ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಗ್ಗೆ ಭಯಪಟ್ಟ ಬರಾಕ್ ಒಬಾಮಾ!

|
Google Oneindia Kannada News

barack obama
ವಾಷಿಂಗ್ಟನ್‌, ಅ, 27 : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಬೆಂಗಳೂರನ್ನು ಮತ್ತೊಮ್ಮೆ ಹಾಡಿ ಹೊಗಳಿದ್ದಾರೆ. ಗಣಿತ ಹಾಗೂ ತಂತ್ರಜ್ಞಾನ ವಿಷಯಗಳ ಕಲಿಕೆಯಲ್ಲಿ ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಅಮೆರಿಕನ್ನ­ರನ್ನು ಮೀರಿಸುವ ರೀತಿ ಪರಿಶ್ರಮ ಪಡುತ್ತಿದ್ದಾರೆ ಎಂದು ತಮ್ಮ ದೇಶದ ಯುವ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಬ್ರೂಕ್‌ಲಿನ್‌ನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇ­ಶಿಸಿ ಮಾತನಾಡಿದ ಬರಾಕ್ ಒಬಾಮಾ, ನಮ್ಮ ಹಿಂದಿನ ತಲೆಮಾರು ಆರ್ಥಿಕ­ವಾಗಿ ಬಲಿಷ್ಠವಾಗಿತ್ತು. ಆಗ ನಮಗೆ ಎದು­ರಾಳಿಗಳು ಇರಲಿಲ್ಲ. ಸದ್ಯ, ಬೀಜಿಂಗ್‌, ಬೆಂಗಳೂರು, ಮಾಸ್ಕೊ ಹೀಗೆ ಎಲ್ಲ ಕಡೆ ಪೈಪೋಟಿ ಎದುರಾ­ಗು­ತ್ತಿದೆ ಎಂದು ಹೇಳಿದ್ದಾರೆ.

ಚೀನಾ, ಭಾರತದಂತಹ ದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಹೆಚ್ಚಿನ ಮನ್ನಣೆ ದೊರೆಯುತ್ತಿದೆ. ಅವುಗಳ ಬಲವಾದ ಪೈಪೋಟಿಯನ್ನು ನಾವು ಎದುರಿಸಬೇ­ಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಗಣಿತ ಹಾಗೂ ತಂತ್ರಜ್ಞಾನ ವಿಷಯಗಳಲ್ಲಿ ಅವರು ನಮಗೆ ಪೈಪೋಟಿ ನೀಡಲು ಪರಿಶ್ರಮ ಪಡುತ್ತಿದ್ದಾರೆ ಎಂದು ಒಬಾಮಾ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.

ವಿಶ್ವದ ಇತರ ರಾಷ್ಟ್ರಗಳ ಇಂತಹ ಬೆಳವಣಿಗೆಯಿಂದಾಗಿ ಯಾರಿಗೆ ಬೇಕಾ­ದರೂ ಉದ್ಯೋಗಾವಕಾಶ ಸಿಗಬ­ಹುದು. ಆದ್ದರಿಂದ ಪರಿಶ್ರಮ ಪಟ್ಟು ವಿದ್ಯಾರ್ಥಿಗಳು ಓದಬೇಕು ಎಂದು ಒಬಾಮಾ ಸಲಹೆ ನೀಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ, ಚೀನಾ ಮುಂತಾದ ದೇಶಗಳಲ್ಲಿ ಹೊಸ-ಹೊಸ ಸಂಶೋಧನೆಗಳು ಆಗುತ್ತಿವೆ. ಮುಂದೆ ಅವರು ನಮ್ಮ ವಿರುದ್ಧ ಪೈಪೋಟಿ ನಡೆಸುತ್ತಾರೆ ಎಂದು ಒಬಾಮಾ ವಿಶ್ಲೇಷಿಸಿದ್ದಾರೆ. (ಬೆಂಗಳೂರಿನ ಮಕ್ಕಳನ್ನು ನೋಡಿ ಕಲ್ತುಕೊಳ್ಳಿ: ಒಬಾಮಾ)

ಇಂದಿನ ಪ್ರಪಂಚದಲ್ಲಿ ಕಂಪನಿಗಳು ಕ್ರಿಯಾಶೀಲ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿವೆ. ಅವರು ವಿಶ್ವದ ಯಾವ ರಾಷ್ಟ್ರಗಳಲ್ಲಿದ್ದರೂ, ಅವರನ್ನು ಹೆಚ್ಚಿನ ಸಂಬಳ ನೀಡಿ ಕರೆತರುತ್ತಾರೆ. ಆದ್ದರಿಂದ ಭಾರತ ಮತ್ತು ಚೀನಾದ ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ನಿಮಗೆ ಪೈಪೋಟಿ ನೀಡಲಿದ್ದಾರೆ ಎಂದು ಒಬಾಮಾ ಹೇಳಿದ್ದಾರೆ. (ಪಿಟಿಐ)

English summary
Billions of people from countries like India and China are striving hard to “out-educate” Americans in mathematics and technology said, US President Barack Obama. in his remarks to students at the Pathways in Technology Early College High School in Brooklyn Obama said, In previous generations, America’s standing economically was so much higher than everybody else’s that we did not have a lot of competition. Now you have got billions of people from Beijing to Bangalore to Moscow, all of whom are competing with you directly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X