ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಲೂಚಿಸ್ತಾನದ ಕ್ವೆಟ್ಟಾದ ಮಸೀದಿಯಲ್ಲಿ ಬಾಂಬ್ ಸ್ಫೋಟ, 5ಸಾವು

|
Google Oneindia Kannada News

ಕ್ವೆಟ್ಟಾ(ಪಾಕಿಸ್ತಾನ), ಆಗಸ್ಟ್ 16: ಪಾಕಿಸ್ತಾನದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಲು ಬಯಸಿರುವ ಬಲೂಚಿಸ್ತಾನದ ಪ್ರಾಂತ್ಯದಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಕ್ವೆಟ್ಟಾದ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 5 ಮಂದಿ ಸಾವನ್ನಪ್ಪಿದ್ದು ಹಲವಾರು ಮಂದಿಗೆ ಗಾಯಗೊಂಡಿದ್ದಾರೆ.

ಬಲೂಚಿಸ್ತಾನದ ಕ್ವೆಟ್ಟಾದ ಕುಚ್ಲಕ್ ಪ್ರದೇಶದಲ್ಲಿರುವ ಮಸೀದಿಯೊಳಗೆ ಬಾಂಬ್ ಇಡಲಾಗಿತ್ತು ಎಂದು ತಿಳಿದು ಬಂದಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಶುಕ್ರವಾರ ಪ್ರಾರ್ಥನೆ ಮುಗಿದ ಬಳಿಕ ಬಾಂಬ್ ಸ್ಫೋಟಿಸಿದೆ, ಸ್ಥಳದಲ್ಲೇ ಐವರು ಮೃತಪಟ್ಟರೆ, 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ.

Balochistan: 5 killed, 15 injured after blast at Quetta mosque

"ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ಬಾಂಬ್ ತಯಾರಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ, ಘಟನಾ ಸ್ಥಳದಲ್ಲಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ತಜ್ಞರನ್ನು ಕರೆಸಿ ತನಿಖೆ ಕೈಗೊಳ್ಳಲಾಗಿದೆ" ಕ್ವೆಟ್ಟಾ ಪೊಲೀಸರು ಹೇಳಿದ್ದಾರೆ.


ಇಲ್ಲಿ ತನಕ ಯಾವುದೇ ಸಂಘಟನೆಯೂ ಈ ವಿಧ್ವಂಸಕ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಹಜಾರ್ ಗೌಂಜ್ ಮಾರುಕಟ್ಟೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 16 ಮಂದಿ ಮೃತರಾಗಿದ್ದರು.

ಪಾಕಿಸ್ತಾನದ ಭಾಗವಾಗಿರುವ ಬಲೂಚಿಸ್ತಾನ, 1948ರಿಂದಲೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿದೆ, 1947ರ ಆಗಸ್ಟ್ 11ರಂದೇ ಬ್ರಿಟಿಷರಿಂದ ನಮಗೆ ಸ್ವಾತ್ರಂತ್ರ್ಯ ಸಿಕ್ಕಿದೆ ಎಂದು ಬಲೂಚಿಗಳು ಘೋಷಿಸಿಕೊಂಡಿದ್ದಾರೆ.

English summary
Five people have been killed in a blast at a Quetta mosque in Balochistan province of Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X