ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಿಂದ ಆಸ್ಟ್ರೇಲಿಯಾಗೆ ತೆರಳಿದರೆ 5 ವರ್ಷ ಜೈಲು ಶಿಕ್ಷೆ!

|
Google Oneindia Kannada News

ನವದೆಹಲಿ, ಮೇ 1: ಭಾರತದಿಂದ ಆಸ್ಟ್ರೇಲಿಯಾಗೆ ಹೋದವರು ಕನಿಷ್ಠ 5 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಭಾರತದಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾವು ಭಾರತದಿಂದ ಬರುವವರಿಗೆ ನಿರ್ಬಂಧ ಹೇರಿದೆ.

ಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧಕೋವಿಡ್ 19: ಭಾರತದಿಂದ ಪ್ರಯಾಣಿಸುವವರಿಗೆ ಅಮೆರಿಕ ನಿರ್ಬಂಧ

ಒಂದೊಮ್ಮೆ ಆಸ್ಟ್ರೇಲಿಯಾಗೆ ಬಂದರೆ 5 ವರ್ಷ ಜೈಲು ಶಿಕ್ಷೆ ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಿದೆ. ಸೂಚನೆ ಕೊಟ್ಟಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಸರ್ಕಾರ ಇನ್ನೂ ಕಠಿಣ ಕ್ರಮವನ್ನು ಕೈಗೊಂಡಿದೆ.

Australians Arriving From Covid-Hit India Could Face 5 Years Jail, Fine

ವಿದೇಶಗಳಿಂದ ಆಸ್ಟೇಲಿಯಾಕ್ಕೆ ಮರಳುವ ಪ್ರಜೆಗಳು 14 ದಿನಗಳಲ್ಲಿ ಭಾರತಕ್ಕೆ ಭೇಟಿ ನೀಡಿದ್ದರೆ ಅವರಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಮುಂದಾಗಿದೆ. ಕೊರೊನಾ ಪೀಡಿತ ಭಾರತದಿಂದ ಆಸ್ಟ್ರೇಲಿಯಾಕ್ಕೆ ತೆರಳಿದರೆ 5 ವರ್ಷಗಳ ಜೈಲು ಶಿಕ್ಷೆ ಇಲ್ಲವೇ 66 ಸಾವಿರ ಡಾಲರ್​ಗೂ ಹೆಚ್ಚಿನ ದಂಡವನ್ನು ವಿಧಿಸಲು ಚಿಂತನೆ ನಡೆದಿದೆಯಂತೆ.

3 ವಾರಗಳ ಹಿಂದೆಯೇ ಭಾರತದ ಜೊತೆ ವಿಮಾನ ಸಂಪರ್ಕವನ್ನು ಆಸ್ಟ್ರೇಲಿಯಾ ಕಡಿದುಕೊಂಡಿದೆ. ಆದರೆ ಭಾರತಕ್ಕೆ ಭೇಟಿ ನೀಡಿರುವ ಆಸ್ಟ್ರೇಲಿಯಾ ಪ್ರಜೆಗಳು ಇಲ್ಲಿಂದ ದುಬೈ, ಲಂಡನ್​ನಂತ ದೇಶಗಳಿಗೆ ತೆರಳಿ ಅಲ್ಲಿಂದ ಆಸ್ಟ್ರೇಲಿಯಾಗೆ ಸಂಚರಿಸುತ್ತಿದ್ದಾರೆ.

ಆಸ್ಟ್ರೇಲಿಯಾ ಸರ್ಕಾರದ ಅನುಮತಿಯೂ ಇಲ್ಲ. ಆದರೆ ಬೇರೆ ದಾರಿ ಹಿಡಿದಿರುವ ಕೆಲವರು ಭಾರತದಿಂದ ಬೇರೆ ದೇಶಗಳಿಗೆ ತೆರಳಿ, ಅಲ್ಲಿಂದ ವಿಮಾನದ ಮೂಲಕ ಆಸ್ಟ್ರೇಲಿಯಾಗೆ ಹೋಗುತ್ತಿದ್ದಾರೆ.

ಇದರಿಂದ ಭಾರತದ ಸೋಂಕು ನಮ್ಮ ದೇಶಕ್ಕೆ ಬರುತ್ತಿದೆ ಎಂದು ಆಸ್ಟ್ರೇಲಿಯಾ ಸರ್ಕಾರ ಕುಪಿತಗೊಂಡಿದೆ. ಹೀಗಾಗಿ ಆಸ್ಟ್ರೇಲಿಯಾಗೆ ಮರಳುವ ಪ್ರಜೆಗಳು 14 ದಿನಗಳೊಳಗೆ ಭಾರತಕ್ಕೆ ಭೇಟಿ ನೀಡಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

English summary
Australian residents and citizens who have been in India within 14 days of the date they plan to return home will be banned from entering Australia as of Monday and those who disobey will face fines and jail, government officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X