ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂತಾನ್ ಐತಿಹಾಸಿಕ ನಿರ್ಧಾರ: ತಂಬಾಕು ಮಾರಾಟದ ಮೇಲಿನ ನಿಷೇಧ ಹಿಂಪಡೆತ

|
Google Oneindia Kannada News

ಆಗಸ್ಟ್ 29: ಸಂಪೂರ್ಣ ತಂಬಾಕು ನಿಷೇಧಿಸಿದ ರಾಷ್ಟ್ರವೆಂಬ ಹೆಗ್ಗಳಿಕೆ ಹೊಂದಿರುವ ರಾಷ್ಟ್ರ ಭೂತಾನ್‌ ಇದೀಗ ತಂಬಾಕು ಮಾರಾಟದ ಮೇಲಿನ ನಿಷೇಧವನ್ನು ಹಿಂಪಡೆದಿದೆ. ಈ ನಿಷೇಧ ಹಿಂಪಡೆಯಲು ಭಾರತದಲ್ಲಿ ಏರುತ್ತಿರುವ ಕೊರೊನಾವೈರಸ್ ಸೋಂಕಿನ ಪ್ರಮಾಣ ಕಾರಣ ಎಂದು ದೂಷಿಸಿದೆ.

Recommended Video

China ತನ್ನ ವಾಯು , ನೌಕಾ ಪಡೆಯನ್ನು ದ್ವಿಗುಣಗೊಳಿಸುತ್ತಿರುವುದೇಕೆ | Oneindia Kannada

ಹೆಚ್ಚಾಗಿ ಬೌದ್ಧ ದೇಶದಲ್ಲಿ ಧೂಮಪಾನವನ್ನು ಪಾಪವೆಂದು ಪರಿಗಣಿಸಲಾಗಿದ್ದರೂ ಸಹ ಈ ನಿರ್ಧಾರವು ಹೊರಬಿದ್ದಿದೆ. ಅಲ್ಲಿ ತಂಬಾಕು ನಿಯಂತ್ರಣ ಕಾನೂನನ್ನು ಮೊದಲು 1729 ರಲ್ಲಿ ಅಂಗೀಕರಿಸಲಾಯಿತು ಮತ್ತು ಸಸ್ಯವು ರಾಕ್ಷಸನ ರಕ್ತದಿಂದ ಬೆಳೆದಿದೆ ಎಂದು ನಂಬಲಾಗಿದೆ.

ದೇಶವು 2010 ರಲ್ಲಿ ಸುಮಾರು 750,000 ತಂಬಾಕು ಮಾರಾಟ, ಉತ್ಪಾದನೆ ಮತ್ತು ವಿತರಣೆಯನ್ನು ನಿಷೇಧಿಸಿತು. ಆದರೆ ಧೂಮಪಾನಿಗಳಿಗೆ ಭಾರಿ ಸುಂಕ ಮತ್ತು ತೆರಿಗೆಗಳನ್ನು ಪಾವತಿಸಿದ ನಂತರ ನಿಯಂತ್ರಿತ ಪ್ರಮಾಣದ ತಂಬಾಕು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಆದರೆ ಭಾರತದಿಂದ ಗಡಿಯಲ್ಲಿ ಕಳ್ಳಸಾಗಣೆ ಮಾಡುತ್ತಿರುವ ಸಿಗರೇಟ್‌ಗಳಿಗೆ ಬ್ಲ್ಯಾಕ್ ಮಾರುಕಟ್ಟೆಯನ್ನು ಹುಟ್ಟುಹಾಕಿದೆ.

Bhutan Has Lifted Tobacco Ban And India’s Rising Coronavirus Cases Are To Blame For It

ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಆರಂಭದಲ್ಲಿ ಭೂತಾನ್ ಭಾರತದೊಂದಿಗೆ ತನ್ನ ಗಡಿಯನ್ನು ಮುಚ್ಚಿದಾಗ. ಭಾರತದಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ದೃಢಪಟ್ಟ ಕೊರೊನಾ ಪ್ರಕರಣಗಳಿವೆ. ಆದರೆ, ಭೂತಾನ್‌ನಲ್ಲಿ 200 ಕ್ಕಿಂತಲೂ ಕಡಿಮೆ ಪ್ರಕರಣಗಳಿವೆ. ಈ ಹಿಂದೆ ಲಾಕ್‌ಡೌನ್ ವೇಳೆ ತಂಬಾಕು ಬೆಲೆ ನಾಲ್ಕು ಪಟ್ಟು ಏರಿಕೆಯಾಗಿದೆ. ಜೊತೆಗೆ ಆಗಸ್ಟ್ 12 ರಂದು ಭಾರತದಿಂದ ಬರುವ ಸರಕುಗಳನ್ನು ನಿರ್ವಹಿಸುವ ಭೂತಾನ್ ಕಾರ್ಮಿಕರೊಬ್ಬರು ಗಡಿ ಪಟ್ಟಣವಾದ ಫ್ಯುಯೆಂಟ್‌ಶೋಲಿಂಗ್‌ನಲ್ಲಿ ಕೊರೊನಾವೈರಸ್ ದೃಢವಾಗಿದೆ.

ಹೀಗಾಗಿ ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್ ದಶಕಗಳ ತಂಬಾಕು ಮಾರಾಟದ ಮೇಲಿನ ನಿಷೇಧವನ್ನು ಪುನರ್ ಪರಿಶೀಲನೆಗೊಳಪಡಿಸಿ, ಕಳ್ಳಸಾಗಾಣಿಗೆ ಮೂಲಕ ಸಾಂಕ್ರಾಮಿಕ ರೋಗ ಹರಡುವ ಅಪಾಯವನ್ನು ತಗ್ಗಿಸುವ ನಿರ್ಧಾರ ಕೈಗೊಂಡಿದ್ದಾರೆ.

English summary
The remote Himalayan kingdom of Bhutan, known for embracing gross national happiness and outlawing television until 1999, has now made the unusual decision to reverse a ban on the sale of tobacco, blaming coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X