ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾದೇಶದಲ್ಲಿ 'ಅಂಫಾನ್' ಚಂಡಮಾರುತಕ್ಕೆ ಮೊದಲ ಬಲಿ

|
Google Oneindia Kannada News

ಕುಟ್ನಾ, ಮೇ 20: ಅಂಫಾನ್ ಚಂಡಮಾರುತ ಬಾಂಗ್ಲಾದೇಶ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದು, ಬಾಂಗ್ಲಾದಲ್ಲಿ ಮೊದಲ ಸಾವು ಸಂಭವಿಸಿದೆ.

ಜನರನ್ನು ಸ್ಥಳಾಂತರಿಸುತ್ತಿದ್ದ ಸಂದರ್ಭದಲ್ಲಿ ಹಡಗು ಪಲ್ಟಿಯಾಗಿ ರೆಡ್ ಕ್ರಸೆಂಡ್ ಕಾರ್ಯಕರ್ತ ಓರ್ವ ಮೃತಪಟ್ಟಿದ್ದಾರೆ ಎಂದು ಸೈಕ್ಲೋನ್ ಪ್ರಪರ್ಡ್‌ನೆಸ್ ಪ್ರೋಗ್ರಾಮ್ ನಿರ್ದೇಶಕ ನುರುಲ್ ಇಸ್ಲಾಂ ಖಾನ್ ತಿಳಿಸಿದ್ದಾರೆ.

20 ವರ್ಷಗಳಲ್ಲೇ ಕಂಡಿರದ ಚಂಡಮಾರುತ ಇದಾಗಿದೆ.ಚಂಡಮಾರುತದ ಕಾರಣ ಬುಧವಾರ ಪಶ್ಚಿಮ ಬಂಗಾಳ ಮತ್ತು ಓಡಿಷಾದ ಕಡಲು ತೀರಗಳಲ್ಲಿ ಭಾರಿ ಬಿರುಗಾಳಿಸಹಿತ ಮಳೆ ಬೀಳಲಿದೆ.

ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಅತಿದೊಡ್ಡ ಸೈಕ್ಲೋನ್ 'ಅಂಫಾನ್' ಕಳೆದ 20 ವರ್ಷಗಳಲ್ಲಿ ಕಾಣಿಸಿಕೊಂಡ ಅತಿದೊಡ್ಡ ಸೈಕ್ಲೋನ್ 'ಅಂಫಾನ್'

ನಾರ್ತ್ ಕೊಸ್ತಲ್ ಒಡಿಶಾದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಪೂರ್ವ ಹಾಗೂ ಪಶ್ಚಿಮ ಮೆದಿನಾಪುರ್, ದಕ್ಷಿಣ ಹಾಗೂ ಉತ್ತರ ಪರಗನಾ, ಹಾವ್ಡಾ, ಹೂಗ್ಲಿ, ಕೊಲ್ಕತ್ತಾ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ. ಭಾರಿ ಬಿರುಗಾಳಿಯ ಕಾರಣ ವಿದ್ಯುತ್ ಕಂಬಗಳು, ಮನೆಗಳು, ಹೋರ್ಡಿಂಗ್‌ಗಳು ಹಾರಿಹೋಗುತ್ತಿವೆ. ರೈಲು ಹಾಗೂ ರಸ್ತೆ ಸಾರಿಗೆ ಅಸ್ತವ್ಯಸ್ತಗೊಂಡಿದೆ.

 1999ರ ಬಳಿಕ ಅತಿ ದೊಡ್ಡ ಸೂಪರ್ ಸೈಕ್ಲೋನ್

1999ರ ಬಳಿಕ ಅತಿ ದೊಡ್ಡ ಸೂಪರ್ ಸೈಕ್ಲೋನ್

1999ರ ಒಡಿಶಾ ಚಂಡಮಾರುತದ ಬಳಿಕ ಎರಡನೇ ಗಂಭೀರ ಮತ್ತು ಅತಿ ದೊಡ್ಡ ಸೂಪರ್ ಸೈಕ್ಲೋನ್ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರ ಮೇಲೆ ನಿಗಾವಹಿಸಲು ನಾವು ಎಲ್ಲಾ ರೀತಿಯ ಸಾಧನಗಳು ಹಾಗೂ ತಂತ್ರಜ್ಞಾನಗಳನ್ನು ಬಳಸುತ್ತಿದ್ದೇವೆ.

