ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷೀಯ ಪದವಿಗೆ ಭಾವುಕ ವಿದಾಯ ಹೇಳಿದ ಬರಾಕ್ ಒಬಾಮಾ

|
Google Oneindia Kannada News

ಚಿಕಾಗೊ, ಜ. 11: ಸತತ ಎಂಟು ವರ್ಷಗಳ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಬುಧವಾರ ಅಧಿಕೃತವಾಗಿ ತಮ್ಮ ಅಧ್ಯಕ್ಷೀಯ ಪದವಿಗೆ ವಿದಾಯ ಹೇಳಿದರು.

ಅವರ ತವರೂರಾದ ಚಿಕಾಗೋದಲ್ಲಿ ಏರ್ಪಡಿಸಲಾಗಿದ್ದ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾಗಿ ಮಾತನಾಡಿದ ಒಬಾಮ, ಎದೆಯಲ್ಲಿದ್ದ ವಿಚಾರಗಳನ್ನೆಲ್ಲಾ ಹೊರಹಾಕಿ ನಿರಾಳರಾದರು.

ಸತತವಾಗಿ ಎಂಟು ವರ್ಷಗಳ ಕಾಲದ ಅಧ್ಯಕ್ಷೀಯ ಅವಧಿಯಲ್ಲಿ ತಮಗೆ ಅಪಾರ ಬೆಂಬಲ ನೀಡಿದ ಅಮೆರಿಕದ ನಾಗರಿಕರಿಗೆ, ಅಧಿಕಾರಿಗಳಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಒಬಾಮ, ಅಮೆರಿಕದ ಸಾರ್ವಭೌಮತ್ವ, ಭದ್ರತೆಗೆ ಯಾರಿಂದರೂ ಯಾವಕಾಲದಲ್ಲೂ ಧಕ್ಕೆಯುಂಟಾಗದು ಎಂದು ಧೀರೋದಾತ್ತವಾಗಿ ಘೋಷಿಸಿದರು.

ತಮ್ಮ ಮಾತಿನಲ್ಲಿ ತಮ್ಮ ತವರೂರಾದ ಚಿಕಾಗೋ ನಗರವನ್ನು ಶ್ಲಾಘಿಸಲು ಮರೆಯದ ಅವರು, "ಚಿಕಾಗೋ ನನಗೆ ಹಾಗೂ ನನ್ನ ಪತ್ನಿ ಮಿಷೆಲ್ ಗೆ ಆಶ್ರಯ ಹಾಗೂ ತಿರುವುಗಳನ್ನು ನೀಡಿದ ಊರು. ನಮ್ಮ ವೃತ್ತಿಜೀವನ ಶುರುವಾಗಿದ್ದೇ ಇಲ್ಲಿ. ಈ ನಗರವು ನಮಗೆ ಅಮೆರಿಕದ ಶಕ್ತಿ ಹಾಗೂ ಈ ದೇಶವು ತನ್ನ ಪ್ರಜೆಗಳಿಗೆ ನೀಡಿರುವ ಮೂಲಭೂತ ಹಕ್ಕುಗಳ ಗಮ್ಯತೆಯನ್ನು ಪರಿಚಯ ಮಾಡಿಕೊಟ್ಟಿತು'' ಎಂದು ತಿಳಿಸಿದರು.

Barack Obama's Last Presidential Speech

ಅವರ ಭಾಷಣದ ಕೆಲ ಪ್ರಮುಖಾಂಶಗಳು ಇಲ್ಲಿ ನಿಮಗಾಗಿ...

- ಕಳೆದ ಕೆಲವಾರು ವರ್ಷಗಳಲ್ಲಿ ನನಗೆ ಹಾಗೂ ನನ್ನ ಪತ್ನಿ ಮಿಷೆಲ್ ಅವರಿಗೆ ಸಿಕ್ಕ ಜನರ ಪ್ರೀತಿ, ಆದರಣೆಯನ್ನು ನಾನೆಂದಿಗೂ ಮರೆಯಲಾರೆ.

