• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಗ್ರವಾದ ಪ್ರಪಂಚಕ್ಕಂಟಿದ ಕ್ಯಾನ್ಸರ್: ಒಬಾಮಾ

|

ವಾಷಿಂಗ್ ಟನ್, ಜನವರಿ, 13: ವಿಶ್ವದ ಹಿರಿಯಣ್ಣ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ತಮ್ಮ ಅಧ್ಯಕ್ಷೀಯ ಅವಧಿಯ ಕೊನೆ ಭಾಷಣ ಮಾಡಿ ಮುಗಿಸಿದ್ದಾರೆ. ಉಗ್ರಗಾಮಿಗಳ ವಿರುದ್ಧ ಸಮರ, ಭದ್ರತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ, ಮನುಕುಲದ ಜೀವ ಹಿಂಡುತ್ತಿರುವ ಕ್ಯಾನ್ಸರ್ ಮಾರಿಯನ್ನು ಪ್ರಪಂಚದಲ್ಲೇ ಒದ್ದೊಡಿಸುವ ಪರಿ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಪಂಚದ ಮುಂದೆ ತೆರೆದಿಟ್ಟಿದ್ದಾರೆ.

ಅಮೆರಿಕ ಭದ್ರತೆಗೆ ಧಕ್ಕೆ ತರಲು ಉಗ್ರ ಸಂಘಟನೆ ಐಎಸ್ ಐಎಸ್ ನಿಂದ ಸಾಧ್ಯವಾಗಿಲ್ಲ. ಯಾರ ಬೆಂಬಲವೂ ಇಲ್ಲದೆ ಐಎಸ್ ಐಎಸ್ ನಿರ್ನಾಮಕ್ಕೆ ಅಮೆರಿಕ ಈಗಲೂ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಎಚ್ಚರಿಕೆಯನ್ನು ನೀಡಿದ್ದಾರೆ.[ಆರ್ಕ್ಟಿಕ್ ವೃತ್ತ ದಾಟಿದ ಅಮೆರಿಕದ ಅಧ್ಯಕ್ಷ ಹೇಳಿದ್ದೇನು?]

ಅಧ್ಯಕ್ಷನಾಗಿ ಇದು ನನ್ನ ಮೊದಲ ಭಾಷಣ ಎಂಬ ಭಾವನೆ ಬರುತ್ತಿದೆ. ಅಮೆರಿಕದ ಆರ್ಥಿಕ ಸಂಕಷ್ಟ ಹೋಗಲಾಡಿಸಿದ ತೃಪ್ತಿ ನನಗಿದೆ. ಉದ್ಯೋಗವಕಾಶಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯುವಕರ ಭವಿಷ್ಯದತ್ತ ಹಮ್ಮಿಕೊಂಡ ಕಾರ್ಯಕ್ರಮಗಳು ಯಶಸ್ಸು ನೀಡಿದೆ ಎಂದು ಒಬಾಮಾ ಹೇಳಿದ್ದಾರೆ. ಒಬಾಮಾ ಭಾಷಣದ ಹೈಲೈಟ್ಸ್ ನೋಡಿಕೊಂಡು ಬನ್ನಿ...

ಜಾಗತಿಕ ಸಮಸ್ಯೆಗೆ ಸ್ಪಂದನೆ

ಜಾಗತಿಕ ಸಮಸ್ಯೆಗೆ ಸ್ಪಂದನೆ

ಹವಾಮಾನ ವೈಪರೀತ್ಯ, ತಾಪಮಾನ ಏರಿಕೆಯಂಥ ಜಾಗತಿಕ ಸಮಸ್ಯೆಗಳಿಗೆ ಅಮೆರಿಕ ಸದಾ ಸ್ಪಂದಿಸುತ್ತಿದೆ. ವಿಶ್ವಶಾಂತಿ ನಿರ್ಮಾಣಕ್ಕೆ ಯಾವಾಗಲೂ ಕಟಿ ಬದ್ಧರಾಗಿರುತ್ತೇವೆ.

ಕ್ಯಾನ್ಸರ್ ನಿರ್ನಾಮ

ಕ್ಯಾನ್ಸರ್ ನಿರ್ನಾಮ

2020ರ ವೇಳೆಗೆ ಪ್ರಪಂಚದಿಂದಲೇ ಕ್ಯಾನ್ಸರ್ ಕಿತ್ತೆಸೆಯಬೇಕು. ಅದಕ್ಕಾಗಿ ಯಾವ ಬಗೆಯ ಸಂಶೋಧನೆ ಬೇಕಾದರೂ ಮಾಡಬಹುದು. ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಅಮೆರಿಕ ಸಹಕಾರ ನೀಡಲಿದೆ.

ಗನ್ ಲಭ್ಯತೆ ಆತಂಕಕಾರಿ

ಗನ್ ಲಭ್ಯತೆ ಆತಂಕಕಾರಿ

ಅಮೆರಿದಲ್ಲಿ ಗನ್ ಎಲ್ಲೆಂದರಲ್ಲಿ ಸಿಗುತ್ತಿರುವುದು ಆತಂಕಕಾರಿ. ಇದನ್ನು ಬಗೆಹರಿಸಲು ಇನ್ನು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ. ಜತೆಗೆ ಯುವ ಜನತೆಯಲ್ಲಿ ಅರಿವು ಮೂಡಿಸಬೇಕಿದೆ.

ತಾರತಮ್ಯ ನಿವಾರಣೆ

ತಾರತಮ್ಯ ನಿವಾರಣೆ

ದೇಶಗಳಲ್ಲಿರುವ ತಾರತಮ್ಯ ಹೋಗಲಾಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೇಶದ ರಕ್ಷಣೆಗೆ ನಾವು ಎಂದಿಗೂ ಬದ್ಧ. ಅಧಿಕಾರ ಇರಲಿ ಇಲ್ಲದಿರಲಿ ಒಳ್ಳೆಯ ಸಂಗತಿ ಕಡೆ ನಮ್ಮ ಹೋರಾಟ ಸದಾ ನಡೆಯುತ್ತಿರುತ್ತದೆ.

ಪಾಕಿಸ್ತಾನ ಉಗ್ರರಿಗೆ ಸ್ವರ್ಗ

ಪಾಕಿಸ್ತಾನ ಉಗ್ರರಿಗೆ ಸ್ವರ್ಗ

ಪಾಕ್ ನಂಥ ರಾಷ್ಟ್ರಗಳು ಉಗ್ರ ಚಟುವಟಿಕೆಗೆ ಸಹಾಯ ಮಾಡುತ್ತಿರುವುದು ಆತಂಕಕಾರಿ. ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ಎಲ್ಲ ರಾಷ್ಟ್ರಗಳು ಒಂದಾಗುವ ಅಗತ್ಯ ಇದೆ ಎಂದು ಒಬಾಮಾ ಪ್ರತಿಪಾದಿಸಿದ್ದಾರೆ.

English summary
US President Barack Obama vigorously defended his legacy while striking an optimistic tone for the future in his final State of the Union address on Wednesday. He pushed back against the negative tone of the current presidential race, arguing the US has the "strongest, most durable economy in the world", BBC reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X