ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ಮುಡಾ ಟ್ರಯಾಂಗಲ್ 'ಭಯಾನಕ ರಹಸ್ಯ' ಕೊನೆಗೂ ಬಯಲು?

|
Google Oneindia Kannada News

Recommended Video

ಬರ್ಮುಡಾ ಟ್ರಯಾಂಗಲ್ ನ ಭಯಾನಕ ರಹಸ್ಯ ಕೊನೆಗೂ ಬಯಲಾಯ್ತಾ? | Oneindia Kannada

ಬರ್ಮುಡಾ ಟ್ರಯಾಂಗಲ್ ಅಥವಾ ಡೆವಿಲ್ಸ್ ಟ್ರಯಾಂಗಲ್, ಅಟ್ಲಾಂಟಿಕ್ ಮಹಾಸಾಗರದ ಫ್ಲೋರಿಡಾದಿಂದ ಪ್ಯೂರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶದ ನಡುವಣ ತ್ರಿಕೋನಾಕೃತಿಯ ಭಾಗವೇ ಈ ಬರ್ಮುಡಾ ಟ್ರಯಾಂಗಲ್.

ಈ ಪ್ರದೇಶದಲ್ಲಿ ಹಾದುಹೋಗುವ ವಿಮಾನಗಳು ಇದ್ದಕ್ಕಿದ್ದಂತೇ ನಾಪತ್ತೆಯಾಗುವುದು, ಹಡಗುಗಳು ಅಪಘಾತಕ್ಕೀಡಾಗುವುದು, ನಾಪತ್ತೆಯಾದ ವಿಮಾನ ಅಥವಾ ಹಡಗಿನ ಅವಶೇಷಗಳೂ ಸಿಗದಿರುವುದು.. ಈ ರೀತಿಯ ಭಯಾನಕ ರಹಸ್ಯವನ್ನು ತನ್ನ ಒಡಲಾಳದಲ್ಲಿ ಇಟ್ಟುಕೊಂಡಿರುವ ಬರ್ಮುಡಾ ಟ್ರಯಾಂಗಲ್ ಇದುವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಆಹುತಿ ತೆಗೆದುಕೊಂಡಿದೆ.

ನೂರಾರು ವರ್ಷಗಳಿಂದ ಎಂತೆಂತಾ ವಿಜ್ಞಾನಿಗಳಿಗೂ ಬಗೆಹರಿಸಲು ಸಾಧ್ಯವಾಗದ ಈ ಭೌಗೋಳಿಕ ರಹಸ್ಯವನ್ನು ಕೊನೆಗೂ ಭೇದಿಸಲಾಗಿದೆ ಎಂದು ಚಾನೆಲ್ 5 ತನ್ನ ಡಾಕ್ಯುಮೆಂಟರಿಯಲ್ಲಿ ಹೇಳಿಕೊಂಡಿದೆ. ಸಾವಿರಾರು ಜನರ ಪ್ರಾಣಪಕ್ಷಿ ಹಾರಿಹೋಗಲು ಕಾರಣವಾದ ಅಂಶಗಳನ್ನು ಚಾನೆಲ್ 5 ವಿವರಿಸಿದೆ.

ಅಮೆರಿಕ 1 ಡಾಲರ್ ಗೆ 1 ಲಕ್ಷ ರಿಯಾಲ್ ದಾಟಿದ ಇರಾನ್ ಕರೆನ್ಸಿಅಮೆರಿಕ 1 ಡಾಲರ್ ಗೆ 1 ಲಕ್ಷ ರಿಯಾಲ್ ದಾಟಿದ ಇರಾನ್ ಕರೆನ್ಸಿ

ಈ ಜಲಪ್ರದೇಶದ ನಿಗೂಢತೆಯನ್ನು ಪತ್ತೆಹಚ್ಚಲು ವಿಜ್ಞಾನಿಗಳು ಮತ್ತು ಪತ್ರಕರ್ತರು ಮುಂದಾಗಿದ್ದರೂ, ಕರಾರುವಕ್ಕಾದ ಕಾರಣಗಳನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದರು. ಸುಮಾರು 4.4ಲಕ್ಷ ಚದರಮೈಲಿಯಷ್ಟು ವಿಶಾಲವಾದ ಸಾಗರ ಪ್ರದೇಶವನ್ನು ಹೊಂದಿರುವ ಬರ್ಮುಡಾ ಟ್ರಯಾಂಗಲ್ ರಹಸ್ಯ ಪತ್ತೆಹಚ್ಚಲು ಹಲವು ದೇಶಗಳು ಜಂಟಿಯಾಗಿ ಪ್ರಯತ್ನಿಸಿದ್ದೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗಿತ್ತು.

