ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆಕ್ಸಿಕೊ ತಲುಪಿದ ಬಾದಲ್ ನಂಜುಂಡಸ್ವಾಮಿ ಸೃಜನಶೀಲತೆ

|
Google Oneindia Kannada News

Recommended Video

Badal Nanjudaswamy :ಮೆಕ್ಸಿಕೋದಲ್ಲಿ ಮರುಸೃಷ್ಟಿಯಾಯ್ತು ಬಾದಲ್ ನಂಜುಂಡಸ್ವಾಮಿ ಕಲೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ಬಿಬಿಎಂಪಿಗೆ ಚುರುಕು ಮುಟ್ಟಿಸಲೆಂದು ಗಗನಾಯಾತ್ರಿಯಂತೆ ವೇಷ ಧರಿಸಿ ನಗರದ ಕಿತ್ತುಹೋದ ರಸ್ತೆಯ ಮೇಲೆ ವ್ಯಕ್ತಿಯೊಬ್ಬ ಓಡಾಡಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಹಿಂದೆ ಇದ್ದದ್ದು ಕರ್ನಾಟಕದ ಹೆಮ್ಮೆಯ ಕಲಾವಿದ ಬಾದಲ್ ನಂಜುಡಸ್ವಾಮಿ.

ಬಾದಲ್ ನಂಜುಡಸ್ವಾಮಿ ಅವರ ಈ ವಿಡಿಯೋ ದೇಶ-ವಿದೇಶಗಳಲ್ಲಿ ಭಾರಿ ಜನಪ್ರಿಯವಾಗಿತ್ತು. ದೇಶ-ವಿದೇಶಗಳಲ್ಲಿ ಕೆಟ್ಟ ರಸ್ತೆಯ ವಿರುದ್ಧ ಸ್ಥಳೀಯ ಆಡಳಿತವನ್ನು ಎಚ್ಚರಿಸಲು ಬಾದಲ್ ನಂಜುಡಸ್ವಾಮಿ ಅವರ ವಿಡಿಯೋವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕೆ ಹೊಸ ಉದಾಹರಣೆ ಮೆಕ್ಸಿಕೊ.

ಬಿಬಿಎಂಪಿ ಮಾನ ಹರಾಜು ಹಾಕಿದ ಬಾದಲ್ ನಂಜುಂಡಸ್ವಾಮಿ ಯಾರು?ಬಿಬಿಎಂಪಿ ಮಾನ ಹರಾಜು ಹಾಕಿದ ಬಾದಲ್ ನಂಜುಂಡಸ್ವಾಮಿ ಯಾರು?

ಮೆಕ್ಸಿಕೊ ದೇಶದ ರಸ್ತೆಗಳೂ ನಮ್ಮ ದೇಶದ ರಸ್ತೆಗಳಂತೆಯೇ ದುರವಸ್ಥೆಯಲ್ಲಿವೆ. ಹಾಗಾಗಿ ಅಲ್ಲಿನ ಸಂಸ್ಥೆ ಬೊವೆಡಾ ಸೆಲೆಸ್ಟಿ ಎಂಬ ಸ್ಥಳೀಯ ಸಂಸ್ಥೆ ಬಾದಲ್ ನಂಜುಡಸ್ವಾಮಿ ಅವರ ವಿಡಿಯೋ ದಿಂದ ಪ್ರೇರಣೆಗೊಂಡು ಗಗನಯಾತ್ರಿಯ ವೇಷ ಧರಿಸಿ ಗುಂಡಿ ತುಂಬಿದ ರಸ್ತೆಗಳಲ್ಲಿ ನಡೆದಿದ್ದಾರೆ.

Badal Nanjudaswamy Astronaut Video Recreated in Mexico

ಮೆಕ್ಸಿಕೋ ದ ವಿಡಿಯೋವನ್ನು ಬಾದಲ್ ನಂಜುಂಡಸ್ವಾಮಿ ಅವರೇ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮಾಡುವ ಮುನ್ನಾ ಬೊವೆಡಾ ಸೆಲೆಸ್ಟಿ ಸಂಸ್ಥೆಯು ಬಾದಲ್ ನಂಜುಡಸ್ವಾಮಿ ಅವರನ್ನು ಫೇಸ್‌ಬುಕ್‌ ಮೂಲಕ ಸಂಪರ್ಕಿಸಿ ಅನುಮತಿ ಪಡೆದುಕೊಂಡಿದೆ. ಮೆಕ್ಸಿಕೊ ಮಾತ್ರವಲ್ಲದೆ, ದೇಶ-ವಿದೇಶದ ಹಲವೆಡೆಯಿಂದ ಬಾದಲ್ ನಂಜುಡಸ್ವಾಮಿ ಅವರಿಗೆ ಮನವಿಗಳು ಬರುತ್ತಿವೆಯಂತೆ.

ವೈರಲ್ ವಿಡಿಯೋ: ಬೆಂಗಳೂರು ಗಗನಯಾನಿ ಚಂದ್ರಯಾನ ಯಶಸ್ವಿವೈರಲ್ ವಿಡಿಯೋ: ಬೆಂಗಳೂರು ಗಗನಯಾನಿ ಚಂದ್ರಯಾನ ಯಶಸ್ವಿ

ಬಾದಲ್ ಅವರ ಈ ವಿಡಿಯೋ ಭಾರಿ ಜನಪ್ರಿಯತೆ ಗಳಿಸಿತ್ತು. ಬಿಬಿಸಿ ಸೇರಿದಂತೆ ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ಬಾದಲ್ ಅವರ ವಿಡಿಯೋ ಬಗ್ಗೆ ವರದಿ ಮಾಡಿದ್ದವು.

English summary
Artist Badal Nanjudaswamy's video of astronaut walking on Bengaluru roads recreated in Mexico.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X