• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ-ಚೀನಾ ಬಿಕ್ಕಟ್ಟು: ಅಮೆರಿಕ ಪರ ನಿಲ್ಲದಂತೆ ಭಾರತಕ್ಕೆ ಎಚ್ಚರಿಕೆ ಕೊಟ್ಟ ಚೀನಾ

|

ಬೀಜಿಂಗ್, ಜೂನ್ 1: ಅಮೆರಿಕ ಹಾಗೂ ಚೀನಾದ ನಡುವೆ ಕೊರೊನಾವೈರಸ್ ಸೇರಿದಂತೆ ಹಲವು ವಿಚಾರವಾಗಿ ಶೀತಲ ಸಮರ ನಡೆಯುತ್ತಿದೆ.

   ಜನಗಳಿಗೆ ಇಷ್ಟು ಅವಮಾನ ಮಾಡಿದ್ದೀರಲ್ಲಾ , ನಿಮ್ಮನ್ನು ಅವರು ಸುಮ್ಮನೆ ಬಿಡೋದಿಲ್ಲ ಮೋದಿಯವರೇ | Oneindia Kannada

   ಈ ವಿಚಾರಗಳಲ್ಲಿ ಅಮೆರಿಕದ ಪರ ನಿಲ್ಲಬೇಡಿ ಎಂದು ಭಾರತಕ್ಕೆ ಚೀನಾ ಎಚ್ಚರಿಕೆ ನೀಡಿದೆ. ಇನ್ನೊಂದೆಡೆ ಭಾರತ-ಚೀನಾ ಗಡಿ ವಿವಾದ ಕೂಡ ತಾರಕಕ್ಕೇರಿದೆ. ಭಾರತ ಹಾಗೂ ಚೀನಾದ ನಡುವೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಿದೆ.

   ಇನ್ನೊಂದೆಡೆ ಕೊರೊನಾವೈರಸ್‌ನಿಂದ ಅಮೆರಿಕದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು, ಅದನ್ನು ಹುಟ್ಟುಹಾಕಿದ್ದು ಚೀನಾ ಎಂಬ ಆರೋಪ ಡೊನಾಲ್ಡ್ ಟ್ರಂಪ್ ಮಾಡಿದ್ದು, ಅವರ ಜೊತೆ ಇರುವ ಎಲ್ಲಾ ಸಂಬಂಧಗಳನ್ನು ಕಡಿದುಹಾಕಿಕೊಳ್ಳಲು ಮುಂದಾಗಿದ್ದಾರೆ.

   ಚೀನಾ ವಿದ್ಯಾರ್ಥಿಗಳಿಗೆ ಅಮೆರಿಕ ಪ್ರವೇಶಕ್ಕೆ ನಿಷೇಧ ಹೇರಿದ ಟ್ರಂಪ್

   ಚೀನಾ ವಿದ್ಯಾರ್ಥಿಗಳಿಗೆ ಅಮೆರಿಕಕ್ಕೆ ಪ್ರವೇಶಿವಿಲ್ಲ ಎಂದು ಹೇಳಿದ್ದು, ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ಅನುದಾನವನ್ನು ಕೂಡ ವಾಪಸ್ ಪಡೆದಿದ್ದಾರೆ. ಚೀನಾ ಹಾಗೂ ಅಮೆರಿಕದ ನಡುವಿನ ಬಿಕ್ಕಟ್ಟಿನಲ್ಲಿ ಅಮೆರಿಕಕ್ಕೆ ಬೆಂಬಲ ನೀಡಲು ಭಾರತ ಮುಂದಾಗಿದೆ.

   ಆದರೆ ಚೀನಾ ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ಬೆಂಬಲ ನೀಡಬೇಡಿ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.

   ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ವಿಡಿಯೋ ತಿರಸ್ಕರಿಸಿದ ಸೈನ್ಯ

   ಸಲಹೆ ರೂಪದಲ್ಲಿ ಭಾರತಕ್ಕೆ ಎಚ್ಚರಿಕೆ

   ಸಲಹೆ ರೂಪದಲ್ಲಿ ಭಾರತಕ್ಕೆ ಎಚ್ಚರಿಕೆ

   ಸಲಹೆಯ ರೂಪದಲ್ಲಿ ಭಾರತಕ್ಕೆ ಎಚ್ಚರಿಸಿರುವ ಚೀನಾ, ಅಮೆರಿಕ-ಚೀನಾ ನಡುವಿನ ಬಿಕ್ಕಟ್ಟಿನಲ್ಲಿ ಭಾರತ ಭಾಗಿಯಾದದ್ದೇ ಆದಲ್ಲಿ ಅದಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಆದ್ದರಿಂದ ಭಾರತ ಇದರಲ್ಲಿ ದೂರ ಉಳಿಯುವುದೇ ಸೂಕ್ತ ಎಂದು ಹೇಳಿದೆ.

