ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರುಯ್ನೆ ಬಾರಿಸಿದ ಗೋಲಿನಿಂದ ಹೈಟಿ ಸರ್ಕಾರವೇ ಪತನ!

|
Google Oneindia Kannada News

ಪೋರ್ಟ್ ಆ ಪ್ರಿನ್ಸ್, ಜುಲೈ 17: ಹಲವು ದಿನಗಳ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಕೊನೆಗೂ ಹೈಟಿಯ ಪ್ರಧಾನಿ ಜಾಕ್ ಗಾಯ್ ಲ್ಯಾಫೊಟ್ಯಾಂಟ್ ಶನಿವಾರ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಕಾರಣಕರ್ತರಲ್ಲಿ ಬೆಲ್ಜಿಯಂನ ಖ್ಯಾತ ಫುಟ್ಬಾಲ್ ಆಟಗಾರ ಕೆವಿ ಡೆ ಬ್ರುಯ್ನೆ ಅವರೂ ಒಬ್ಬರು.

ಜನರಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ ಲ್ಯಾಫೊಟ್ಯಾಂಟ್ ಅವರು ರಾಜೀನಾಮೆ ಸಲ್ಲಿಸಲು ಬ್ರುಯ್ನೆ ಪರೋಕ್ಷವಾಗಿ ಕಾರಣರಾಗಿದ್ದಾರೆ.

ಗೆದ್ದಿದ್ದೆಲ್ಲ ದಾನ ಮಾಡಿದ ಫ್ರೆಂಚ್ ಸ್ಟ್ರೈಕರ್ ಕಿಲಿಯಾನ್ ಎಂಬಾಪೆ!

ತೈಲ ಸಬ್ಸಿಡಿಗಳನ್ನು ತೆಗೆದುಹಾಕುವ ಹೈಟಿ ಸರ್ಕಾರದ ಉದ್ದೇಶಕ್ಕೆ ಉಂಟಾದ ವಿರೋಧ, ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು.

ತೈಲ ಬೆಲೆ ಮೇಲಿನ ಸಬ್ಸಿಡಿ ಹಿಂತೆಗೆತದಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಲಿದೆ ಎನ್ನುವುದು ಜನರ ಕಳವಳ.

belgium kevin de bruyne haiti prime minister resignation

ಈ ಪ್ರಕಟಣೆ ಸಾಮೂಹಿಕ ಪ್ರತಿಭಟನೆಗಳಿಗೆ ಎಡೆಮಾಡಿಕೊಟ್ಟಿತು. ರಾಜಧಾನಿ ಪೋರ್ಟ್ ಆ ಪ್ರಿನ್ಸ್‌ನ ಮುಖ್ಯಭಾಗವೆಲ್ಲವೂ ಅವಶೇಷಗಳು, ಸುಟ್ಟ ಟೈರ್‌ಗಳಿಂದ ತುಂಬಿಕೊಂಡಿತು.

ಹಿಂಸಾಚಾರಕ್ಕೆ ಕನಿಷ್ಠ ಏಳು ಮಂದಿ ಬಲಿಯಾದರೆ, ಮೂರು ದಿನಗಳ ಕಾಲ ನಡೆದ ಗಲಭೆಯಲ್ಲಿ ಹತ್ತಾರು ವ್ಯಾಪಾರ ಮಳಿಗೆಗಳನ್ನು ದೋಚಲಾಯಿತು.

ವಿಶ್ವಕಪ್: ಛತ್ರಿಯಡಿ ಬೆಚ್ಚಗಿದ್ದು ಟ್ರೋಲ್ ಮಳೆಯಲಿ ನೆಂದರು ಪುಟಿನ್!

ಹೈಟಿ ಸರ್ಕಾರದ ಪತನಕ್ಕೂ ಫೀಫಾ ಫುಟ್ಬಾಲ್ ಪಂದ್ಯಕ್ಕೂ ನಂಟು ಇದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಗಳಿಸುವಲ್ಲಿ ವಿಫಲವಾದ ಹೈಟಿಯ ಜನರು ಬ್ರೆಜಿಲ್ ತಂಡವನ್ನು ತಮ್ಮ ಅನಧಿಕೃತ ರಾಷ್ಟ್ರೀಯ ತಂಡವಾಗಿ ಅಂಗೀಕರಿಸಿದ್ದಾರೆ.

