ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಷಾರ್: ಮಂಕಿಪಾಕ್ಸ್ ಸೋಂಕಿಗೂ 21 ದಿನ ಕ್ವಾರೆಂಟೈನ್!

|
Google Oneindia Kannada News

ನವದೆಹಲಿ, ಮೇ 23: ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಕಿಪಾಕ್ಸ್ ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಲ್ಜಿಯಂ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಿದೆ. ಮಂಕಿಪಾಕ್ಸ್ ರೋಗಿಗಳಿಗೆ 21 ದಿನಗಳ ಕಡ್ಡಾಯ ಕ್ವಾರೆಂಟೈನ್ ಅನ್ನು ಜಾರಿಗೊಳಿಸಿದೆ. ಆ ಮೂಲಕ ಮಂಕಿಪಾಕ್ಸ್ ರೋಗಿಗಳಿಗೆ ಕ್ವಾರೆಂಟೈನ್ ಜಾರಿಗೊಳಿಸಿದ ಮೊದಲ ರಾಷ್ಟ್ರವಾಗಿದೆ.

ಜಗತ್ತಿನ 14ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈಗಾಗಲೇ ಮಂಕಿಪಾಕ್ಸ್ ರೋಗ ಹರಡುತ್ತಿರುವುದು ಪಕ್ಕಾ ಆಗಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಸೋಂಕಿತರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡು ಬರುತ್ತಿದ್ದು, ಮಂಕಿಪಾಕ್ಸ್ ಹರಡುವಿಕೆಯ ನಿಯಂತ್ರಣವೂ ಕಷ್ಟಕರವಾಗುತ್ತಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮಂಕಿಪಾಕ್ಸ್: ಚಿಕಿತ್ಸೆ ಮತ್ತು ಲಸಿಕೆ- ಇಲ್ಲಿದೆ ಎಲ್ಲಾ ವಿವರ ಮಂಕಿಪಾಕ್ಸ್: ಚಿಕಿತ್ಸೆ ಮತ್ತು ಲಸಿಕೆ- ಇಲ್ಲಿದೆ ಎಲ್ಲಾ ವಿವರ

ಯುಕೆಯಲ್ಲಿನ ಮಂಕಿಪಾಕ್ಸ್ ಪ್ರಕರಣಗಳ ಏರಿಕೆ ಮತ್ತು ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಬೆಲ್ಜಿಯಂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಮಂಕಿಪಾಕ್ಸ್ ಸೋಂಕು ತಗುಲಿದ ರೋಗಿಗಳು ಮೂರು ವಾರಗಳವರೆಗೂ ಕ್ವಾರೆಂಟೈನ್ ಆಗಿರುವಂತೆ ನಿಯಮ ಜಾರಿಗೊಳಿಸಲಾಗಿದೆ. ಆ ಮೂಲಕ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕ್ರಮ ತಗೆದುಕೊಳ್ಳಲಾಗುತ್ತಿದೆ. ಇದರ ಮಧ್ಯೆ ಮಂಕಿಪಾಕ್ಸ್ 14ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಇರುವುದು ಪಕ್ಕಾ ಆಗಿದೆ.

ಲಂಡನ್ ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಗಂಭೀರ

ಲಂಡನ್ ಆಸ್ಪತ್ರೆಯಲ್ಲಿ ರೋಗಿಗಳ ಸ್ಥಿತಿ ಗಂಭೀರ

ಯುನೈಟೆಡ್ ಕಿಂಗ್ ಡಮ್ ನಲ್ಲಿ 11 ಮಂದಿಯಲ್ಲಿ ಮಂಕಿಪಾಕ್ಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆಯನ್ನು 20ಕ್ಕೆ ಏರಿಸಿದೆ. ಮಂಕಿಪಾಕ್ಸ್ ಸೋಂಕು ತಗುಲಿದ ಮಕ್ಕಳಲ್ಲಿ ಬಹುಪಾಲು ಮಕ್ಕಳು ಲಂಡನ್ ಆಸ್ಪತ್ರೆಗೆ ದಾಖಲಾಗಿದ್ದು, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

100ಕ್ಕೂ ಹಚ್ಚು ಪ್ರಕರಣ ವರದಿ ಮಾಡಿರುವ ಯುರೋಪ್

100ಕ್ಕೂ ಹಚ್ಚು ಪ್ರಕರಣ ವರದಿ ಮಾಡಿರುವ ಯುರೋಪ್

ಯುರೋಪ್ ರಾಷ್ಟ್ರಗಳಲ್ಲೂ ಮಂಕಿಪಾಕ್ಸ್ ಸೋಂಕಿನ ಹಾವಳಿ ಮಿತಿ ಮೀರಿದೆ. ಇದೇ ಯುರೋಪ್ ರಾಷ್ಟ್ರಗಳಲ್ಲಿ ಇದುವರೆಗೂ 100ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ಮಂಕಿಪಾಕ್ಸ್ ಸೋಂಕು ಇದೀಗ ಜಗತ್ತಿನ ಅನೇಕ ದೇಶಗಳಿಗೆ ವ್ಯಾಪಿಸುತ್ತಿದೆ. 5 ವರ್ಷದೊಳಗಿನ ಮಕ್ಕಳಿಗೆ ಅಂಟಿಕೊಳ್ಳುವ ಸೋಂಕಿನ ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಈ ಸೋಂಕು ತಗುಲಿದ ಮಕ್ಕಳಲ್ಲಿ ಅತಿಹೆಚ್ಚು ಮಂದಿ ಕೆಲವು ವಾರಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