- ಅಧ್ಯಕ್ಷ ಗಾದಿಯಲ್ಲಿ ಕೂತ ಪ್ರತಿ ನಿಮಿಷವೂ ನನ್ನ ಪಾಲಿಗೆ ಕಲಿಕೆಯಾಗಿತ್ತು. ನಾನೇನಾದರೂ ಉತ್ತಮ ಅಧ್ಯಕ್ಷ ಎಂದು ಹೆಸರು ಮಾಡಿದ್ದರೆ ಅದಕ್ಕೆ ನೀವೇ (ಪ್ರಜೆಗಳು) ಕಾರಣ.

- ಜನ ಸಾಮಾನ್ಯರ ಅಹವಾಲುಗಳು, ಅನಿಸಿಕೆಗಳು, ಅಭಿಪ್ರಾಯಗಳ ಪ್ರಕಾರವೇ ಆಡಳಿತ ಯಂತ್ರ ನಡೆದುಕೊಂಡರೆ ಯಾವುದೇ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದನ್ನು ನಾನು ಕಲಿತ ದೊಡ್ಡ ಪಾಠ.

- ಈ ದೇಶವನ್ನು ಕಟ್ಟಿದ ಮಹನೀಯರು ನಮಗೆ ಕೊಟ್ಟಿರುವ ದೊಡ್ಡ ಉಡುಗೊರೆಯೆಂದರೆ, ನಮ್ಮ ಸ್ವಪ್ರಯತ್ನ, ಪರಿಶ್ರಮದಿಂದ ನಮ್ಮ ಕನಸನ್ನು ನನಸು ಮಾಡಿಕೊಳ್ಳುವ ಸ್ವಾತಂತ್ರ್ಯ.

-ಸತತವಾಗಿ ಮುನ್ನಡೆಯುವುದೇ ಅಮೆರಿಕದ ಮೂಲ ಮಂತ್ರವಾಗಿರುವುದರಿಂದಲೇ ಇಲ್ಲಿ ನಾಗರಿಕರಿಗೆ ತಮ್ಮ ಬದುಕನ್ನು ಹಸನಾಗಿಸಲು ಹಲವಾರು ದಾರಿಗಳನ್ನು ತೋರಿಸಿಕೊಟ್ಟಿದೆ..

- ಯುವ ಜನತೆಯೇ ಅಮೆರಿಕದ ಶಕ್ತಿ ಹಾಗೂ ದೇಶವನ್ನು ಮುನ್ನಡೆಸುವ ಆಶಾಕಿರಣ.

- ವಿವಿಧ ಸಂಸ್ಕೃತಿಗಳಿಗೆ ಇಲ್ಲಿ ಆಶ್ರಯ ಕಲ್ಪಿಸಿರುವುದು, ಕ್ಲಿಷ್ಟಕರ ಸವಾಲುಗಳಿಗೆ ನಮ್ಮನ್ನು ನಾವು ಒಡ್ಡಿಕೊಳ್ಳುವುದು, ದೇಶವನ್ನು ಅಭಿವೃದ್ಧಿ ಪಥದ ಕಡೆಗೆ ನಮ್ಮನ್ನು ನಾವು ಮುನ್ನಡೆಸುವ ಬಗ್ಗೆ ಹೊಸ ಹೊಸ ದಾರಿಗಳನ್ನು ಕಂಡುಕೊಳ್ಳಲು ನಾವು ಸಿದ್ಧರಾಗಿರುವುದರಿಂದ ಭವಿಷ್ಯವನ್ನು ನಮ್ಮ ಹೆಸರಿಗೆ ಬರೆದುಕೊಳ್ಳುವೆವು.

- ಇನ್ನು 10 ದಿನಗಳಲ್ಲಿ ಅಮೆರಿಕ ಪ್ರಜೆಗಳು ಸ್ವತಂತ್ರ್ಯವಾಗಿ, ಪ್ರಜ್ಞಾಪೂರ್ವಕವಾಗಿ ಆರಿಸಿರುವ ನೂತನ ಅಧ್ಯಕ್ಷರೊಬ್ಬರು ಪದಗ್ರಹಣ ಮಾಡುವ ಮೂಲಕ ಈ ದೇಶದ ಪ್ರಜಾಪ್ರಭುತ್ವದ ಮುದ್ರೆಯೊತ್ತಲಿದ್ದಾರೆ.

