ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ಮೇಲೆ ಆಕ್ರಮಣ ಮಾಡಲು ರಷ್ಯಾಕ್ಕೆ ಆಯುಧ ಶಸ್ತ್ರಾಸ್ತ್ರ ಕಳಿಸಲ್ಲ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 21: ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಬೆಂಬಲಿಸಲು ಚೀನಾ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಕಳುಹಿಸುವುದಿಲ್ಲ ಮತ್ತು ಬೀಜಿಂಗ್ "ಬಿಕ್ಕಟ್ಟನ್ನು ಶಮನಗೊಳಿಸಲು ಎಲ್ಲಾ ಪ್ರಯತ್ನವನ್ನು ಮಾಡುತ್ತದೆ" ಎಂದು ಯುನೈಟೆಡ್ ಸ್ಟೇಟ್ಸ್‌ಗೆ ಚೀನಾದ ರಾಯಭಾರಿ ಹೇಳಿದ್ದಾರೆ.

ಮಾಸ್ಕೋಗೆ ಬೀಜಿಂಗ್ ಬೆಂಬಲವನ್ನು ನೀಡಿದರೆ "ಪರಿಣಾಮಗಳು" ಉಂಟಾಗುತ್ತವೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಶುಕ್ರವಾರದಂದು ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಎಚ್ಚರಿಕೆ ನೀಡಿದ ನಂತರ ಕ್ವಿನ್ ಗ್ಯಾಂಗ್ ಅವರಿಂದ ಈ ರೀತಿ ಪ್ರತಿಕ್ರಿಯೆ ಬಂದಿದೆ.

ಯುಎಸ್ ಮಾಧ್ಯಮ ಸಂಸ್ಥೆ CBS ನೊಂದಿಗೆ ಮಾತನಾಡುತ್ತಾ, ಗ್ಯಾಂಗ್ ಪಶ್ಚಿಮದಿಂದ ಸಾರ್ವಜನಿಕ ಖಂಡನೆಯು "ಸಹಾಯ ಮಾಡುವುದಿಲ್ಲ" ಮತ್ತು "ಉತ್ತಮ ರಾಜತಾಂತ್ರಿಕತೆ" ಅಗತ್ಯವಿದೆ ಎಂದು ದೂರಿದರು.

Beijing will not send weapons to Russia - Chinese ambassador to US

ರಷ್ಯಾದ ಮೇಲೆ ಹಲವಾರು ದೇಶಗಳು ಆರ್ಥಿಕ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಚೀನಾದಿಂದ ಆರ್ಥಿಕ ನೆರವು ಸಿಗಲಿದೆ ಜೊತೆಗೆ ಶಸ್ತ್ರಾಸ್ತ್ರಗಳನ್ನು ರವಾನೆ ಮಾಡುವ ಮೂಲಕ ಮಿಲಿಟರಿ ನೆರವು ಒದಗಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ತಕ್ಷಣವೇ ಪ್ರತಿಕ್ರಿಯಿಸಿದ ಯುಎಸ್ ರಾಜತಾಂತ್ರಿಕರು, ವಿಷಯವನ್ನು ಅಧ್ಯಕ್ಶ ಜೋ ಬೈಡನ್ ತನಕ ಮುಟ್ಟಿಸಿದ್ದರು.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರೊಟ್ಟಿಗೆ ದೂರವಾಣಿ ಸಂಭಾಷಣೆ ನಡೆಸಿದ ಅಧ್ಯಕ್ಷ ಜೋ ಬೈಡನ್, ಮಿಲಿಟರಿ ನೆರವು ಅಥವಾ ಆರ್ಥಿಕ ಸಹಾಯ ನೀಡಿದರೆ ಕಠಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಚೀನಾಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ರಾಯಭಾರಿ ಲಿಂಡಾ ಥಾಮಸ್ ಗ್ರೀನ್ ಫೀಲ್ಡ್ ಅವರು ಹೇಳಿದರು.

ಇನ್ನು ಪೋಲೆಂಡ್ ಭೇಟಿಯ ಸಂದರ್ಭದಲ್ಲಿ ಉಕ್ರೇನ್‌ನಲ್ಲಿ ಸೈನಿಕರ ನಿಯೋಜನೆ ಕುರಿತು ಯುಎಸ್ ಅಧ್ಯಕ್ಷರಿಂದ ಚರ್ಚೆ ಸಾಧ್ಯತೆ ಎಂದು ತಿಳಿದು ಬಂದಿದೆ. ಜೊತೆಗೆ ರಷ್ಯಾದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದು ಶ್ವೇತಭವನ ಸೋಮವಾರ ಹೇಳಿದೆ ಎಂದು ನೆಕ್ಸ್ಟಾ ವರದಿ ಮಾಡಿದೆ. ಜೊತೆಗೆ ಮುಂದಿನ ವಾರ ರಷ್ಯಾ ವಿರುದ್ಧ ಹೊಸ ನಿರ್ಬಂಧಗಳು ಹೇರಲಿದ್ದೇವೆ ಎಂದು ಉಕ್ರೇನ್‌ನ ವಿದೇಶಾಂಗ ಸಚಿವರು ಹೇಳಿದ್ದಾರೆ.

English summary
The Chinese ambassador to the United States says that China will not send weapons and ammunition to support Russia’s war in Ukraine and that Beijing would “do everything to de-escalate the crisis”.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X