಡಕ್ಕೆ ಆಸ್ಪತ್ರೆಗೆ ಹೋಗೋಣವಾ ಅಂತ ಅನ್ನಿಸುತ್ತಲೇ ಇರುತ್ತದೆ ಎನ್ನುತ್ತಾರೆ ತ್ಸೆರಿಂಗ್.

 ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾದ ದೇಶವಿದು

ಪರಿಸರ ಪ್ರವಾಸೋದ್ಯಮಕ್ಕೆ ಹೆಸರಾದ ದೇಶವಿದು

ಭೂತಾನ್ ನಲ್ಲಿ ಸಮಸ್ಯೆಗಳೇ ಇಲ್ಲ ಅಂತಲ್ಲ. ಅಲ್ಲೂ ಭ್ರಷ್ಟಾಚಾರ ಇದೆ, ಗ್ರಾಮೀಣ ಬಡತನ ಇದೆ, ಯುವ ಜನರಲ್ಲಿ ನಿರುದ್ಯೋಗ ಇದೆ ಮತ್ತು ಅಪರಾಧಿಗಳ ತಂಡಗಳಿವೆ. ಆದರೆ ಇವೆಲ್ಲವನ್ನೂ ಹೊರತುಪಡಿಸಿಯೂ ಇಲ್ಲಿನ ಜನರು ಸಂತುಷ್ಟರಾಗಿದ್ದಾರೆ. ಈ ಜನರ ಸಂತೋಷಕ್ಕೆ ಮುಖ್ಯ ಕಾರಣ ಆಗಿರುವುದು ಇವರು ಉಳಿಸಿಕೊಂಡಿರುವ ಪರಿಸರ. ಕಾರ್ಬನ್ ಅಂಶ ನೆಗೆಟಿವ್ ಇರುವಂಥ ದೇಶ ಇದು. ಪರಿಸರ ಪ್ರವಾಸೋದ್ಯಮಕ್ಕೆ ಭೂತಾನ್ ಹೆಸರುವಾಸಿ. ಇಲ್ಲಿನ ಆರ್ಥಿಕ ಅಭಿವೃದ್ಧಿ ಮತ್ತೊಂದು ಏನನ್ನೂ ಗಣನೆಗೆ ತೆಗೆದುಕೊಳ್ಳದೆ ಹೇಳಬಹುದಾದ ಗಟ್ಟಿ ಮಾತೆಂದರೆ, ಭೂತಾನ್ ಅದ್ಭುತವಾದ ದೇಶ.

English summary
Lotay Tshering is no ordinary doctor. During the week, he also happens to be Prime Minister in Bhutan. Patients treatment like de- stresser for me said Tshering, who was elected Prime Minister of Bhutan people last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X