- ನಮ್ಮ ಪ್ರಜೆಗಳು ಆರ್ಥಿಕವಾಗಿ ಸದೃಢಗೊಳ್ಳುವ ಅವಕಾಶ ನೀಡುವ ಅವಕಾಶವನ್ನು ನೀಡದಿದ್ದರೆ, ನಮ್ಮ ಪ್ರಜಾಪ್ರಭುತ್ವಕ್ಕೆ ಅರ್ಥವಿರುವುದಿಲ್ಲ.

- ಕಳೆದ ವರ್ಷ ನಮ್ಮ ದೇಶದ ಎಲ್ಲಾ ಜನಾಂಗೀಯ ಪ್ರಜೆಗಳ ವರಮಾನ ಗಣನೀಯವಾಗಿ ಹೆಚ್ಚಿದೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ವರಮಾನದ ವಿಚಾರದಲ್ಲಿ ಪುರುಷರು, ಮಹಿಳೆಯರು ಸಮಾನ ಸಾಧನೆ ಮಾಡಿದ್ದಾರೆ.

- ಈ ದೇಶವು ಮತ್ತಷ್ಟು ಅಭಿವೃದ್ಧಿ ಸಾಧಿಸಬೇಕಾದಲ್ಲಿ ನಾವು ತಾರತಮ್ಯ ನೀತಿಯ ವಿರುದ್ಧ ಸಮರ ಸಾರಬೇಕು. ತಾರತಮ್ಯ ವಾತಾವರಣ ಇಲ್ಲದಂತಹ ಕಾನೂನುಗಳನ್ನು ಮತ್ತಷ್ಟು ಬಲಪಡಿಬೇಕಾದ ಅನಿವಾರ್ಯತೆಯಿದೆ.

- ಇದರ ಜತೆಯಲ್ಲೇ ನಾವು ನಮ್ಮ ಮಕ್ಕಳಿಗೆ ಜಾಗತಿಕ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅವರನ್ನು ಪ್ರೇರೇಪಿಸಬೇಕು.

- ಅಮೆರಿಕವು ಮೌಲ್ಯಗಳುಳ್ಳ ದೇಶ. ಹಾಗಾಗಿಯೇ ನಾನು ಅಮೆರಿಕಾದ ಮುಸ್ಲಿಮರನ್ನು ದ್ವೇಷಿಸುವಂಥ ವಿಚಾರಗಳನ್ನು ತಿರಸ್ಕರಿಸುತ್ತೇನೆ. ಇಲ್ಲಿಯ ಮುಸ್ಲಿಮರು, ಮೂಲ ಅಮೆರಿಕದವರಷ್ಟೇ ದೇಶಪ್ರೇಮಿಗಳು ಹಾಗೂ ಔದಾರ್ಯಿಗಳು.

- ಇಡೀ ವಿಶ್ವದ ಮೇಲೆ ನಮ್ಮ ದೇಶ ಬೀರಿರುವ ಪ್ರಭಾವಕ್ಕೆ ನಮ್ಮ ಪ್ರತಿಸ್ಪರ್ಧಿಗಳಾದ ರಷ್ಯಾ ಹಾಗೂ ಚೀನಾದಂತಹ ದೇಶಗಳು ಎಷ್ಟೇ ಪ್ರಯತ್ನಿಸಿದರೂ ಸರಿಸಾಟಿಯಾಗಲಾರವು. ಈ ಸಾರ್ವಭೌಮತ್ವ, ಪ್ರಭಾವ ಹೀಗೇ ಉಳಿಯಬೇಕಾದರೆ ನಾವು ನಮ್ಮ ಸಂವಿಧಾನವನ್ನು ಕಾಪಿಟ್ಟುಕೊಳ್ಳಬೇಕು.

- ನಮ್ಮ ಎದುರಾಳಿಯು ನಮ್ಮನ್ನು ಹಿಂದಿಕ್ಕಲು ಯಾವ ರೀತಿಯ ತಂತ್ರಗಾರಿಕೆ ರೂಪಿಸುತ್ತಿದ್ದಾನೆ ಎಂಬುದನ್ನು ಮನಗಾಣುವ ಜಾಣ್ಮೆ ಹಾಗೂ ವಿಚಾರವಂತಿಕೆಯನ್ನು ಅಳವಡಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ನಾವು ಖಂಡಿತವಾಗಿಯೂ ಹಿಂದುಳಿಯಬೇಕಾಗುತ್ತದೆ.