 ಗಾಳಿಯ ವೇಗ ಎಷ್ಟಿದೆ?

ಗಾಳಿಯ ವೇಗ ಎಷ್ಟಿದೆ?

ಅಂಫಾನ್ ಚಂಡಮಾರುತದ ಪ್ರಸ್ತುತ ಗಾಳಿಯ ವೇಗ ಗಂಟೆಗೆ 200-240 ಕಿ.ಮೀ ಗಳಷ್ಟಿದ್ದು, ಇದು ವಾಯುವ್ಯ ದಿಕ್ಕಿನಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ.ಆದರೆ ಈ ವೇಗ ಇನ್ನೂ ಹೆಚ್ಚಾಗಲಿದೆ ಎಂಬುದು ನಮ್ಮ ಅಂದಾಜು ಎಂದು ಇಲಾಖೆ ಹೇಳಿದೆ.

ಅಂಫಾನ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ, ಭೂಕುಸಿತ ಆತಂಕಅಂಫಾನ್ ಚಂಡಮಾರುತ: ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ, ಭೂಕುಸಿತ ಆತಂಕ

 ಕೆಲವೇ ನಿಮಿಷಗಳಲ್ಲಿ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿ ಪ್ರವೇಶ

ಕೆಲವೇ ನಿಮಿಷಗಳಲ್ಲಿ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿ ಪ್ರವೇಶ

ಈ ಸೂಪರ್ ಸೈಕ್ಲೋನ್ ಪಶ್ಚಿಮ ಬಂಗಾಳ-ಬಾಂಗ್ಲಾದೇಶದ ಕರಾವಳಿ ಪ್ರದೇಶವನ್ನು ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ದ್ವೀಪಗಳ ನಡುವೆ ಮೇ 20 ರ ಮಧ್ಯಾಹ್ನದಿಂದ ಸಂಜೆಯ ನಡುವೆ ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಈ ವೇಳೆ ಚಂಡಮಾರುತದ ವಿಂಡ್ ಸ್ಪೀಡ್ 155-165 ಕಿ.ಮೀ ಗಳಷ್ಟಿರಲಿದ್ದು, 185 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಇಲಾಖೆ ಹೇಳಿದೆ. ಸದ್ಯ ಅಂಫಾನ್ ಚಂಡಮಾರುತ ಭಾರಿ ಭೀಕರ ಮತ್ತು ಅಪಾಯಕಾರಿ ರೂಪವನ್ನು ತಳೆದಿದ್ದು, ಬುಧವಾರ ಭೂಕುಸಿತವನ್ನು ತರಲಿದೆ ಎಂದು NDRF ಎಚ್ಚರಿಕೆ ನೀಡಿದೆ. ಇದು ಅತ್ಯಂತ ಗಂಭೀರವಾದ ಚಂಡಮಾರುತವಾಗಿರುವ ಕಾರಣ ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದೆ.

 ಸೈಕ್ಲೋನ್ ಭೋಲಾದಿಂದ 5 ಲಕ್ಷ ಮಂದಿ ಸಾವು

ಸೈಕ್ಲೋನ್ ಭೋಲಾದಿಂದ 5 ಲಕ್ಷ ಮಂದಿ ಸಾವು

1970ರಲ್ಲಿ ಸೈಕ್ಲೋನ್ ಭೋಲಾ 5 ಲಕ್ಷ ಮಂದಿಯ ಹತ್ಯೆಗೆ ಕಾರಣವಾಗಿತ್ತು.
2007ರಲ್ಲಿ ಆಗಮಿಸಿದ್ದ ಸಿಡರ್ ಚಂಡಮಾರುತಕ್ಕೆ 3500 ಮಂದಿ ಬಲಿಯಾಗಿದ್ದರು.

English summary
A Bangladesh Red Crescent volunteer drowned Wednesday when a boat capsized while evacuating villagers in the path of Cyclone Amphan, the organisation said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X