ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಂಡಿಗೆ ಎದೆಕೊಡುವ ಮುನ್ನ ಕೊನೆ ಆಸೆ ತೀರಿಸಿಕೊಂಡ

By Shami
|
Google Oneindia Kannada News

ಕ್ಯಾನ್ಬೆರಾ, ಏ 29 : ನೇಣುಗಂಬದ ಹಗ್ಗ ಜಗ್ಗುವುದಕ್ಕೆ ಮುಂಚೆ "ನಿನ್ನ ಕೊನೆಯ ಆಸೆ ಏನು?" ಎಂದು ಅವರನ್ನು ಕೇಳುವುದುಂಟು. ನನ್ನ ತಾಯಿ, ತಂದೆಯನ್ನು ನೋಡಬೇಕೆಂದೋ, ಒಂದು ಲೋಟ ಹಾಲು ಕುಡಿಯಬೇಕೆಂದೋ ಅಥವಾ ಚಿಕನ್ ಬಿರಿಯಾನಿ ತಿನ್ನಬೇಕೆಂದೋ.. ಏನೋ ಒಂದು ಆಸೆಯನ್ನು ಆತ/ಅವಳು ಹೇಳುವುದುಂಟು.

ಆದರೆ, ಈ ಆಸಾಮಿಗೆ ಅಂಥ ಯಾವ ಆಸೆಯೂ ಇದ್ದಂತೆ ಕಾಣುವುದಿಲ್ಲ. ಯಾಕಂದರೆ ಸಾಯುವ ಮೂರು ದಿನಕ್ಕೆ ಮುಂಚೆ ತನ್ನ ಕೊನೆ ಆಸೆಯನ್ನು ಈಡೇರಿಸಿಕೊಂಡಿದ್ದಾನೆ. ಅವನ ಹೆಸರು ಆಂಡ್ರ್ಯೂ ಚಾನ್. 400 ಕೋಟಿ ರೂಪಯ್ಯ ಬೆಲೆಬಾಳುವ 8.2 ಕಿಲೋ ಹೆರಾಯಿನ್ ಅನ್ನು ಇಂಡೋನೇಷಿಯಾಗೆ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದ.

Australian smuggler Chan marries before execution and fired

ಆ ಘಟನೆ ನಡೆದದ್ದು 2005 ಇಸವಿಯಲ್ಲಿ. ಆನಂತರ ನ್ಯಾಯಾಲಯದಲ್ಲಿ ಸಾಕಷ್ಟು ವಿಚಾರಣೆಗಳು ನಡೆದು ಅಂತಿಮವಾಗಿ ಚಾನ್ (31) ಅಪರಾಧಿ ಎಂದು ಸಾಬೀತಾಯಿತು. ಅವನಿಗೆ ಮರಣದಂಡನೆ ವಿಧಿಸಲಾಗಿದೆ. ಸಾವು ಆತನನ್ನು ಕೈಬೀಸಿ ಕರೆಯುತ್ತಿದೆ. ಮರಣದಂಡನೆಗೆ ಗುರಿಯಾಗಿರುವವರನ್ನು ಇಂಡೋನೇಷಿಯದಲ್ಲಿ ಗುಂಡಿಟ್ಟು ಕೊಲ್ಲಲಾಗುತ್ತದೆ.

ಅದು ಹಾಗಿರಲಿ. ಚಾನ್ ಕೊನೆಯ ಆಸೆ ಅದೇನೋ ಗೊತ್ತಿಲ್ಲ. ಆದರೆ, ಮೊನ್ನೆ ಸೋಮವಾರ ಮದುವೆಯಾದ. ತನ್ನ ದೀರ್ಘಕಾಲದ ಪ್ರೇಯಸಿ ಫೆಬ್ಯಂತಿ ಹೆರೆವಿಲಳನ್ನು ವರಿಸಿದ. ಆಪ್ತ ಸ್ನೇಹಿತರು, ನೆಂಟರಿಷ್ಟರು ಭಾಗವಹಿಸಿದ್ದ ಮದುವೆ ಬಂದೀಖಾನೆಯಲ್ಲಿ ಸಂತಸದಿಂದ ನೆರವೇರಿತು ಅಂತ ಚಾನ್ ನ ಸಹೋದರ ಮೈಖೇಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದನು.

Australian smuggler Chan marries before execution and fired

ಚಾನ್ ನನ್ನು ಇಂಡೋನೇಷಿಯಾದ ನುಸಕಂಬಂಗನ್ ದ್ವೀಪದಲ್ಲಿರುವ ಬೇಸಿ ಕಾರಾಗೃಹದಲ್ಲಿ ಇಡಲಾಗಿದೆ. ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಅಪರಾಧಿಯಾಗಿರುವ ಮಯೂರನ್ ಸುಕುಮಾರನ್ ಅಲ್ಲದೆ ನಾನಾ ಬಗೆಯ ಅಪರಾಧ ಎಸಗಿ ಮರಣದಂಡನೆಗೆ ಗುರಿಯಾಗಿರುವ ಇತರ ಎಂಟು ಜೈಲುವಾಸಿಗಳ ಜತೆ ಚಾನ್ ಕೂಡ ಸಾವಿಗೆ ಸಿದ್ಧನಾಗಿದ್ದಾನೆ. ಎಬಿಸಿ ವಾರ್ತಾ ಸಂಸ್ಥೆಯ ಪ್ರಕಾರ, ಈ ಒಂಬತ್ತು ಮಂದಿಯನ್ನು ಈ ವಾರದಲ್ಲಿ ಯಾವತ್ತೋ ಒಂದು ದಿನ ಮುಗಿಸಲಾಗುತ್ತದೆ ಎಂದು ಈ ಸುದ್ದಿ ಬರೆಯುವ ಹೊತ್ತಿಗೆ, ಅರೆ, ಚಾನ್ ಇನ್ನಿಲ್ಲ!

ಆಸ್ಟ್ರೇಲಿಯಾದಿಂದ ಮಾದಕ ವಸ್ತು ಕಳ್ಳ ಸಾಗಾಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಕಳ್ಳಸಾಗಾಣಿಕೆದಾರರನ್ನು ನಡೆಸಿಕೊಳ್ಳುವ ಇಂಡೋನೇಷ್ಯಾದ ರೀತಿನೀತಿ ಬಗ್ಗೆ ಆಸ್ಟ್ರೇಲಿಯಾ ಅಸಮಾಧಾನಗೊಂಡಿದೆ. ಹೀಗಾಗಿ ಈ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿಕೊಂಡಿದೆ.

English summary
Australian drug smuggler has married his fiancee at an Indonesian prison ahead of his execution. But, much to the ire of Australian government, heroin smuggler Andrew Chan and 8 others fired to death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X