- ವಲಸೆ ಬಂದಿರುವ ಕಪ್ಪುವರ್ಣೀಯರ ಮಕ್ಕಳಿಗೆ ನಾವು ಇಲ್ಲಿ ಉತ್ತಮ ಭವಿಷ್ಯ ರೂಪಿಸಲು ಅನುಕೂಲಕರ ವಾತಾವರಣ, ಅಮೋಘ ಅವಕಾಶಗಳನ್ನು ಸೃಷ್ಟಿಸಬೇಕು. ಏಕೆಂದೆರ, ಮುಂಬರುವ ವರ್ಷಗಳಲ್ಲಿ ಆ ಮಕ್ಕಳು ಅಮೆರಿಕದ ಶ್ರಮಿಕ ವಲಯದ ಪ್ರಮುಖ ಪಾಲುದಾರರಾಗಲಿದ್ದಾರೆ.

- ಮೂಲಭೂತವಾದದಿಂದ ಆಗುವ ಅಪಾಯಗಳೇನೆಂದು ನಾವು ಬೋಸ್ಟನ್ ಹಾಗೂ ಒರ್ಲಾಂಡೊ ಪ್ರಕರಣಗಳಿಂದ ಅರಿತಿದ್ದೇವೆ. ಇಂಥ ವಿಚಾರಗಳನ್ನು ಹತ್ತಿಕ್ಕಲು ನಮ್ಮ ಕಾನೂನು ಸುವ್ಯವಸ್ಥೆಯು ಬಲಿಷ್ಠ ಹಾಗೂ ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿವೆ.

- ನಾವು ಒಸಾಮ ಬಿನ್ ಲ್ಯಾಡೆನ್ ಅವನಂಥ ಸಾವಿರಾರು ಉಗ್ರರನ್ನು ಸದೆಬಡಿದಿದ್ದೇವೆ.

- ಐಎಸ್ ಉಗ್ರರು ಸಂಪೂರ್ಣವಾಗಿ ನಾಶವಾಗಲಿದ್ದಾರೆ. ಯಾರು ಅಮೆರಿಕ ಭದ್ರತೆಗೆ ಸವಾಲೊಡ್ಡುತ್ತಾರೋ ಅವರನ್ನು ಈ ದೇಶ ಖಂಡಿತವಾಗಿಯೂ ಸರ್ವನಾಶ ಮಾಡುತ್ತದೆ.

- ಅಮೆರಿಕದ ಪ್ರಗತಿಗೆ ಕಾರಣರಾದವರು ಅಧ್ಯಕ್ಷರಲ್ಲ, ಆಡಳಿತ ವರ್ಗವಲ್ಲ. ಇಲ್ಲಿನ ಪ್ರಜೆಗಳೇ. ಅವರ ಅವಿಶ್ರಾಂತ ದುಡಿಮೆ, ಸರ್ಕಾರಗಳಿಗೆ ಅವರು ನೀಡಿದ ಬೆಂಬಲ, ಉತ್ತಮ ನಾಗರಿಕ ಮೌಲ್ಯಗಳನ್ನು ರೂಢಿಸಿಕೊಂಡಿರುವ ರೀತಿಗಳಿಂದಲೇ ಅಮೆರಿಕವು ಪ್ರಪಂಚದಲ್ಲಿಂದು ಶಕ್ತಿಶಾಲಿ, ಗೌರವಯುತ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಸದಾ ಹೀಗೇ ಇರಲಿ.

- ಅಂತಿಮವಾಗಿ, ಎಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಮೊದಲಿಗೆ ನನ್ನ ಪತ್ನಿ ಮಿಷೆಲ್ ಗೆ. ಮಿಷೆಲ್ ನೀನೊಬ್ಬ ಪತ್ನಿ ಮಾತ್ರವಲ್ಲ, ನನ್ನ ಮಕ್ಕಳ ತಾಯಿ ಮಾತ್ರವಲ್ಲ, ಎಲ್ಲಕ್ಕೂ ಮಿಗಿಲಾಗಿ ನನ್ನ ಆತ್ಮೀಯ ಸ್ನೇಹಿತೆ.

