ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಗಜಗಾತ್ರದ ರಂಗೋಲಿ ಬರೆಯಲು ಬೇಕಾಗಿದ್ದು 3 ದಿನ, 12 ಜನ!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಕೊಲ್ಲಿ ದೇಶಗಳಲ್ಲಿ ದೇಪಾವಳಿ ಆಚರಿಸುವುದು ಹೊಸತೇನಲ್ಲ, ಆದರೆ ಕತಾರ್ ಎಂಬ ದೇಶದಲ್ಲಿ ಭಾರತೀಯರು ಈ ಬಾರಿ ದೀಪಾವಳಿ ಆಚರಿಸುತ್ತ ಒಂದು ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಸುಮಾರು 12 ಜನರ ತಂಡವು ಸತತವಾಗಿ 3 ದಿನಗಳ ಕಾಲ ಶ್ರಮಪಟ್ಟು, ಒಂದು ಬೃಹತ್ ಗಾತ್ರದ ರಂಗೋಲಿಯನ್ನು ರಚಿಸಿದ್ದಾರೆ. ಸ್ಥಳೀಯ ಆಕಾಶವಾಣಿ 'ರೇಡಿಯೋ ಆಲಿವ್ 106.3' ಸಂಸ್ಥೆಯವರೊಂದಿಗೆ ಸೇರಿ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ದೊಡ್ಡ ರಂಗೋಲಿ ಹಾಗು ಇತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕತಾರಿನಲ್ಲಿ ವಾಸವಾಗಿರುವ ಭಾರತೀಯರಿಗೆ ಹಾಗು ಇತರೆ ದೇಶದವರ ಸಲುವಾಗಿ ಆಯೋಜಿಸಿದ್ದಾರೆ.

ಕಸ ಹಾಕೋ ಜಾಗದಲ್ಲಿ ರಂಗೋಲಿ ಬಿಡಿಸಿ ಗಾಂಧಿಗಿರಿ ತೋರಿದ ಪೌರಕಾರ್ಮಿಕರು ಕಸ ಹಾಕೋ ಜಾಗದಲ್ಲಿ ರಂಗೋಲಿ ಬಿಡಿಸಿ ಗಾಂಧಿಗಿರಿ ತೋರಿದ ಪೌರಕಾರ್ಮಿಕರು

ಭಾರತೀಯ ಸಂಸ್ಕೃತಿ ಹಾಗು ಪರಂಪರೆಯನ್ನು ಪ್ರತಿಬಿಂಬಿಸಲು ಹಬ್ಬಗಳ ಆಚರಣೆ ಅತ್ಯಗತ್ಯ. ದಿನಾಂಕ ಅಕ್ಟೋಬರ್ 25 ರಿಂದ 27 ರ ತನಕ ದೊಹಾದಲ್ಲಿನ ಮಿರ್ಕಾಬ್ ಮಾಲ್ ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಗಳು, ಮಿಟಾಯಿ ಮಳಿಗೆಗಳು, ಜಾದೂ ಪ್ರದರ್ಶನ ಹಾಗೂ ಉಲ್ಲಾಸಭರಿತ ಚಟುವಟಿಕೆಗಳು ಸೇರಿ ಭಾಗವಹಿಸಿದವರಿಗೆ ವಿಶೇಷ ಬಹುಮಾನಗಳನ್ನು ವಿತರಿಸಲಾಗುತ್ತದೆ.

Beautiful And Huge Rangoli in Qatar Grabs Attention of Million.

ಕನ್ನಡಿಗರ ಪ್ರತಿನಿಧಿಯಾಗಿ ಹಾಗೂ 'ಭಾರತೀಯ ಸಮುದಾಯ ಹಿತನಿಧಿ (ಐ.ಸಿ.ಬಿ.ಎಫ್.)' ಸಂಘದ ಜಂಟಿ-ಕಾರ್ಯದರ್ಶಿಯಾಗಿರುವ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಕ್ರಿಯವಾಗಿ ಸೇವೆ ಸಲ್ಲಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿದ್ದಾರೆ. ಭಾರತೀಯ ಮೌಲ್ಯಗಳನ್ನು ಹೊರದೇಶದಲ್ಲಿ ಎತ್ತಿ ಹಿಡಿಯುವಲ್ಲಿ ಶ್ರೀಯುತ ಸುಬ್ರಮಣ್ಯರವರು ಶ್ರಮವಹಿಸಿ, ತಮ್ಮ ಕ್ರಿಯಾಶಿಲತೆಯಿಂದ ಸಮಾಜದ ಸಕಾರಾತ್ಮಕ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ.
English summary
Beautiful And Huge Rangoli in Qatar Grabs Attention of Million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X