ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಸ್ಲಿಮರು ಬರುವ ಆತಂಕ: ಬಾಂಗ್ಲಾ ಗಡಿಯಲ್ಲಿ ಮೊಬೈಲ್ ಸ್ಥಗಿತ

|
Google Oneindia Kannada News

ಢಾಕಾ, ಜನವರಿ 1: ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಭಾರತದ ಗಡಿ ಭಾಗದ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಎಲ್ಲ ದೂರಸಂಪರ್ಕ ಕಂಪೆನಿಗಳಿಗೆ ಆದೇಶಿಸಿದೆ. ಭದ್ರತಾ ಕಾರಣ ನೀಡಿ ಈ ಸೂಚನೆ ಹೊರಡಿಸಲಾಗಿದೆ.

ಭಾರತದೊಂದಿಗಿನ ಸಂಪೂರ್ಣ ಗಡಿ ಭಾಗಗಳಲ್ಲಿ ಸುಮಾರು ಒಂದು ಕಿ.ಮೀ. ವ್ಯಾಪ್ತಿಯೊಳಗೆ ಮುಂದಿನ ಆದೇಶದವರೆಗೂ ಮೊಬೈಲ್ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ವಿದ್ಯಮಾನಗಳ ಹಿನ್ನೆಲೆಯಲ್ಲಿ ದೇಶದ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೋಮವಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಅಕ್ರಮ ವಲಸಿಗರ ಪಟ್ಟಿಕೊಡಿ, ವಾಪಸ್ ಕರೆಸಿಕೊಳ್ಳುತ್ತೇವೆ: ಬಾಂಗ್ಲಾದೇಶಅಕ್ರಮ ವಲಸಿಗರ ಪಟ್ಟಿಕೊಡಿ, ವಾಪಸ್ ಕರೆಸಿಕೊಳ್ಳುತ್ತೇವೆ: ಬಾಂಗ್ಲಾದೇಶ

ಬಾಂಗ್ಲಾದೇಶದ ದೂರಸಂಪರ್ಕ ಸಂವಹನ ಸಂಸ್ಥೆಗಳಾದ ಗ್ರಾಮೀಣ್‌ಫೋನ್, ಟೆಲಿಟಾಕ್, ರೊಬಿ ಮತ್ತು ಬಾಂಗ್ಲಾಲಿಂಕ್ ಸಂಸ್ಥೆಗಳಿಗೆ ಈ ಸೂಚನೆ ನೀಡಲಾಗಿದೆ.

Bangladesh Suspends Mobile Networks Along India Borders

'ಸರ್ಕಾರದ ನಿರ್ದೇಶನದಂತೆ ಮೊಬೈಲ್ ಸೇವೆಗಳ ಸ್ಥಗಿತಕ್ಕೆ ಆದೇಶಿಸಿದ್ದೇವೆ' ಎಂದು ಬಾಂಗ್ಲಾದೇಶ ದೂರಸಂಪರ್ಕ ಸೇವಾ ನಿಯಂತ್ರಣ ಆಯೋಗದ (ಬಿಟಿಆರ್‌ಸಿ) ಹಿರಿಯ ಸಹಾಯಕ ನಿರ್ದೇಶಕ ಎಂಡಿ ಝಾಕಿರ್ ಹೊಸೈನ್ ಖಾನ್ ತಿಳಿಸಿದ್ದಾರೆ.

ರಾಜಧಾನಿಯಲ್ಲಿದ್ದಾರಾ ಉಗ್ರ ಬೆಂಬಲಿಗರು?ರಾಜಧಾನಿಯಲ್ಲಿದ್ದಾರಾ ಉಗ್ರ ಬೆಂಬಲಿಗರು?

ಭಾರತದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದೆ. ಇದರಿಂದ ಭಾರತೀಯ ಮುಸ್ಲಿಮರು ಬಾಂಗ್ಲಾದೇಶದೊಳಗೆ ನುಸುಳುವ ಸಾಧ್ಯತೆ ಇದೆ. ಈ ಕಾರಣದಿಂದ ಮೊಬೈಲ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯರಾಜ್ಯದಲ್ಲಿ ಈಗಾಗಲೇ ಶುರುವಾಗಿದೆ 'ಅಕ್ರಮ ವಲಸಿಗರ' ಪತ್ತೆ ಕಾರ್ಯ

ಈ ನಿರ್ಧಾರದಿಂದಾಗಿ ಭಾರತ ಮತ್ತು ಮಯನ್ಮಾರ್ ಗಡಿಯಲ್ಲಿನ 32 ಜಿಲ್ಲೆಗಳ 10 ಮಿಲಿಯನ್ ಮೊಬೈಲ್ ಫೋನ್ ಬಳಕೆದಾರರಿಗೆ ತೊಂದರೆಯಾಗಲಿದೆ. ಈ ಗಡಿ ವ್ಯಾಪ್ತಿಯಲ್ಲಿನ ಸುಮಾರು 2,000 ಮೊಬೈಲ್ ಟವರ್‌ಗಳು ಸ್ತಬ್ಧವಾಗಿವೆ.

English summary
Bangladesh government has suspended mobile networks along borders with India citing security reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X