ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನ ದೀಪಾವಳಿ ಆಚರಣೆ ಎಂದಿಗೂ ಮರೆಯಲಾರೆ

|
Google Oneindia Kannada News

ವಾಷಿಂಗ್ ಟನ್, ಅ. 23 : ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ದೀಪಾವಳಿ ಶುಭಾಷಯ ಕೋರಿದ್ದಾರೆ. ಈ ಬಗ್ಗೆ ವಿಡಿಯೋ ಸಂದೇಶವೊಂದರಲ್ಲಿ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಬೆಳಕಿನ ಹಬ್ಬ ಆಚರಿಸುವ ಎಲ್ಲರಿಗೂ ಹಾರೈಕೆ ತಿಳಿಸಿದ್ದಾರೆ.

2009ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಗದ್ದುಗೆ ಏರಿದ್ದ ಒಮಾಬಾ ಶ್ವೇತ ಭವನದಲ್ಲಿ ಮೊದಲ ಬಾರಿ ದೀಪಾವಳಿ ಆಚರಿಸಿದ್ದರು. ನಂತರ 2010ರಲ್ಲಿ ಭಾರತಕ್ಕೆ ಪತ್ನಿಯೊಂದಿಗೆ ಭೇಟಿ ನೀಡಿದ್ದ ಒಬಾಮಾ ಮುಂಬೈನಲ್ಲಿ ಬೆಳಕಿನ ಹಬ್ಬ ಆಚರಿಸಿದ್ದರು.[ದೀಪಾವಳಿː ಬೆಂಗಳೂರಲ್ಲಿ ಎಲ್ಲೆಲ್ಲಿ ಪಟಾಕಿ ಸಿಗುತ್ತೆ?]

obama

2009ರಲ್ಲಿ ದೀಪಾವಳಿ ಆಚರಿಸಿದ್ದು ನನ್ನ ಜೀವನದ ಮರೆಯಲಾಗದ ಘಟನೆಗಳಲ್ಲಿ ಒಂದು. ಇದರ ನಂತರ ಪ್ರತಿವರ್ಷ ಈ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ನಾನು ಮತ್ತು ಹೆಂಡತಿ ಮಿಚೆಲ್ ಮುಂಬೈನಲ್ಲಿ ಆಚರಿಸಿದ ದೀಪಾವಳಿಯನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತೇವೆ. ಆ ದಿನದ ವಿಶೇಷ ಆಹಾರ, ನೃತ್ಯ, ಸ್ನೇಹಿತರೊಂದಿಗೆ ಕಳೆದ ಕ್ಷಣಗಳು ಇಂದಿಗೂ ಹಸಿರಾಗಿವೆ ಎಂದು ಒಬಾಮಾ ಹೇಳಿದ್ದಾರೆ.[ಸಮೃದ್ಧಿ ಸಂಪ್ರೀತಿ ಸಮಾನತೆಯ ದೀಪಾವಳಿ]

ಇದು ಕತ್ತಲೆಯೆಡಿಂದ ಬೆಳಕಿಗೆ ಸಾಗುವ ಹಬ್ಬವಾಗಿದ್ದು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ. ಕುಟುಂಬದವರೆಲ್ಲ ಸೇರಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರೆ ಮತ್ತಷ್ಟು ಸುಂದರವಾಗುತ್ತದೆ. ನಮ್ಮ ಗುರಿ ಉದ್ದೇಶಗಳನ್ನು ದಾಖಲಿಸಲಿ ಮತ್ತು ಅದನ್ನು ಸಾಧಿಸಲು ಈ ಹಬ್ಬ ಒಂದು ಆಧಾರವಾಗಬಲ್ಲದು. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಪ್ರಪಂಚದಲ್ಲಿ ನೆಲೆಗೊಳ್ಳುವಂತೆ ಹಬ್ಬ ಮಾಡಲಿ. ಎಲ್ಲ ಹಬ್ಬಗಳ ಸಂದೇಶವೂ ಇದನ್ನೇ ಸಾರುತ್ತದೆ ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ಆಶಿಸಿದ್ದಾರೆ.

English summary
America President Barack Obama has in video message wished a Happy Diwali to all those who celebrate the festival of lights saying it was a reminder that light will ultimately prevail. Obama, who in 2009 became the first US president to celebrate Diwali at the White House. Recalled the "wonderful time" he and his wife Michelle had celebrating the festival in Mumbai during his 2010 visit to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X