   ಅಮೆರಿಕ-ಚೀನಾ ನಡುವೆ ಶೀತಲ ಸಮರ

   ಅಮೆರಿಕ-ಚೀನಾ ನಡುವೆ ಶೀತಲ ಸಮರ

   ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಗ್ಲೋಬಲ್ ಟೈಮ್ಸ್ ನ ಈ ಬಗ್ಗೆ ಲೇಖನ ಪ್ರಕಟಿಸಿದ್ದು, ಭಾರತದಲ್ಲಿ ಕೆಲವು ಮಂದಿ ಅಮೆರಿಕ-ಚೀನಾ ನಡುವಿನ ಶೀತಲ ಸಮರದಲ್ಲಿ ಪಾತ್ರ ವಹಿಸಿ ಅಮೆರಿಕ ಪರವಾಗಿ ನಿಲ್ಲಬೇಕೆಂಬ ಧ್ವನಿಗಳು ಕೇಳಿಬರುತ್ತಿವೆ. ಆದರೆ ಇದು ಮುಖ್ಯವಾಹಿನಿಯ ಧ್ವನಿಯಾಗಿಲ್ಲ, ಈ ರೀತಿಯ ಹೇಳಿಕೆಗಳು ದಾರಿ ತಪ್ಪಿಸುವಂಥಹದ್ದಾಗಿದೆ.

   ಭಾರತ ಆರ್ಥಿಕತೆ ಎದುರಿಸುವಂತಾಗಲಿದೆ

   ಭಾರತ ಆರ್ಥಿಕತೆ ಎದುರಿಸುವಂತಾಗಲಿದೆ

   ಆದರೆ ಭಾರತ ಚೀನಾ ವಿರುದ್ಧವಾಗಿ ಅಮೆರಿಕ ದಾಳವಾಗಬಾರದು, ಒಂದು ವೇಳೆ ಆಗಿದ್ದೇ ಆದಲ್ಲಿ ಭಾರತ ಆರ್ಥಿಕವಾಗಿ ಸಮಸ್ಯೆ ಎದುರಿಸಲಿದೆ ಎಂದು ಚೀನಾ ಹೇಳಿದೆ.

   ಭಾರತ-ಚೀನಾ ಗಡಿಯಲ್ಲಿ ಸೇನಾ ಪಡೆಗಳಿಂದ ಶಸ್ತ್ರಾಸ್ತ್ರ ರವಾನೆ

   ಭಾರತ-ಚೀನಾ ಗಡಿಯಲ್ಲಿ ಸೇನಾ ಪಡೆಗಳಿಂದ ಶಸ್ತ್ರಾಸ್ತ್ರ ರವಾನೆ

   ಭಾರತ-ಚೀನಾ ಗಡಿಯಲ್ಲಿ ಸ್ಥಿತಿ ಉದ್ವಿಘ್ನಗೊಂಡಿದೆ. ಸೇನಾ ಪಡೆಗಳಿಂದ ಶಸ್ತ್ರಾಸ್ತ್ರ ರವಾನೆಯಾಗಿದೆ.

   ವಾಸ್ತವ ನಿಯಂತ್ರಣ ರೇಖೆ ಸಮೀಪದ ನೆಲೆಗಳಿಗೆ ಯುದ್ಧ ವಾಹನಗಳು ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ಚೀನಾ ಸಾಗಿಸಿದೆ. ಭಾರತ ಕೂಡ ತಾವೂ ಏನೂ ಕಡಿಮೆಯಿಲ್ಲ ಎಂಬಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಗಡಿ ವಿವಾದವನ್ನು ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಇತ್ಯರ್ಥಗೊಳಿಸುವುದಾಗಿ ಉಭಯ ದೇಶಗಳು ಹೇಳಿಕೆ ನೀಡಿವೆ. ಹಾಗಿದ್ದರೂ ಗಡಿಯಲ್ಲಿ ಸೇನಾ ಚಟುವಟಿಕೆಗಳು ಬಿರುಸುಗೊಂಡಿವೆ.

   ವಿವಾದಿತ ಪ್ರದೇಶದ ಮೇಲೆ ಭಾರತೀಯ ವಾಯು ಪಡೆ ನಿರಂತರವಾಗಿ ನಿಗಾ ಇರಿಸುತ್ತಾ ಬಂದಿದೆ. ಪೂರ್ವ ಲಡಾಖ್ ನಲ್ಲಿ ಚೀನಾ ಹಾಗೂ ಭಾರತ ಸೇನೆಗಳ ನಡುವೆ ಯುದ್ಧ ನಡೆದಿದೆ ಎನ್ನುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೋಗಳು ಹರಿದಾಡುತ್ತಿವೆ ಆದರೆ ಅದ್ಯಾವುದೂ ಸತ್ಯವಾದುದ್ದಲ್ಲ. ಅಂತಹ ಘಟನೆಗಳು ನಡೆದೇ ಇಲ್ಲ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.

   English summary
   Warning India to be "careful", China on Sunday asked New Delhi not to get involved in the Washington-Beijing rivalry even as some predict that the world's two largest economies are "about to enter a new Cold War".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more