ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರ್ಮುಡಾ ಟ್ರಯಾಂಗಲ್‌ನಲ್ಲಿ ಅಗೋಚರ ಶಕ್ತಿ ಇಲ್ಲ: ವಿಜ್ಞಾನಿ ಕಾರ್ಲ್ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?

|
Google Oneindia Kannada News

ನವದೆಹಲಿ, ಮೇ. 09: ಬರ್ಮುಡಾ ಟ್ರಯಾಂಗಲ್.. ಈ ಪದ ಕೇಳಿದ ಕೂಡಲೇ ಅದೆಷ್ಟೋ ವಿಜ್ಞಾನಿಗಳ ಎದೆ ಬಡಿತ ಜೋರಾಗುತ್ತದೆ. ಹೌದು ಬರ್ಮುಡಾ ಟ್ರಯಾಂಗಲ್ ನಡೆದಿರುವ ಅವಘಡಗಳನ್ನು ನೋಡಿದರೆ ಎಂಥವರಿಗೂ ಒಂದ್ಸಲ ಭಯ ಆಗುತ್ತದೆ. ಈ ಬರ್ಮುಡಾ ಟ್ರಯಾಂಗಲ್ ಮೇಲೆ ಹಾದು ಹೋಗಿರುವ ಅದೆಷ್ಟೋ ವಿಮಾನಗಳು, ಹಡಗುಗಳು ಕಣ್ಮರೆಯಾಗಿದ್ದು, ಇವತ್ತಿಗೂ ಪತ್ತೆಯಾಗಿಲ್ಲ. ಬರ್ಮುಡಾ ಟ್ರಾಯಾಂಗಲ್ ನಲ್ಲಿ ಯಾವುದೋ ಅಗೋಚರ ಶಕ್ತಿ ಅಡಗಿದೆ ಎಂದೇ ಜಗತ್ತು ಭಾವಿಸಿದೆ. ಏಲಿಯನ್ ಗಳ ಉಪಟಳ ಇರಬಹುದು ಎಂದು ಕೆಲವರು ನಂಬಿದ್ದಾರೆ. ಕಳೆದ 70 ವರ್ಷಗಳಿಂದ ನಿಗೂಢವಾಗಿದ್ದ ಬರ್ಮಡಾ ಟ್ರಯಾಂಗಲ್ ಮಿಸ್ಟ್ರಿಯನ್ನು ಆಸ್ಟ್ರೇಲಿಯಾ ಮೂಲದ ವಿಜ್ಞಾನಿ ಪರಿಹರಿಸಿದ್ದಾರೆ!

ಏನಿದು ಬರ್ಮುಡಾ ಟ್ರಯಾಂಗಲ್:

ಏನಿದು ಬರ್ಮುಡಾ ಟ್ರಯಾಂಗಲ್:

