ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾದವರ ಪತ್ತೆಗೆ AI ಬಳಕೆ, ಭಾರತಕ್ಕೆ ಚೀನಾ ಮಾದರಿ

|
Google Oneindia Kannada News

ಬೆಂಗಳೂರು, ಜನವರಿ 09: ನಾಲ್ಕು ವರ್ಷದ ಹಿಂದೆಯೇ ಸತ್ತು ಹೋದ ಎಂದುಕೊಂಡಿದ್ದ ವ್ಯಕ್ತಿ ಹಠಾತ್ತನೆ ಬೆಂಗಳೂರಲ್ಲಿ ಪತ್ತೆ ಆಗಿರುವ ಸುದ್ದಿ ಓದಿರಬಹುದು. ಭಾರತದಲ್ಲಿ ಕಾಣೆಯಾದವರ ಬಗ್ಗೆ ಪೊಲೀಸ್ ಪ್ರಕಟಣೆ, ಸಾಮಾಜಿಕ ಜಾಲ ತಾಣಗಳಲ್ಲಿಮಾಹಿತಿ ಹಂಚಿಕೊಂಡರೂ ಹುಡುಕಾಟ ಕಷ್ಟಕರವಾಗಿದೆ.

ಆದರೆ, ಚೀನಾದಲ್ಲಿ ಬೈದು(baidu) ಕಂಪನಿ ಈ ರೀತಿ ನಾಪತ್ತೆ ಪ್ರಕರಣಗಳನ್ನು ಪತ್ತೆ ಹಚ್ಚಲು ನೆರವಾಗುತ್ತಿದೆ. ಪ್ರಮುಖ ಟೆಕ್ ಕಂಪನಿ ಬೈದು ಇಲ್ಲಿ ತನಕ ಸುಮಾರು 9,7000 ಮಂದಿಯನ್ನು ಪತ್ತೆ ಹಚ್ಚಿದೆ, ಜೊತೆಗೆ ಅಂಧರಿಗೆ ದಾರಿದೀಪವಾಗಿದೆ. ಬೈದು ಕಂಪನಿ ಈ ಪತ್ತೆ ಕಾರ್ಯದಲ್ಲಿ ಪ್ರಮುಖವಾಗಿ ಬಳಸಿರುವುದು ಕೃತಕ ಬುದ್ಧಿಮತ್ತೆ(Artificial Intelligence) ತಂತ್ರಜ್ಞಾನ.

ಸತ್ತ ಎಂದುಕೊಂಡವ 4 ವರ್ಷದ ಬಳಿಕ ಬೆಂಗಳೂರಲ್ಲಿ ಪತ್ತೆ, ಚಿತ್ರ ಕೊಟ್ಟಿತು ಸುಳಿವುಸತ್ತ ಎಂದುಕೊಂಡವ 4 ವರ್ಷದ ಬಳಿಕ ಬೆಂಗಳೂರಲ್ಲಿ ಪತ್ತೆ, ಚಿತ್ರ ಕೊಟ್ಟಿತು ಸುಳಿವು

ಒಂದು ಕಾಲದಲ್ಲಿ ಕೇವಲ ಹಾಲಿವುಡ್‌ ಸಿನೆಮಾ ಕಲ್ಪನೆಯ ಸರಕಾಗಿದ್ದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಅಥವಾ ಎಐ ವಾಸ್ತವದ ಹೊಸ್ತಿಲಲ್ಲಿ ನಿಂತಿದೆ. ಮುಂದಿನ ದಿನಗಳಲ್ಲಿ ನಮ್ಮ ಬದುಕನ್ನು ಹಿಂತಿರುಗಿಸಲಾಗದ ರೀತಿಯಲ್ಲಿ ಮಾರ್ಪಡಿಸಿಬಿಡುವ ಕಡೆಗೆ ಹೆಜ್ಜೆ ಹಾಕುತ್ತಿದೆ.

