ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಲ್ಜಿಯಂನಲ್ಲೂ ಉಗ್ರರ ಅಟ್ಟಹಾಸ, ಅಪಾರ್ಟ್ಮೆಂಟ್ ವಶಕ್ಕೆ

By Mahesh
|
Google Oneindia Kannada News

ಬೆಲ್ಜಿಯಂ, ಡಿ.15: ಆಸ್ಟ್ರೇಲಿಯಾದ ಸಿಡ್ನಿಯ ಒಪೆರಾ ಹೌಸ್ ನ ಕೆಫೆಯಲ್ಲಿ ಉಗ್ರರು ನುಗ್ಗಿದ ಘಟನೆಯ ಬಳಿಕೆ ಬೆಲ್ಜಿಯಂನ ಘೆಂಟ್ ನಗರ ಅಪಾರ್ಟ್ಮೆಂಟ್ ನಲ್ಲಿ ಅನೇಕರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಪ್ರಕರಣ ವರದಿಯಾಗಿದೆ.

ಸಿಡ್ನಿಯಾ ಒತ್ತೆಯಾಳು ಘಟನೆ ನಡೆದ ಕೆಲವೇ ತಾಸುಗಳ ಬಳಿಕ ಯೂರೋಪಿನ ಘೆಂಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ವೊಂದಕ್ಕೆ ಉಗ್ರರು ನುಗ್ಗಿ ಅಡಗಿಕೊಂಡಿರುವ ಬಗ್ಗೆ ವರದಿಯಾಗಿದೆ. [ಉಗ್ರರ ವಶದಲ್ಲಿ ಇನ್ಫೋಸಿಸ್ ಉದ್ಯೋಗಿ]

Belgium: Armed men barge into apartment, take one hostage

ಸೋಮವಾರ ಮಧ್ಯಾಹ್ನ ಅಪಾರ್ಟ್‌ಮೆಂಟ್‌ವೊಂದಕ್ಕೆ ನುಗ್ಗಿದ ನಾಲ್ವರು ಬಂದೂಕುಧಾರಿ ಉಗ್ರರು ಅಪಾರ್ಟ್‌ಮೆಂಟ್‌ನಲ್ಲಿರುವ ನಿವಾಸಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಬೆಲ್ಜಿಯಂ ಪೊಲೀಸರು ಹೇಳಿದ್ದಾರೆ.

ಸಿಡ್ನಿಯಲ್ಲಿ ಇಂದು ಬೆಳಗ್ಗೆ ನಡೆದಿರುವ ಘಟನೆಗೂ ಈ ಘಟನೆಗೂ ಸಂಬಂಧವಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಈ ನಡುವೆ ಉಗ್ರರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವರು ಅಪಾರ್ಟ್ಮೆಂಟ್ ಗೆ ನುಗ್ಗಿದ್ದೇಕೆ? ಅವರ ಉದ್ದೇಶ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.ಒಟ್ಟಾರೆ ಬೆಲ್ಜಿಯಂ ದೇಶದ ಘೆಂಟ್ ನಗರದಾದ್ಯಂತ ಕಟ್ಟೆಚ್ಚರ ವಿಧಿಸಲಾಗಿದೆ.

ಬೆಂಗಳೂರಿನಲ್ಲಿ ಉಗ್ರ ಮೆಹ್ದಿ ಬಂಧನದ ನಂತರ ಈ ಮುಂಚೆ ಡಿಸಿಪಿ ಅಭಿಷೇಕ್ ಗೋಯಲ್ ಅವರಿಗೆ ಇಸೀಸ್ ನಿಂದ ಬೆದರಿಕೆ ಟ್ವೀಟ್ ಬಂದಿತ್ತು. ಸಿಡ್ನಿಯಲ್ಲಿ ಉಗ್ರರು ಒಪೆರಾ ಹೌಸ್ ನ ಕೆಫೆಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಒತ್ತೆಯಾಳುಗಳ ಪೈಕಿ ಹೈದಾರಾಬಾದ್ ಮೂಲದ ಇನ್ಫೋಸಿಸ್ ಟೆಕ್ಕಿ ಕೂಡಾ ಇದ್ದಾರೆ ಎಂದು ತಿಳಿದು ಬಂದಿದೆ. [ಸಿಡ್ನಿ ಉಗ್ರರ ದಾಳಿ : ಕ್ಷಣ-ಕ್ಷಣದ ಮಾಹಿತಿ]

English summary
Four armed men entered an apartment on Monday here and have taken a hostage. The Belgian Police have surrounded the apartment and are trying to get the people out safely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X