- ನಿನ್ನ (ಮಿಷೆಲ್) ಸ್ನೇಹ, ಔದಾರ್ಯ, ಪ್ರೀತಿ, ಒಲುಮೆ, ಕಾಳಜಿ, ಸಲಹೆಗಳಿಲ್ಲದಿದ್ದರೆ ನಾನು ಇಂಥ ದೊಡ್ಡ ಪದವಿಗೇರುತ್ತಿರಲಿಲ್ಲ.

- ಮಲಿಯಾ ಮತ್ತು ಸಾಶಾ (ಮಕ್ಕಳು)... ನಿಮ್ಮ ಓರಗೆಯ ಮಕ್ಕಳಗಿಂತ ವಿಭಿನ್ನವಾದ ಪರಿಸರದಲ್ಲಿ ಬೆಳೆದ ನೀವು ಇಂದು ನಿಮ್ಮ ಬದುಕನ್ನು ಸ್ವತಂತ್ರವಾಗಿ ರೂಪಿಸುವ ಹಂತದಲ್ಲಿದ್ದೀರಿ. ನಿಮಗೆ ಒಳ್ಳೆಯದಾಗಲಿ. ನೀವಿಂದು ಕೇವಲ ಬೆಳೆದ ಮಕ್ಕಳಾಗಿರದೇ ಪ್ರಗತಿಪರರೂ, ಚಿಂತನಾಶೀಲರೂ, ವಿಚಾರವಂತರೂ ಆಗಿರುವುದು ಹೆಮ್ಮೆ ತಂದಿದೆ.

- ನನ್ನ ಧನ್ಯವಾದಗಳು ಉಪಾಧ್ಯಕ್ಷ ಜೊ ಬೈಡನ್ ಅವರಿಗೆ ಸಲ್ಲುತ್ತವೆ. ಕಷ್ಟಕರ ಹಾದಿಯನ್ನು ತುಳಿದು ಬಂದು ಇಂದು ದೊಡ್ಡ ಸ್ಥಾನದಲ್ಲಿರುವ ಬೈಡನ್ ಅವರಲ್ಲಿ ನಾನು ಒಬ್ಬ ಸಹೋದರರನ್ನು ನೋಡಿದ್ದೇನೆ.

- ಈಗಲೂ ನನಗೆ, ನನ್ನ ಆಯ್ಕೆಯಂತೆ ಅಮೆರಿಕದ ಅಧ್ಯಕ್ಷರನ್ನು ಆರಿಸುತ್ತೇವೆಂಬ ಅವಕಾಶ ಕೊಟ್ಟರೆ ಖಂಡಿತವಾಗಿಯೂ ನಾನು ನಿಮ್ಮ ಹೆಸರನ್ನು (ಬೈಡನ್) ಸೂಚಿಸುತ್ತೇನೆ.

- ಮುಂದಿನ ದಿನಗಳಲ್ಲಿ ನೀವು ನಿಮ್ಮ ಶಕ್ತಿಯ ಮೇಲೆ ವಿಶ್ವಾಸವಿಟ್ಟು ಕೆಲಸವನ್ನು ಯಥಾ ಪ್ರಕಾರ ಮುಂದುವರಿಸುತ್ತೀರಿ ಎಂದು ನಂಬಿದ್ದೇನೆ. ನೀವು ನಿಮ್ಮ ಆತ್ಮವಿಶ್ವಾಸದಲ್ಲಿ ಭರವಸೆಯಿಡಿ.

- 'ನಾವು ಸಾಧಿಸುವೆವು, ನಾವು ಸಾಧಿಸುವೆವು' ಎಂಬುದೇ ನನ್ನ ಕೊನೆಯ ನುಡಿ.

English summary
US President Barack Obama made his farewell speech in Chicago today as he closes the book on his presidency. Addressing America in his farewell speech before he hands over charge to Donald Trump he said that he will be with the country as a citizen and watch the great nation grow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X