Baidu trace missing people in China using AI, India can replicate it

ಇದೇ AI ತಂತ್ರಜ್ಞಾನವನ್ನು ಭಾರತದಲ್ಲೂ ಸೂಕ್ತವಾಗಿ ಬಳಸಬಹುದು ಎಂಡು ಐಐಟಿ ಮದ್ರಾಸ್ ಟೆಕ್ ಫೆಸ್ಟ್ ಶಾಸ್ತ್ರ 2020ರಲ್ಲಿ ಪ್ರತಿಪಾದಿಸಲಾಗಿದೆ. ಬೈದು ಕಂಪನಿಯ ಸಿಇಒ, ಸ್ಥಾಪಕ ಚೇರ್ಮನ್ ರಾಬಿನ್ ಲಿ ಅವರು ಮಾತನಾಡಿ, "ಎಐ ತಂತ್ರಜ್ಞಾನ, ಫೇಷಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದರ ಬಗ್ಗೆ ತಿಳಿಸಿದರು. ವ್ಯಕ್ತಿಯೊಬ್ಬ ನಾಪತ್ತೆಯಾಗಿ 20 ವರ್ಷ ಕಳೆದಿದ್ದರೂ ಪತ್ತೆ ಹಚ್ಚಿದ ಉದಾಹರಣೆಗಳಿವೆ. ಒಬ್ಬ ಬಾಲಕ 4ನೇ ವಯಸ್ಸಿನಲ್ಲಿ ಕಾಣೆಯಾಗಿದ್ದವನು 25ನೇ ವಯಸ್ಸಿನಲ್ಲಿ ಪತ್ತೆಯಾದ ಪ್ರಕರಣದ ಬಗ್ಗೆ ಹೇಳಿದರು.

ಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣ

2016ರಲ್ಲಿ ಆರಂಭಿಸಿದ ಎಐಕ್ಸುನ್ರೆನ್ ತಂತ್ರಜ್ಞಾನವು 9,700 ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರ ಕುಟುಂಬದೊಡನೆ ಸೇರಿಸಿದೆ. ಬೈದು ವೆಬ್ ತಾಣ ಸೇರಿದಂತೆ ವಿವಿಧ ಮೂಲಗಳಿಂದ ನಾಪತ್ತೆಯಾದ ವ್ಯಕ್ತಿಯ ಭಾವಚಿತ್ರವನ್ನು ಪಡೆಯಲಾಗುತ್ತದೆ. ಇದನ್ನು ರಿಯಲ್ ಟೈಮ್ ನಲ್ಲಿ ಸಚಿವಾಲಯದಲ್ಲಿ ಲಭ್ಯವಿರುವ ಡೇಟಾಬೇಸ್ ಜೊತೆ ಹೋಲಿಸಿ ನೋಡಲಾಗುತ್ತದೆ. ಈ ವಿಧಾನದ ನಿಖರತೆ ಶೇ 99.7ರಷ್ಟಿದೆ. ಹಳೆ ಫೋಟೊ ಇದ್ದರೂ, ಕಳೆದು ಹೋಗಿ 20 ವರ್ಷವಾಗಿದ್ದರೂ ಪತ್ತೆ ಹಚ್ಚಬಹುದಾಗಿದೆ. 1999ರಲ್ಲಿ ಗುಯಿಜೊಯು ಪ್ರಾಂತ್ಯದಲ್ಲಿ ನಾಪತ್ತೆಯಾಗಿದ್ದ ಬಾಲಕನನ್ನು 2019ರಲ್ಲಿ ಹಾಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಪತ್ತೆ ಹಚ್ಚಲಾಯಿತು.

ಫೇಸ್ ಬುಕ್ ರೋಬೋಗಳ ಗುಪ್ತ ಸಂಭಾಷಣೆ: ಮನುಷ್ಯನ ನಾಶದ ಮುನ್ನೆಚ್ಚರಿಕೆ?ಫೇಸ್ ಬುಕ್ ರೋಬೋಗಳ ಗುಪ್ತ ಸಂಭಾಷಣೆ: ಮನುಷ್ಯನ ನಾಶದ ಮುನ್ನೆಚ್ಚರಿಕೆ?

ಎಐ ತಂತ್ರಜ್ಞಾನ ಮೂಲಕ ಅಂಧರಿಗೆ ದೈನಂದಿನ ಚಟುವಟಿಕೆ, ವ್ಯಾಸಂಗ ಸೇರಿದಂತೆ ಹಲವು ಕಾರ್ಯಗಳಲ್ಲಿ ಬೈದು ಸಂಸ್ಥೆ ನೆರವಾಗುತ್ತಿದೆ. ಇಂಥದ್ದೊಂದು ತಂತ್ರಜ್ಞಾನ ಭಾರತದಲ್ಲಿ ಬಹುಪಯೋಗಿಬಲ್ಲುದು ಎಂದು ಬೈದು ಸಂಸ್ಥೆ ಹೇಳಿದೆ.

English summary
Baidu company has used AI in China to find nearly 9,700 missing people and also help visually-impaired people. Its successes can be replicated in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X