ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಪ್‌ಗಳ ಮೇಲೆ ನಿಷೇಧ: ಚೀನಾದಿಂದ ಭಾರತದ ಮೇಲೆ ಮತ್ತೊಂದು ಆರೋಪ

|
Google Oneindia Kannada News

ಬೀಜಿಂಗ್, ಜುಲೈ 3: ಭಾರತವು ಚೀನಾ ಮೂಲದ 59 ಆ್ಯಪ್‌ಗಳ ಮೇಲೆ ನಿಷೇಧ ಹೇರಿದ್ದು, ಚೀನಾವು ಅದನ್ನು ತಾರತಮ್ಯ ಎಂದು ಕರೆದಿದೆ.

ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಯಾಗುವಂತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತವು 59 ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಬಳಿಕ ಚೀನಾ ಈ ಹೇಳಿಕೆ ನೀಡಿದೆ.

ಭಾರತದ ಈ ನಿರ್ಧಾರ ಸಂಬಂಧಿತ ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿಕೆ ನೀಡಿದೆ. ಅಷ್ಟೇ ಅಲ್ಲದೆ ಚೀನಾ ಮತ್ತು ಚೀನಾದ ಉದ್ಯಮಗಳ ವಿರುದ್ಧದ ತಾರತಮ್ಯವನ್ನು ಭಾರತ ತಕ್ಷಣ ನಿಲ್ಲಿಸಲಿದೆ ಎಂದು ತಾನು ಭರವಸೆ ಹೊಂದಿದ್ದೇನೆ ಎಂದು ಸಹ ಹೇಳಿದೆ.

APP

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ಭಾರತದ ರಕ್ಷಣೆ, ರಾಷ್ಟ್ರದ ಸುರಕ್ಷತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಯ ಹಾನಿಗೆ ಯತ್ನಿಸಿದ್ದಕ್ಕಾಗಿ ಭಾರತದಲ್ಲಿ ಜನಪ್ರಿಯವಾಗಿದ್ದ ಟಿಕ್‌ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಅಪ್ಲಿಕೇಶನ್‌ಗಳನ್ನು ಭಾರತ ಸೋಮವಾರ ನಿಷೇಧಿಸಿದೆ.

ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?ಚೀನಾದ 59 App ಬ್ಯಾನ್ ಓಕೆ! PUBG ನಿಷೇಧವಾಗಿಲ್ಲ ಏಕೆ?

ಪೂರ್ವ ಲಡಾಖ್‌ನಲ್ಲಿ ಚೀನಾದ ಸೈನ್ಯದೊಂದಿಗೆ ಗಡಿಯಲ್ಲಿ ನಡೆದ ಸಂಘ್ರಷದ ಬಳಿಕ ಈ ನಿಷೇಧ ಜಾರಿಯಾಗಿದೆ.

ಭಾರತೀಯ ಉತ್ಪನ್ನಗಳು ಮತ್ತು ಸೇವೆಗಳ ವಿರುದ್ಧ ಚೀನಾ ಯಾವುದೇ ನಿರ್ಬಂಧಿತ ಮತ್ತು ತಾರತಮ್ಯದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.

English summary
Two days after the Centre banned 59 Chinese apps, Beijing on Thursday urged New Delhi to correct its discriminatory practices against Chinese companies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X