ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಂಗ್ಲಾದಲ್ಲಿ ಕಟ್ಟಡಕ್ಕೆ ಬೆಂಕಿ: 70 ಮಂದಿ ದುರ್ಮರಣ

|
Google Oneindia Kannada News

ಢಾಕಾ, ಫೆಬ್ರವರಿ 21: ಬಾಂಗ್ಲಾದೇಶದ ಢಾಕಾದಲ್ಲಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ ಪರಿಣಾಮ ಸುಮಾರು 70 ಜನ ಮೃತರದಾದ ದಾರುಣ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಈ ಕಟ್ಟದದ ಒಂದು ಭಾಗವನ್ನು ರಾಸಾಯನಿಕಗಳನ್ನು ಶೇಖರಿಸುವ ಗೋದಾಮಿನಂತೆ ಬಳಸಲಾಗುತ್ತಿತ್ತು. ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ರಾಸಾಯನಿಕವಿದ್ದ ಗೋದಾಮಿಗೆ ವ್ಯಾಪಿಸಿದ್ದರಿಂದ ಈ ಭಾರೀ ಅನಾಹುತ ಸಂಭವಿಸಿದೆ ಎನ್ನಲಾಗಿದೆ.

ದೆಲಿಯ ಅರ್ಪಿತ್ ಪ್ಯಾಲೇಸ್‌ನಲ್ಲಿ ಬೆಂಕಿ ಅವಘಡ: 15 ಮಂದಿ ಸಜೀವ ದಹನದೆಲಿಯ ಅರ್ಪಿತ್ ಪ್ಯಾಲೇಸ್‌ನಲ್ಲಿ ಬೆಂಕಿ ಅವಘಡ: 15 ಮಂದಿ ಸಜೀವ ದಹನ

ಕಟ್ಟಡದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಮೃತರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಬಹುದು ಎನ್ನಲಾಗಿದೆ.

Bangladesh: Fire accident in Dhaka: more than 70 people died

ರಸ್ತೆ ಬದಿಯಲ್ಲಿಯೇ ಕಟ್ಟಡವಿದ್ದಿದ್ದರಿಂಡ ಕಟ್ಟಡದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಸಮಯದಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಇತ್ತು. ಆದ್ದರಿಂದ ಹಲವರಿಗೆ ಇಲ್ಲಿಂದ ಪರಾರಿಯಾಗಲು ಕಷ್ಟವಾಯಿತು. ಬೆಂಕಿಯೊಂದಿಗೆ ರಾಸಾಯನಿಕಗಳೂ ಸುಟ್ಟಿದ್ದರಿಂದ ಭಾರೀ ಅನಾಹುತಕ್ಕೆ ಕಾರಣವಾಯಿತು ಎಂದು ವರದಿಗಳು ತಿಳಿಸಿವೆ.

ಹೈದರಾಬಾದ್ ನಲ್ಲಿ ಭಾರೀ ಅಗ್ನಿ ಅವಘಡ; ಏಳು ಮಂದಿ ಅಸ್ಪತ್ರೆಗೆಹೈದರಾಬಾದ್ ನಲ್ಲಿ ಭಾರೀ ಅಗ್ನಿ ಅವಘಡ; ಏಳು ಮಂದಿ ಅಸ್ಪತ್ರೆಗೆ

ಇತ್ತೀಚೆಗಷ್ಟೇ ಭಾರತದ ರಾಜಧಾನಿ ದೆಹಲಿಯ ಕರೋಲ್‌ ಬಾಘ್ ನಲ್ಲಿರುವ ಅರ್ಪಿತ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 15 ಮಂದಿ ಸಜೀವ ದಹನವಾಗಿದ್ದರು.

English summary
Bangladesh: Around 70 people died after fire accident in an apartment building which was also used as chemical warehouse in Dhaka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X