ದೆವ್ವಗಳ ಟ್ರಯಾಂಗಲ್ ಎಂದೇ ಬರ್ಮುಡಾ ಟ್ರಯಾಂಗಲ್ ಖ್ಯಾತಿ ಗಳಿಸಿದೆ. ಉತ್ತರ ಅಂಟ್ಲಾರ್ಟಿಕ್ ಸಾಗರದಲ್ಲಿದೆ. ಪ್ಲೊರಿಡಾ, ಬರ್ಮುಡಾ, ಪುರೆಟೋ ರಿಕಾ ನಡುವೆ ಇರುವ ತ್ರಿಕೋನಾಕಾರದ ಈ ಪ್ರದೇಶವನ್ನು ಬರ್ಮುಡಾ ಟ್ರಯಾಂಗಲ್ ಎಂದು ಕರೆಯುತ್ತಾರೆ. ಈ ಬರ್ಮುಡಾ ಟ್ರಯಾಂಗಲ್ ಮಿಸ್ಟರಿ ಬಗ್ಗೆ ಜನರಿಗೆ ಗೊತ್ತಾಗಿದ್ದು 1950 ರಿಂದ ಈಚೆಗೆ. ಸಮುದ್ರದಲ್ಲಿ ನಡೆಯುವ ಈ ಅಗೋಚರ ಶಕ್ತಿಯ ಮೂಲ ಕಾರಣವನ್ನು ಯಾರೂ ಪತ್ತೆ ಮಾಡಲು ಈವರೆಗೂ ಸಾಧ್ಯವಾಗಿರಲಿಲ್ಲ. ಯಾಕೆಂದರೆ ಈ ಬರ್ಮುಡಾ ಟ್ರಯಾಂಗಲ್ ಮೇಲೆ ಹಾದು ಹೋದ ವಿಮಾನಗಳಾಗಲೀ ಅಥವಾ ಹಡಗುಗಳು ಆಗಲೀ ಒಂದು ವಾಪಸು ಸಿಕ್ಕಿಲ್ಲ. ಎಲ್ಲಿ ಹೋದವು ಎಂಬ ಸುಳಿವು ಕೂಡ ಸಿಕ್ಕಿಲ್ಲ. ಹೀಗಾಗಿ ಬರ್ಮುಡಾ ಟ್ರಯಾಂಗಲ್ ಎಂದರೆ ನಾವಿಕರು, ಪೈಲಟ್ ಗಳು ಭಯ ಬೀಳುತ್ತಾರೆ. ಈ ಬರ್ಮುಡಾ ಟ್ರಯಾಂಗಲ್ ಸುಮಾರು 70 ವರ್ಷಗಳಿಂದ ನಿದ್ದೆಗೆಡಿಸಿದ್ದು ಕೂಡ ವಾಸ್ತವ.

ಕಾಣೆಯಾದ ಪ್ಲೈಟ್ ಗಳ ಸುಳಿವು ಇಲ್ಲ:

ಕಾಣೆಯಾದ ಪ್ಲೈಟ್ ಗಳ ಸುಳಿವು ಇಲ್ಲ:

1844 ರಲ್ಲಿ ಎಚ್‌ಎಂಎಸ್ ಜುನೋ ಎಂಬ ಹಡಗು ಈ ಬರ್ಮುಡಾ ಟ್ರಯಾಂಗಲ್ ನಲ್ಲಿ ಕಣ್ಮರೆಯಾಗಿತ್ತು. 1918 ರಲ್ಲಿ ಯುಎಸ್ಎಸ್ ಸೈಕ್ಲಾಪ್ಸ್ ಹಡಗು ಕೂಡ ಬರ್ಮುಡಾ ಟ್ರಯಾಂಗಲ್ ನಲ್ಲಿ ನಿಗೂಢವಾಗಿ ಕಣ್ಮರೆಯಾಗಿತ್ತು. 1919 ರಲ್ಲಿ ಡೈಮಂಡ್ ಶೋಲಾಸ್ ಎಂಬ ಹಡಗು ಕೂಡ ನಿಗೂಢವಾಗಿ ಕಣ್ಮರೆಯಾಗಿತ್ತು. 1945 ರಲ್ಲಿ ಫ್ಲೈಟ್ 19 ಬರ್ಮುಡಾ ಟ್ರಯಾಂಗಲ್ ನಲ್ಲಿ ಹಾದು ಹೋಗುವಾಗ ಮಿಸ್ಸಿಂಗ್ ಆಗಿತ್ತು. 1948 ರಲ್ಲಿ ಸ್ಟಾರ್ ಟೈಗರ್ ಅಂಡ್ ಸ್ಟಾರ್ ಏರಿಯಲ್ ಎಂಬ ವಿಮಾನ ಕಣ್ಮರೆಯಾಗಿತ್ತು. 1948 ರಲ್ಲಿ ಡೊಗಲಾಸ್ ಡಿಸಿ - 3 ಎಂಬ ಪ್ಲೈಟ್ ಕಣ್ಮರೆಯಾಗಿತ್ತು. 2017 ರಲ್ಲಿ ಟರ್ಕಿಯ ಟಿಕೆ183, Mu -2B ಎರ್ ಬಸ್ ಸೇರಿದಂತೆ ಬರೋಬ್ಬರಿ ಹದಿನೇಳಕ್ಕೂ ಹೆಚ್ಚು ಪ್ಲೈಟ್ ಗಳು ಕಣ್ಮರೆಯಾಗಿವೆ. ಇಲ್ಲಿಯವರೆಗೂ ಈ ಹಡಗುಗಳು ಆಗಲೀ, ಫ್ಲೈಟ್ ಗಳು ಆಗಲಿ ಸಿಕ್ಕಿಲ್ಲ. ಎನಾದವೂ ಎಂಬ ಸುಳಿವು ಪತ್ತೆಯಾಗಿಲ್ಲ.