ಹೈಟಿಯ ಉದ್ದಗಲಕ್ಕೂ ಬ್ರೆಜಿಲ್ ಫುಟ್ಬಾಲ್ ತಂಡದ ಬೆಂಬಲಿಗರಿದ್ದಾರೆ. ಬ್ರೆಜಿಲ್ ಮತ್ತು ಬೆಲ್ಜಿಯಂ ಕ್ವಾರ್ಟರ್ ಫೈನಲ್ ಮುಖಾಮುಖಿಗೂ ಕೇವಲ 10 ನಿಮಿಷಗಳ ಮುನ್ನ ಸರ್ಕಾರವು ತೈಲ ಬೆಲೆ ಏರಿಕೆಯನ್ನು ಪ್ರಕಟಿಸಿತು.

ಬೆಲ್ಜಿಯಂ ಎದುರು ಬ್ರೆಜಿಲ್ ಸುಲಭವಾಗಿ ಗೆಲ್ಲುತ್ತದೆ ಎಂಬ ಲೆಕ್ಕಾಚಾರ ಹೈಟಿ ಸರ್ಕಾರದ್ದಾಗಿತ್ತು. ಪ್ರತಿಭಟನೆಯ ಮೂಡ್‌ನಲ್ಲಿದ್ದ ಜನರು ಬ್ರೆಜಿಲ್ ಗೆದ್ದಾಗ ಸಂಭ್ರಮಿಸಿ ಬೀಗುತ್ತಾರೆ. ಆಗ ಪ್ರತಿಭಟನೆಗಳೆಲ್ಲ ಮೂಲೆ ಸೇರುತ್ತದೆ ಎಂಬ ಪ್ರಧಾನಿ ಜಾಕ್ ಗಾಯ್ ಲ್ಯಾಫೊಟ್ಯಾಂಟ್ ಊಹೆ ತಲೆಕೆಳಗಾಯಿತು.

ಬ್ರೆಜಿಲ್ ಆ ಪಂದ್ಯದಲ್ಲಿ ಬೆಲ್ಜಿಯಂಗೆ 2-1ರಲ್ಲಿ ಸೋಲು ಅನುಭವಿಸಿತು. ಆಟದ ಕೊನೆಯ ಹಂತದಲ್ಲಿ ಬೆಲ್ಜಿಯಂನ ಬ್ರೂಯ್ನೆ ಗೋಲು ಬಾರಿಸಿ ಬ್ರೆಜಿಲ್‌ಗೆ ಆಘಾತ ನೀಡಿದರು.

ಈ ಗೋಲಿನಿಂದ ಬ್ರೆಜಿಲ್ ಸೋಲುಂಡು ಟೂರ್ನಿಯಿಂದ ಹೊರಬಿದ್ದಿತು. ಇತ್ತ ಫುಟ್ಬಾಲ್ ಸೋಲಿನ ಬಳಿಕ ವಾಸ್ತವಕ್ಕೆ ಮರಳಿದ ಜನಕ್ಕೆ ಸರ್ಕಾರ ತಮ್ಮ ಮೇಲೆ ಹೇರಿದ್ದ ಆರ್ಥಿಕ ಹೊರೆ ಅರಿವಾಯಿತು.

ಕೂಡಲೇ ದಂಗೆ ಆರಂಭವಾಯಿತು. ಎಲ್ಲೆಡೆ ದಾಳಿ, ಹಿಂಸಾಚಾರಗಳು ನಡೆದವು. ಅನಿಲ ಬೆಲೆ ಏರಿಕೆ ಖಂಡಿಸಿ ಎಲ್ಲೋ ಕೆಲವು ಮಂದಿ ಮಾತ್ರ ಪ್ರತಿಭಟನೆ ನಡೆಸಬಹುದು. ಉಳಿದಂತೆ ಜನರೆಲ್ಲರೂ ಸಂಭ್ರಮಾಚರಣೆಯಲ್ಲಿ ಮುಳುಗಿರುತ್ತಾರೆ ಎಂಬ ಲೆಕ್ಕಾಚಾರ ತಲೆಕೆಳಗಾಯಿತು.

ಹೈಟಿಯಿಂದ ಸುಮಾರು 10 ಸಾವಿರ ಕಿ.ಮೀ. ದೂರದಲ್ಲಿ ನಡೆದ ಪಂದ್ಯದಲ್ಲಿ ಗೋಲು ಬಾರಿಸಿದ, ಸುಮಾರು 7 ಸಾವಿರ ಕಿ.ಮೀ. ದೂರದ ಬೆಲ್ಜಿಯಂ ದೇಶದ ಬ್ರುಯ್ನೆ, ಅಲ್ಲಿನ ರಾಜಕೀಯ ಚಿತ್ರಣವನ್ನೇ ಬದಲಿಸಲು ಕಾರಣವಾಗಿದ್ದು ಹೀಗೆ.

English summary
Belgium Football player Kevin De Bruyne indirectly responsible for the Haiti Prime Minister Jack Guy Lafontant's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X