ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಲಸಿಕೆ ಬಳಸಿಕೊಂಡು ಪ್ರಯೋಗಕ್ಕೆ ಬಾಂಗ್ಲಾದೇಶ ಸಿದ್ಧ!

|
Google Oneindia Kannada News

ನವದೆಹಲಿ, ಆಗಸ್ಟ್.20: ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಭಾರತದಲ್ಲಿ ಸಿದ್ಧಪಡಿಸಿದ ಕೊವಿಡ್-19 ಲಸಿಕೆಯನ್ನು ಬಳಸಿಕೊಂಡು ಪ್ರಯೋಗವನ್ನು ನಡೆಸಲು ಬಾಂಗ್ಲಾದೇಶವು ಸಿದ್ಧವಿರುವುದಾಗಿ ಬುಧವಾರ ತಿಳಿಸಿದೆ.

Recommended Video

ಮತ್ತೆ ಸ್ವಚ್ಛ ನಗರ ಗೌರವ ಮುಡಿಗೆರಿಸಿಕೊಂಡ ಮೈಸೂರು! | Oneindia Kannada

ಇದಕ್ಕೂ ಮೊದಲು ಪ್ರಾಯೋಗಿಕ ಲಸಿಕೆಗಾಗಿ ಸಲ್ಲಿಸಿದ ಮನವಿಯನ್ನು ಚೀನಾದ ಸಂಸ್ಥೆಯು ಮುಂದೂಡುತ್ತಲೇ ಇತ್ತು ಎಂದು ತಿಳಿದು ಬಂದಿದೆ. ನವದೆಹಲಿಯ ಪೂರ್ವಭಾಗದಲ್ಲಿರುವ ಬಾಂಗ್ಲಾದೇಶವನ್ನು ಕಾರ್ಯತಾಂತ್ರಿಕ ಮಿತ್ರ ಎಂದು ಪರಿಗಣಿಸುತ್ತದೆ.

ಕೊರೊನಾಗೆ ಬೆದರುವ ಬದಲು ಈ 'ಲಸಿಕೆ' ಹಾಕಿಸಿಕೊಳ್ಳಿ!ಕೊರೊನಾಗೆ ಬೆದರುವ ಬದಲು ಈ 'ಲಸಿಕೆ' ಹಾಕಿಸಿಕೊಳ್ಳಿ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶಾಂಗ ಕಾರ್ಯದರ್ಶಿಯನ್ನು ಮಂಗಳವಾರ ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಕಳುಹಿಸಿ ಕೊಡಲಾಗಿತ್ತು. ಎರಡು ದಿನಗಳ ಪ್ರವಾಸದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಜೊತೆಗೆ ಚರ್ಚೆ ನಡೆಸಲಾಗಿತ್ತು.

Bangladesh Ready To Trial Indian Covid-19 Vaccines

ಕೊವಿಡ್-19 ಔಷಧಿ ಅಭಿವೃದ್ಧಿಗೆ ಬಾಂಗ್ಲಾ ಸಹಯೋಗ:

ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯುವುದರಲ್ಲಿ ಮತ್ತು ಸಂಬಂಧಿತ ಪ್ರಯೋಗಗಳಲ್ಲಿ ಭಾರತದ ಜೊತೆಗೆ ಬಾಂಗ್ಲಾದೇಶ ಸಹಯೋಗವನ್ನು ಹೊಂದಲು ಬಯಸುವುದಾಗಿ ಹೇಳಿದೆ. ಲಸಿಕೆ ಅಭಿವೃದ್ಧಿ ಪಡಿಸುವುದನ್ನೇ ಎದುರು ನೋಡುತ್ತಿರುವುದಾಗಿ ವಿದೇಶಾಂಗ ಸಚಿವಾಲಯವು ತಿಳಿಸಿದೆ. ಭಾರತೀಯ ಆರ್ಥಿಕತೆ ಮತ್ತು ಲಸಿಕೆ ಅಭಿವೃದ್ಧಿ ಕುರಿತು ಬಾಂಗ್ಲಾದೇಶದ ಜೊತೆಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಚರ್ಚಿಸಿದ್ದಾರೆ.

ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಹೇಳಿದ್ದೇನು:

"ನಮ್ಮ ಮನವಿಗೆ ಭಾರತದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗಾಗಿ ಲಸಿಕೆಯನ್ನು ಭಾರತೀಯರು ಕೇವಲ ತಮಗೋಸ್ಕರವಷ್ಟೇ ಅಭಿವೃದ್ಧಿಪಡಿಸುತ್ತಿಲ್ಲ. ಅನ್ಯರಿಗೂ ಇದರಿಂದ ಪ್ರಯೋಜನವಾಗಲಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಮಸೂದ್ ಬಿನ್ ಮೊಮೆನ್ ತಿಳಿಸಿದ್ದಾರೆ. ಇನ್ನು, ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಬಾಂಗ್ಲಾದೇಶದ ಪ್ರಜೆಗಳಿಗೆ ಈ ಲಸಿಕೆಯು ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಭಾರತವು ವಿಶ್ವದ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆಯ ತವರೂರು ಆಗಿದೆ. ಸೆರಮ್ ಇನ್ಸ್ ಟ್ಯೂಟ್ ಆಫ್ ಇಂಡಿಯಾ ಸದ್ಯದ ಮಟ್ಟಿಗೆ ಮೂರು ರೀತಿಯ ಲಸಿಕೆಗಳ ಮೇಲೆ ಪ್ರಯೋಗವನ್ನು ನಡೆಸುತ್ತಿದೆ. ಈ ಪೈಕಿ ಒಂದು ಆಸ್ಟ್ರಾ ಜೆನಿಕಾ ಪ್ರಯೋಗಕ್ಕೆ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಿಂದ ಅನುಮತಿ ನೀಡಲಾಗಿದೆ.

English summary
ngladesh Ready To Trial Indian Covid-19 Vaccines. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X