100ರಲ್ಲಿ ಒಬ್ಬ ಸೋಂಕಿತ ಸಾವು

100ರಲ್ಲಿ ಒಬ್ಬ ಸೋಂಕಿತ ಸಾವು

ಮಂಕಿಪಾಕ್ಸ್ ಸೂಕ್ಷ್ಮ ಹಾಗೂ ಅಲ್ಪಪ್ರಮಾಣದ ಪರಿಣಾಮವನ್ನು ಹೊಂದಿರುವ ಮತ್ತು ಮಕ್ಕಳನ್ನು ಬಾಧಿಸುವ ಕಾಯಿಲೆಯಾಗಿದೆ. ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಂಟಿಕೊಳ್ಳುವ ಈ ರೋಗವು ಕೆಲವು ವಾರಗಳವರೆಗೂ ಮಾತ್ರ ಇರುತ್ತದೆ. ಮೂರರಿಂದ ನಾಲ್ಕು ವಾರಗಳಲ್ಲಿ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ ಸಹ ಅದು ಗುಣಮುಖವಾಗಿರುವ ಪ್ರಕರಣಗಳು ವರದಿಯಾಗಿವೆೆ. ಇದರ ಮಧ್ಯೆ ಸೋಂಕು ತಗುಲಿದ 100 ಮಕ್ಕಳಲ್ಲಿ ಕೇವಲ ಒಬ್ಬರು ಮೃತಪಟ್ಟಿರುವುದು ಪತ್ತೆಯಾಗಿದೆ, ಆ ಮೂಲಕ ಮಂಕಿಪಾಕ್ಸ್ ಸಾವಿನ ಪ್ರಮಾಣ ಶೇ.01ರಷ್ಟಿದೆ.

ಯಾವ ಯಾವ ದೇಶಗಳಲ್ಲಿದೆ ಮಂಕಿಪಾಕ್ಸ್

ಯಾವ ಯಾವ ದೇಶಗಳಲ್ಲಿದೆ ಮಂಕಿಪಾಕ್ಸ್

ಯುರೋಪ್ ಖಂಡದ ಆರೋಗ್ಯ ಸಂಸ್ಥೆಗಳು ಯಾವ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ತಿಳಿಸಿವೆ. ಯುಕೆ, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲೆಂಡ್, ಇಟಲಿ ಮತ್ತು ಸ್ವೀಡನ್ ರಾಷ್ಟ್ರದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬಗ್ಗೆ ದೃಢಪಡಿಸಲಾಗಿದೆ. ಇದರ ಜೊತೆಗೆ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸೋಂಕು ಪಕ್ಕಾ ಆಗಿದೆ.

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಮಂಕಿಪಾಕ್ಸ್ ವೈರಸ್ ಎನ್ನುವುದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ಈ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಮಂಕಿಪಾಕ್ಸ್ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಸೋಂಕಿತ ಪ್ರಾಣಿಯ ಕಡಿತದಿಂದ ಅಥವಾ ಅದರ ರಕ್ತ, ದೇಹದ ದ್ರವಗಳು ಅಥವಾ ತುಪ್ಪಳವನ್ನು ಸ್ಪರ್ಶಿಸುವ ಮೂಲಕ ಮಂಗನ ಕಾಯಿಲೆ ಅಂಟಿಕೊಳ್ಳಬಹುದು. ಇದು ಇಲಿಗಳು ಮತ್ತು ಅಳಿಲುಗಳಂತಥವುಗಳಿಂದ ಹರಡುತ್ತದೆ ಎಂದು ಭಾವಿಸಲಾಗಿದೆ. ಸರಿಯಾಗಿ ಬೇಯಿಸದ ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವ ಮೂಲಕವೂ ರೋಗವು ಹರಡುವ ಸಾಧ್ಯತೆಯಿದೆ.

ಜ್ವರ, ಸ್ನಾಯು ನೋವು, ಗಾಯಗಳು ಮತ್ತು ಶೀತಗಳು ಮಾನವರಲ್ಲಿ ಮಂಗನ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಂಕಿಪಾಕ್ಸ್‌ನ ವೈರಸ್ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಆದರೆ WHO ಪ್ರಕಾರ 5 ರಿಂದ 21 ದಿನಗಳವರೆಗೆ ಇರುತ್ತದೆ.

English summary
Now quarantine for Monkeypox patients also. Belgium becomes first country to introduce 21 Days compulsory quarantine to monkeypox patients. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X