ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಡುಗಿರೇ ಹುಷಾರ್! ನೀವು ಟೈಟ್ ಜೀನ್ಸ್ ಹಾಕ್ತೀರಾ?

|
Google Oneindia Kannada News

ಅಡಿಲೇಡ್, ಜೂ. 24: ಫ್ಯಾ‌ಷನ್ ಎಂಬ ಮಾಯಾಲೋಕಕ್ಕೆ ಮರುಳಾಗಿ, ಗೆಳತಿಯರು ಧರಿಸುತ್ತಾರೆ ಎಂದು ಹಠಕ್ಕೆ ನೀವು ಬಿದ್ದು ಟೈಟ್ ಜೀನ್ಸ್ ಹಾಕಿ ಓಡಾಡುವುದನ್ನು ರೂಢಿಸಿಕೊಂಡಿದ್ದೀರಾ? ಹಾಗಾದರೆ ಈ ಸುದ್ದಿಯನ್ನು ಗಮನವಿಟ್ಟು ಓದಲೇ ಬೇಕು.

ಜೀನ್ಸ್ ಪ್ಯಾಂಟ್ ಮೋಹವೇ ಹಾಗೆ. ಕಾಲಕ್ಕೊ, ಜನರ ಭಾವನೆಗೋ ಗೊತ್ತಿಲ್ಲ ಅದು ಬದಲಾಗುತ್ತಲೇ ಇದೆ. ಬದಲಾಗುತ್ತಲೇ ಇರುತ್ತದೆ. ಇಂಥ ಜೀನ್ಸ್ ತೊಡುವುದು ಅನಾರೋಗ್ಯವನ್ನು ಮೈ ಮೇಲೆ ಎಳೆದುಕೊಂಡಂತೆ ಎಂಬುದು ಈಗ ಬಹಿರಂಗವಾಗಿರುವ ಸಂಗತಿ.[ಒಂದು ಜೀನ್ಸ್ ಪ್ಯಾಂಟ್ ಕಿಸೆಯಲ್ಲಿ ಏನೇನು ಇಡಬಹುದು?]

jeans

ಆಸ್ಟ್ರೇಲಿಯಾದ 35 ವರ್ಷದ ಮಹಿಳೆಯೊಬ್ಬರು ಟೈಟ್ ಜೀನ್ಸ್ ತೊಟ್ಟು ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದಾರೆ. ಪ್ರತಿದಿನ ಈ ಬಗೆಯ ಬಿಗಿ ವಸ್ತ್ರ ಧರಿಸುತ್ತಿದ್ದ ಆಕೆಗೆ ಕಾಲುಗಳಲ್ಲಿ ನಿಶ್ಯಕ್ತಿ ಕಾಣಿಸಿಕೊಂಡಿದೆ. ಒಂದು ಹಂತದಲ್ಲಿ ಕೆಳಕ್ಕೆ ಬಿದ್ದವರಿಗೆ ಮೇಲೆ ಏಳಲು ಸಾಧ್ಯವಾಗಿಲ್ಲ. ಅಂತೂ ಯಾರದ್ದೋ ಸಹಾಯ ಪಡೆದುಕೊಂಡು ಆಸ್ಪತ್ರೆ ಸೇರಿದ್ದಾರೆ.[ಹೆಣ್ಣು ಮಕ್ಕಳು ಜೀನ್ಸ್ ಹಾಕಿದ್ರೆ ಭೂಕಂಪ]

ಆಕೆ ಧರಿಸಿದ್ದ ಜೀನ್ಸ್ ಪ್ಯಾಂಟ್ ನ್ನು ತೆಗೆಯಲು ಸಾಧ್ಯವಾಗಲಿಲ್ಲ. ನಂತರ ವೈದ್ಯರು ಪ್ಯಾಂಟ್ ಕತ್ತರಿಸಿ ಹೊರತೆಗೆದಿದ್ದಾರೆ. ಪರೀಕ್ಷೆಗೆ ಒಳಪಡಿಸಿದಾಗ ಒಂದೊಂದೆ ಸಂಗತಿ ಬಗಹಿರಂಗವಾಗಿದೆ. ಟೈಟ್ ಜೀನ್ಸ್ ಪರಿಣಾಮ ನರವ್ಯೂಹದ ಕೆಲಸಕ್ಕೆ ಆಪತ್ತು ಎದುರಾಗಿತ್ತು ಎಂಬುದು ಗೊತ್ತಾಗಿದೆ.

ಹೈ ಹೀಲ್ಡ್ ಹಾಕೊಂಡು, ಟೈಟ್ ಜೀನ್ಸ್ ಧರಿಸಿ ಲೋಕಕ್ಕೆ ಸುಂದರಿ ಎಂದು ತೋರಿಸಲು ಮುಂದಾದರೆ ನಿಮ್ಮ ಜೀವಕ್ಕೆ ಗಂಡಾಂತರ ತಂದುಕೊಂಡೀರಿ ಜೋಕೆ! ರಕ್ತ ಪರಿಚಲನೆಗೆ ಇಂಥ ಅವೈಜ್ಞಾನಿಕ ವಿಧಾನಗಳು ಅಡ್ಡಿ ಉಂಟುಮಾಡುತ್ತವೆ. ಮುಂದೆ ಘೋರ ಅಪಾಯವನ್ನು ತರಬಹುದು ಎಂದು ಆಸ್ಟ್ರೇಲಿಯಾದ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

English summary
A 35-year-old woman was rushed to hospital when she complained of numbness in her legs. It has been reported that her skinny jeans cut off the blood supply to her calf muscles.The woman collapsed and was forced to crawl to seek help, added media report. The incident took place in Adelaide, Australia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X