ಈ ಪ್ರದೇಶದಲ್ಲಿ ಪ್ರಬಲವಾದ ಆಯಸ್ಕಾಂತೀಯ ಸೆಳೆತವಿದೆ, ದೆವ್ವ ಚೇಷ್ಠೆ, ಸೈತಾನ, ನೈಸರ್ಗಿಕಾ ಶಕ್ತಿ.. ಹೀಗೆ ಹಲವು ಅಂತೆಕಂತೆ ಸುದ್ದಿಗಳು ಹರಿದಾಡುತ್ತಿದ್ದವೇ ಹೊರತು, ಆ ಪ್ರದೇಶವನ್ನು ಹಾದುಹೋಗುವಾಗ ಸಂಭವಿಸುವ ಅವಗಢಕ್ಕೆ ನಿರ್ದಿಷ್ಟ ಕಾರಣ ಇದೇ ಎಂದು ಯಾರೂ ಅಂತಿಮ ತೀರ್ಮಾನಕ್ಕೆ ಬರಲಾಗಲಿಲ್ಲ.

ಅತಿಹೆಚ್ಚು ಹಡಗುಗಳು ಸಂಚರಿಸುವ ಮಾರ್ಗ

ಅತಿಹೆಚ್ಚು ಹಡಗುಗಳು ಸಂಚರಿಸುವ ಮಾರ್ಗ

ಉತ್ತರ ಅಂಟ್ಲಾಟಿಕ್ ಸಾಗರದ ಪಶ್ಚಿಮ ಭಾಗದಲ್ಲಿ ಬರುವ ಬರ್ಮುಡಾ ತ್ರಿಕೋಣ, ಅಟ್ಲಾಂಟಿಕ್ ತೀರದ ಮಿಯಾಮಿ, ಸಾನ್‌ಜುವಾನ್, ಪೊರ್ಟೊರಿಕೊ ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪವಾಗಿರುವ ಬರ್ಮುಡಾ ಪ್ರದೇಶಗಳಲ್ಲಿ ಈ ವಿಸ್ಮಯ ನಡೆಯುತ್ತದೆ. ಅಮೆರಿಕ, ಯುರೋಪ್ ಮತ್ತು ಕೆರಿಬಿಯನ್ ದ್ವೀಪಗಳ ಬಂದರುಗಳಿಗೆ ಈ ಮಾರ್ಗವಾಗಿ ಅತಿಹೆಚ್ಚು ಹಡಗುಗಳು ಸಂಚರಿಸುತ್ತವೆ. ಕಳೆದ ಸುಮಾರು ನೂರು ವರ್ಷಗಳಲ್ಲಿ, ಒಂದು ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎನ್ನುತ್ತದೆ ಇದರ ಭಯಾನಕ ಇತಿಹಾಸ.

ನಿಗೂಢ ಕಣ್ಮರೆಗಳು 100 ಅಡಿಗಳ ರಾಕ್ಷಸ ಅಲೆಗಳಿಂದ ಉಂಟಾಗಿರಬಹುದು

ನಿಗೂಢ ಕಣ್ಮರೆಗಳು 100 ಅಡಿಗಳ ರಾಕ್ಷಸ ಅಲೆಗಳಿಂದ ಉಂಟಾಗಿರಬಹುದು

ಈಗ ಚಾನೆಲ್ 5 ಪ್ರಸಾರ ಮಾಡಿದ ಸಾಕ್ಷ್ಯಚಿತ್ರದ ಪ್ರಕಾರ, ಈ ನಿಗೂಢ ಕಣ್ಮರೆಗಳು 100 ಅಡಿಗಳ ರಾಕ್ಷಸ ಅಲೆಗಳಿಂದ ಉಂಟಾಗಿರಬಹುದು ಎಂದು ಹೇಳಿದೆ. ವಿಜ್ಞಾನಿಗಳ ಪ್ರಕಾರ ಸಾಗರದ ಮಧ್ಯೆ ತೀವ್ರ ಚಂಡಮಾರುತದ ತರಂಗಗಳು ಮೇಲೆದ್ದಾಗ ಈ ರೀತಿಯ ರಾಕ್ಷಸ ಅಲೆಗಳು ಎದ್ದು ಅದರ ತೀವ್ರ ಸೆಳೆತದಿಂದ ವಿಮಾನ ಮತ್ತು ಹಡಗುಗಳು ಕಣ್ಮರೆಯಾಗುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದ ಕರಾವಳಿಯ ಭಾಗದಲ್ಲೂ ಈ ರೀತಿಯ ಭಯಾನಕ ಅಲೆಗಳು ಕಾಣಿಸಿಕೊಂಡಿದ್ದವು ಎಂದು ಸನ್ ಮಾಧ್ಯಮ ಮಾಡಿದ ವರದಿಯನ್ನು ಸಾಕ್ಷ್ಯಚಿತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಾಗರದ ಸುತ್ತಮುತ್ತಲಿನ ಅಲೆಗಳ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚಾಗುವ ಅಲೆ

