ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಕ್ಟಿಕ್ ವೃತ್ತ ದಾಟಿದ ಅಮೆರಿಕದ ಅಧ್ಯಕ್ಷ ಹೇಳಿದ್ದೇನು?

|
Google Oneindia Kannada News

ಅಲಸ್ಕಾ, ಸೆಪ್ಟೆಂಬರ್.03: ಬರಾಕ್ ಒಬಾಮಾ ಆರ್ಕ್ಟಿಕ್ ವೃತ್ತವನ್ನು ದಾಟಿದ ಮೊದಲ ಅಮೆರಿಕದ ಅಧ್ಯಕ್ಷ ಎಂಬ ಶ್ರೇಯ ಪಡೆದುಕೊಂಡಿದ್ದಾರೆ. ಹೆಚ್ಚಾಗುತ್ತಿರುವ ಭೂ ಉಷ್ಣತೆ ಬಗ್ಗೆ ಅಲಸ್ಕಾದ ನಾಗರಿಕರೊಂದಿಗೆ ಸಂವಾದ ನಡೆಸುತ್ತಲೇ ಒಬಾಮಾ ಆರ್ಕ್ಟಿಕ್ ವೃತ್ತವನ್ನು ದಾಟಿದರು.

ಹಸಿರು ಮನೆ ಪರಿಣಾಮವನ್ನು ತಡೆಯಲು ಎಲ್ಲರೂ ಕೈ ಜೋಡಿಸಬೇಕಿದೆ. ಅಮೆರಿಕ ಈ ನಿಟ್ಟಿನಲ್ಲಿ ಮಹತ್ವದ ಕಾರ್ಯ ಕೈಗೊಂಡಿದೆ ಎಂದು ಒಬಾಮಾ ಹೇಳಿದರು. ಅಲಸ್ಕಾದಲ್ಲಿ ಮಾತನಾಡಿದ ಒಬಾಮಾ, ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಮಾತನಾಡಿದರು. ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.[ಭಾರತೀಯ ಕುವರಿಯ ಅಡುಗೆಗೆ ಒಬಾಮಾ ದಂಪತಿ ಫಿದಾ]

obama

ಅಲಸ್ಕಾದಲ್ಲಿನ ಉಷ್ಣತೆ ದಿನೇ ದಿನೇ ದ್ವಿಗುಣಗೊಳ್ಳುತ್ತಿದೆ. ಹಿಮ ಪ್ರತಿದಿನ ಕರಗುತ್ತಿದೆ. ಸಮುದ್ರದ ಮಟ್ಟ ಏರುತ್ತಿದೆ ಎಂದು ಪರಿಸರದಲ್ಲಾಗುತ್ತಿರುವ ಆತಂಕಕಾರಿ ಬದಲಾವಣೆಗಳ ಬಗ್ಗೆ ಮಾತನಾಡಿದರು.

ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಒಬಾಮಾ ಆರ್ಕ್ಟಿಕ್ ವೃತ್ತಕ್ಕೆ ತೆರಳಿದ ಅನುಭವ ಹಂಚಿಕೊಂಡಿದ್ದಾರೆ. ಅಲ್ಲದೇ ಅಲ್ಲಿಯೇ ಸೆಲ್ಫಿ ತೆಗೆದುಕೊಂಡಿದ್ದು ಪರಿಸರ ಜಾಗೃತಿಯನ್ನು ಮೂಡಿಸುವ ಕೆಲಸ ಮಾಡಿದ್ದಾರೆ.[ಅರೆರೆ ಇದೇನು... ಚಂದಮಾಮ ಕಪ್ಪು ಬಣ್ಣಕ್ಕೆ ತಿರುಗಿದನೇ?]

ಒಬಾಮಾ ಯಾವ ವಿಶೇಷ ಯೋಜನೆಗಳ ಘೊಷಣೆಗೆ ತೆರಳಿಲ್ಲ. ಪರಿಸರ ಜಾಗೃತಿಯೇ ಅವರ ಮೂರು ದಿನಗಳ ಭೇಟಿಯ ಉದ್ದೇಶ. ಭೂ ಉಷ್ಣತೆ ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡುತ್ತಲೇ ಪ್ರವಾಸ ಮುಂದುವರಿಸಿದರು. ಒಬಾಮಾ ಭೇಟಿಯ ವಿಡಿಯೋ ನೋಡಬಹುದು...



ಆರ್ಕ್ಟಿಕ್ ವೃತ್ತದ ಬಗ್ಗೆ ಒಂದಿಷ್ಟು

ಆರ್ಕ್ಟಿಕ್ ವೃತ್ತ ಉತ್ತರ ಅಮೆರಿಕ, ಯುರೋಪ್ ಮತ್ತು ಏಷ್ಯ ಖಂಡಗಳ ಮೂಲಕ ಹಾದುಹೋಗುತ್ತದೆ. ಆದ್ದರಿಂದ ಈ ಎಲ್ಲ ಖಂಡಗಳ ವಾಯುಗುಣ, ಸಸ್ಯಜೀವನ ಜನಜೀವನಕ್ರಮ ಈ ವೃತ್ತದ ಭಾಗದಲ್ಲಿ ಸಾಮಾನ್ಯವಾಗಿ ಒಂದೇ ರೀತಿ ಇದೆ. ಅತಿ ಶೀತ ಪ್ರದೇಶಗಳಾದ್ದರಿಂದ ಇಲ್ಲಿನ ಜನ ಬೆಚ್ಚಗಿರಲು ವಿಶಿಷ್ಟ ನಮೂನೆಯ ಉಡುಪುಗಳನ್ನು ಧರಿಸುತ್ತಾರೆ. ಭೂಮಿಯ ಐದು ಪ್ರಮುಖ ವೃತ್ತಗಳಲ್ಲಿ ಇದು ಒಂದು. ಭೂಮಿಯ ಉತ್ತರದ ತುದಿಯನ್ನು ಗುರುತಿಸಲು ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ.

English summary
American President Barack Obama crossed the Arctic Circle on Wednesday. 'Today I touched down in Alaska for a three-day tour. Alaska is one of the most beautiful places in the World', Obama said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X