ಅಗೋಚರ ಶಕ್ತಿಯ ಹಿಂದಿನ ರೋಚಕ ಕಥೆಗಳು:

ಅಗೋಚರ ಶಕ್ತಿಯ ಹಿಂದಿನ ರೋಚಕ ಕಥೆಗಳು:

ಬರ್ಮುಡಾ ಟ್ರಯಾಂಗಲ್ ನಲ್ಲಿ ಸಂಭವಿಸಿರುವ ದುರಂತಗಳ ಬಗ್ಗೆ ಅನೇಕರು ಸಂಶೋಧನೆ ಮಾಡಿದ್ದಾರೆ. ಕೆಲವರು ಇಲ್ಲಿ ಏನೋ ಸೂಪರ್ ನ್ಯಾಚುರಲ್ ಪವರ್ ಇದೆ. ಕಣ್ಣಿಗೆ ಕಾಣದ ಅಗೋಚರ ಶಕ್ತಿಯೊಂದು ಕಾರ್ಯ ನಿರ್ವಹಿಸುತ್ತಿದೆ ಎಂಬ ವಾದ ಹುಟ್ಟುಕೊಂಡಿತು. ಇದರ ಬೆನ್ನಲ್ಲೇ ಅಲ್ಲಿ ಏನೋ ಮ್ನಾಗ್ನೆಟಿಕ್ ಪೋಲ್‌ಗಳಿವೆ. ಅಲ್ಲಿ ಯಾವುದೇ ಹಡಗು, ವಿಮಾನ ಹೋದರೂ ಮ್ಯಾಗ್ನೆಟಿಕ್ ಪೋಲ್‌ಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತವೆ ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದರು. ಇನ್ನೂ ಕೆಲವರು ಇದು ಮಾನವ ನಿರ್ಮಿತ ದುರಂತ ಎಂದೇ ಬಣ್ಣಿಸಿದ್ದರು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅಧ್ಯಯನ ನಡೆಸಿದ ವಿಜ್ಞಾನಿಗಳು, ಇದು ಪ್ರತಿಕೂಲ ಪರಿಣಾಮದಿಂದ ಆಗುತ್ತಿರುವ ದುರಂತಗಳು. ಇಲ್ಲಿ ಯಾವುದೇ ಸೂಪರ್ ನ್ಯಾಚುರಲ್ ಪವರ್ ಇಲ್ಲ ಎಂಬ ವಾದಗಳನ್ನು ಮುಂದಿಟ್ಟರು. ಏನೇ ಆದರೂ ಅಲ್ಲಿ ದುರಂತಗಳು ನಡೆಯುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ.

