• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಪಟ್ಟವನ್ನು ಬಿಲ್‌ಗೇಟ್ಸ್‌ನಿಂದ ಕಸಿದವರು ಯಾರು?

|

ನವದೆಹಲಿ, ಜುಲೈ 18: ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಯಾರು ಎಂದರೆ ಮೊದಲು ಬರುವ ಹೆಸರೇ ಬಿಲ್‌ಗೇಟ್ಸ್ ಆದರೆ ಈಗ ಅದು ಸುಳ್ಳಾಗಿದೆ.

ವಿಶ್ವದ ಎರಡನೇ ಅತಿ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಇನ್ನೊಬ್ಬ ವ್ಯಕ್ತಿ ಕಸಿದುಕೊಂಡಿದ್ದಾರೆ. ಅವರೇ ಬರ್ನಾರ್ಡ್ ಅರ್ನಾಲ್ಟ್.

ಬರ್ನಾರ್ಡ್ ಅರ್ನಾಲ್ಟ್ ಫ್ರೆಂಚ್ ಬಿಲಿಯೋನೇರ್ ಆಗಿದ್ದು, ಬಿಲ್‌ಗೇಟ್ಸ್ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ. ಲಕ್ಜೂರಿ ಗೂಡ್ಸ್ ಮೇಕರ್ ಎಲ್‌ವಿಎಂಎಚ್ ನ ಸಿಇಓ ಅರ್ನಾಲ್ಟ್ ಅವರು ಏಳು ವರ್ಷದ ದಾಖಲೆಯನ್ನು ಮುರಿದು ಹೊಸ ಭಾಷ್ಯ ಬರೆದಿದ್ದಾರೆ.

ಬರ್ಗರ್‌ಗಾಗಿ ಸರದಿ ಸಾಲಿನಲ್ಲಿ ನಿಂತ ಕೋಟ್ಯಧಿಪತಿ ಬಿಲ್ ಗೇಟ್ಸ್

ಅರ್ನಾಲ್ಟ್ ಅವರು 108 ಬಿಲಿಯನ್ ಡಾಲರ್ ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ. ಕಳೆದ ವರ್ಷ ಅದಕ್ಕೆ 39 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ. ಮೈಕ್ರೊಸಾಫ್ಟ್ ಒಡೆಯ ಬಿಲ್‌ಗೇಟ್ಸ್‌ ಬಳಿ 107 ಬಿಲಿಯನ್ ಡಾಲರ್ಗಳಷ್ಟು ಆಸ್ತಿ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅನಾಲ್ಟ್ ನಿರ್ಮಿಸಿರುವ ಎಲ್‌ವಿಎಂಎಚ್ ಕಂಪನಿಯು ಜಾಗತಿಕ ಐಷಾರಾಮಿ ವಿದ್ಯುತ್ ಘಟಕಕ್ಕೆ ನೆರವಾಗುತ್ತದೆ. ಇದು ಲೂಯಿಸ್ ವಿಟ್ಟನ್, ಕ್ರಿಷ್ಚಿಯನ್ ಡಿಯೋರ್ ಹಾಗೂ ಗಿವೆಂಚಿಗೆ ಸಹಾಯ ಮಾಡಲಿದೆ.

ಕಳೆದ ವರ್ಷ ಬಿಲ್‌ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ಶ್ರೀಮಂತನ ಪಟ್ಟ ಪಡೆದಿದ್ದ ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ಅವರು ಈ ವರ್ಷವೂ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ವಿಶ್ವದ ಶ್ರೀಮಂತ ಜೆಫ್ ಬೆಜೊಸ್ ಅವರು ಒಟ್ಟು 131 ಬಿಲಿಯನ್‌ ಆಸ್ತಿಯೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಪ್ರಖ್ಯಾತ ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ಎರಡನೇ ಸ್ಥಾನದಲ್ಲಿ ಬಿಲ್‌ಗೇಟ್ಸ್ ಇದ್ದು ಈ ಬಾರಿ ಆ ಸ್ಥಾನವನ್ನು ಬರ್ನಾರ್ಡ್ ಅಲಂಕರಿಸಿದ್ದಾರೆ.

English summary
Bernald Arnault replaces Bill Gates, Now Not Bill Gates Bernald Arnault is the second richest person in the World.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X