ಸಾಗರದ ಸುತ್ತಮುತ್ತಲಿನ ಅಲೆಗಳ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚಾಗುವ ಅಲೆ

ಈ ರಾಕ್ಷಸ ಅಲೆಗಳು, ಸಾಗರದ ಸುತ್ತಮುತ್ತಲಿನ ಅಲೆಗಳ ಗಾತ್ರಕ್ಕಿಂತ ಎರಡು ಪಟ್ಟು ಹೆಚ್ಚಾಗಿರುತ್ತದೆ ಮತ್ತು ತೀರಾ ಅನಿರೀಕ್ಷಿತವಾಗಿರುತ್ತವೆ. ಯಾವುದೋ ಒಂದು ಭಾಗದಿಂದ ರಕ್ಕಸ ಅಲೆಗಳು ಏಳಬಹುದು ಎನ್ನುವುದನ್ನು ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ ಎಂದು ರಾಷ್ಟ್ರೀಯ ಸಾಗರ ಮತ್ತು ವಾಯುಮಂಡಲ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.

ದೈತ್ಯಾಕಾರದ ನೀರನ್ನು ಪುನಃ ರಚಿಸಿ ವರದಿ ಸಿದ್ದಪಡಿಸಿದ ತಜ್ಞರು

ದೈತ್ಯಾಕಾರದ ನೀರನ್ನು ಪುನಃ ರಚಿಸಿ ವರದಿ ಸಿದ್ದಪಡಿಸಿದ ತಜ್ಞರು

ಚಾನಲ್ 5 ಸಾಕ್ಷ್ಯಚಿತ್ರದಲ್ಲಿ, ಬರ್ಮುಡಾ ಟ್ರಿಯಾಂಗಲ್ ಸಂಶೋಧಕರು ರಕ್ಕಸ ಅಲೆಗಳ ರೀತಿಯಲ್ಲಿ ದೈತ್ಯಾಕಾರದ ನೀರನ್ನು ಪುನಃ ರಚಿಸಿ ವರದಿ ಸಿದ್ದಪಡಿಸಿದ್ದಾರೆಂದು ಹೇಳಿದೆ. ಭಾರೀ ಗಾತ್ರದ ಅಲೆಗಳಿಂದಲೇ ಈ ದುರ್ಘಟನೆಗಳು ನಡೆಯುತ್ತಿದೆ ಎಂದು ತಜ್ಞರು ಮತ್ತು ಸಂಶೋಧಕರು ಬಂದಿದ್ದಾರೆಂದು ಡಾಕ್ಯುಮೆಂಟರಿಯಲ್ಲಿ ಹೇಳಲಾಗಿದೆ.

ಚಂಡಮಾರುತದಿಂದ ಭಾರೀ ಗಾತ್ರದ ಅಲೆಗಳು ಏಳುತ್ತವೆ

ಚಂಡಮಾರುತದಿಂದ ಭಾರೀ ಗಾತ್ರದ ಅಲೆಗಳು ಏಳುತ್ತವೆ

ಸಾಗರದೊಳಗೆ ಉತ್ಪತ್ತಿಯಾಗುವ ನೈಸರ್ಗಿಕ ಅನಿಲ ಮತ್ತು ಚಂಡಮಾರುತದಿಂದ ಭಾರೀ ಗಾತ್ರದ ಅಲೆಗಳು ಏಳುತ್ತವೆ ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ವಿಶ್ವದ ವಿವಿಧ ಪ್ರದೇಶಗಳ ದಿಕ್ಕನ್ನು ಗುರುತಿಸುವ ದಿಕ್ಸೂಚಿ, ಕೆಲಸ ಮಾಡದೇ ಸ್ಥಗಿತಗೊಳ್ಳವ ನಿಗೂಢ ಪ್ರದೇಶಗಳಲ್ಲಿ ಬರ್ಮುಡಾ ಟ್ರಯಾಂಗಲ್ ಪ್ರಮುಖವಾದದ್ದು.

English summary
Bermuda Triangle mystery solved? Experts claim ‘rogue waves’ behind disappearances. Channel 5 documentary claims that these mysterious disappearances could have been caused by 100 feet ‘rogue waves’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X