 ಯಾವುದೇ ಅಗೋಚರ ಶಕ್ತಿ ಇಲ್ಲ

ಯಾವುದೇ ಅಗೋಚರ ಶಕ್ತಿ ಇಲ್ಲ

ಸಿಡ್ನಿ ವಿಶ್ವವಿದ್ಯಾಲಯದ ವಿಜ್ಞಾನಿ ಕಾರ್ಲ್ ಕ್ರುಸೇಜೆಲ್ನಿಕಿ ಅವರು ಬರ್ಮಡಾ ಟ್ರಯಾಂಗಲ್ ಬಗ್ಗೆ ಹೊಸ ವಾಖ್ಯಾನ ನೀಡಿದ್ದಾರೆ. 70 ವರ್ಷಗಳ ನಂತರ ಬರ್ಮುಡಾ ಟ್ರಯಾಂಗಲ್‌ನಲ್ಲಿ ಯಾವುದೇ ಅಗೋಚರ ಶಕ್ತಿಯೂ ಇಲ್ಲ ಟ್ರಯಾಂಗಲ್ ಬಗ್ಗೆ ಹೊಸ ವಿವರಣೆ ನೀಡಿದ್ದಾರೆ. ಇವರ ಪ್ರಕಾರ ಬರ್ಮುಡಾ ಟ್ರಯಾಂಗಲ್‌ನಲ್ಲಿ ಯಾವುದೇ ಅಗೋಚರ ಶಕ್ತಿಯೂ ಇಲ್ಲ. ಅಲ್ಲಿ ಏಲಿಯನ್ ಗಳ ದಾಳಿಯೂ ಆಗುವುದಿಲ್ಲ. ಅಲ್ಲಿ ಅಗ್ನಿಯ ಕ್ರಿಸ್ಟಲ್ ಗಳು ಇಲ್ಲ. ಇನ್ನು ಈ ಜಾಗದಲ್ಲಿ ಅನೇಕ ಪ್ಲೈಟ್ ಗಳು ಕಣ್ಮರೆಯಾಗಿದ್ದು, ಅದಕ್ಕೆ ಅಗೋಚರ ಶಕ್ತಿ ಕಾರಣವಲ್ಲ. ಮಾವನ ನಿರ್ಮಿತ ದುರಂತ, ಕೆಟ್ಟ ಹವಮಾನ ಬಿಟ್ಟು ಬೇರೆ ಏನೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜ್ಞಾನಿ ಕಾರ್ಲ್ ಅವರ ಅನ್ವೇಷಣೆ ಪ್ರಕಾರ, ಬರ್ಮಡಾ ಟ್ರಯಾಂಗಲ್ ಅವಘಡಗಳ ಹಿಂದೆ ಯಾವುದೇ ಅಗೋಚರ ಶಕ್ತಿಯಿಲ್ಲ. ಅದರ ಹಿಂದೆ ಇರುವುದು ಕೇವಲ ಪ್ರತಿಕೂಲ ಪರಿಣಾಮ ಮತ್ತು ಈ ಹಿಂದೆ ಮಾನವ ನಿರ್ಮಿತ ಸಮಸ್ಯೆ ಎಂದು ಕಾರಣ ಕೊಟ್ಟಿದ್ದಾರೆ. ಬರ್ಮಡಾ ಟ್ರಯಾಂಗಲ್ ದುರಂತ ಅಸಹಜವಾದುದು ಅಲ್ಲ. ಅಮೆರಿಕಾದಷ್ಟು ವಿಸ್ತಾರ ಹೊಂದಿರುವ ಸಮುದ್ರದ ವಾತಾವರಣ ಪ್ರತಿಕೂಲದಿಂದ ಕೂಡಿರುವುದೇ ಕಾರಣ. ಇದು ಸಮಭಾಜಕ ವೃತ್ತದ ಸಮೀಪದಲ್ಲಿದೆ. ವಿಶ್ವದಲ್ಲಿ ಕಾಣೆಯಾಗುತ್ತಿರುವ ಅಂಶಕ್ಕೆ ಹೋಲಿಸಿದ್ರೆ ಬರ್ಮುಡಾ ಟ್ರಯಾಂಗಲ್ ನಲ್ಲಿ ಕಣ್ಮರೆಯಗುತ್ತಿರುವ ಅಂಕಿಗೂ ಸಮಾನವಾಗಿಯೇ ಇದೆ ಎಂದು ಹಳಿದ್ದಾರೆ. ಕ್ಲಾರ್ಕ್ ಪ್ರಕಾರ ಬರ್ಮುಡಾ ಟ್ರಯಂಗಲ್ ದುರಂತಗಳ ಹಿಂದೆ ಯಾವುದೇ ಸೂಪರ್ ನ್ಯಾಚುರಲ್ ಪವರ್ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

English summary
Bermuda Triangle Mystery Solved: An Australian scientist Karl Kruszelnicki declare that the Bermuda Triangle enigma has been solved.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X